-ಜಿಲ್ಲಾಧಿಕಾರಿ ಇಕ್ರಂ ಶರೀಫ್ ಅವರಿಗೆ ಶಾಸಕ ಎಂ.ವೈ. ಪಾಟೀಲ ಮನವಿ
-----ಕನ್ನಡಪ್ರಭ ವಾರ್ತೆ ಅಫಜಲಪುರ
ತಾಲೂಕಿನಲ್ಲಿ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿರುವ ಕುಡಿಯುವ ನೀರಿನ ಬಿಕ್ಕಟ್ಟನ್ನು ಗಮನದಲ್ಲಿಟ್ಟುಕೊಂಡು, ಜಿಲ್ಲಾಧಿಕಾರಿ ಇಕ್ರಂ ಶರೀಫ್ ಅವರಿಗೆ ಶಾಸಕ ಎಂ.ವೈ. ಪಾಟೀಲ ಮನವಿ ಸಲ್ಲಿಸಿದ್ದಾರೆ.ಕ್ಷೇತ್ರದಲ್ಲಿ ಮಳೆ ಕೊರತೆಯಿಂದ ಬೋರ್‌ವೆಲ್‌ಗಳು, ಬಾವಿಗಳು ಸಂಪೂರ್ಣ ಒಣಗಿದ್ದು, ಭೀಮಾ ನದಿಯೂ ನೀರಿಲ್ಲದೇ ಬರಿದಾಗಿರುವ ಕಾರಣ ಜನರು ಮತ್ತು ಜಾನುವಾರುಗಳು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಭೀಮಾ ನದಿಯನ್ನು ಅವಲಂಬಿಸಿರುವ ನೂರಾರು ಗ್ರಾಮಗಳ ಕುಡಿಯುವ ನೀರಿನ ಯೋಜನೆಗಳು ಸಂಕಷ್ಟಕ್ಕೆ ಸಿಲುಕಿದ್ದು, ಪರಿಸ್ಥಿತಿ ದಿನೇ ದಿನೇ ಗಂಭೀರವಾಗುತ್ತಿದೆ ಎಂದು ಶಾಸಕರು ಆತಂಕ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಭೀಮಾ ನದಿಯ ನೀರನ್ನು ತಡೆಹಿಡಿದು ಜಲಾಶಯಗಳನ್ನು ತುಂಬಿಸಿಕೊಳ್ಳುತ್ತಿರುವುದರಿಂದ ಗಡಿಭಾಗದ ಕರ್ನಾಟಕದ ಗ್ರಾಮಗಳಿಗೆ ನೀರಿನ ಕೊರತೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ನಾರಾಯಣಪುರ ಜಲಾಶಯದಿಂದ 2 ಟಿಎಂಸಿ ನೀರನ್ನು ತಕ್ಷಣ ಬಿಡುಗಡೆ ಮಾಡಿ, ಇಂಡಿ ಶಾಖಾ ಕಾಲುವೆ ಹಾಗೂ ಡಿಸ್ಟ್ರಿಬ್ಯೂಟರ್‌ಗಳ ಮೂಲಕ ದೇವ ಗಾಣಗಾಪುರ, ಘತ್ತರಗಾ, ಸೊನ್ನ ಬ್ಯಾರೇಜ್ ಸೇರಿದಂತೆ ಅಫಜಲಪುರ ಕ್ಷೇತ್ರದ ನೀರಿನ ಅಭಾವ ಎದುರಿಸುತ್ತಿರುವ ಗ್ರಾಮಗಳಿಗೆ ನೀರು ಹರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಸಿಂದಗಿ ತಾಲೂಕಿನ ಬಗಲೂರು ಡಿಸ್ಟ್ರಿಬ್ಯೂಟರ್-11 ಮತ್ತು 13 ಮೂಲಕ ಘತ್ತರಗಾವರೆಗೆ ಹಾಗೂ IBC CH-84 ಕಿ.ಮೀ. ಬಳಗಾನೂರ ಎಸ್ಕೇಪ್‌ನಿಂದ ಮಿರಗಿ ಹಳ್ಳದ ಮೂಲಕ ಸೊನ್ನ ಜಲಾಶಯಕ್ಕೆ ನೀರು ಹರಿಸುವ ವ್ಯವಸ್ಥೆ ಕಲ್ಪಿಸಿದರೆ ಸಾವಿರಾರು ಜನರು ಹಾಗೂ ಜಾನುವಾರುಗಳಿಗೆ ಅನುಕೂಲವಾಗಲಿದೆ ಎಂದು ಶಾಸಕರು ತಿಳಿಸಿದರುಪೋಟೊಅಫಜಲಪುರದಲ್ಲಿ ತಾಲೂಕಿನಲ್ಲಿ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿರುವ ಕುಡಿಯುವ ನೀರಿನ ಬಿಕ್ಕಟ್ಟನ್ನು ಗಮನದಲ್ಲಿಟ್ಟುಕೊಂಡು, ಜಿಲ್ಲಾಧಿಕಾರಿ ಇಕ್ರಂ ಶರೀಫ್ ಅವರಿಗೆ ಶಾಸಕ ಎಂ.ವೈ. ಪಾಟೀಲ ಮನವಿ ಸಲ್ಲಿಸಿದ್ದಾರೆ.