ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಪಾಶ್ಚಿಮಾತ್ಯ ಪ್ರಭಾವದಿಂದಾಗಿ ದೇಶದಲ್ಲಿ ಅವಿಭಕ್ತ ಕುಟುಂಬಗಳು ಮಾಯವಾಗಿ ವಿಭಕ್ತ ಕುಟುಂಬಗಳು ಹೆಚ್ಚಾಗಿವೆ. ಮಾನವ ವಿದ್ಯಾವಂತನಾದಂತೆಲ್ಲಾ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಾಗುತ್ತಿವೆ ಎಂದು ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಪಿ.ಎನ್. ಕೇಶವರೆಡ್ಡಿ ಆತಂಕ ವ್ಯಕ್ತಪಡಿಸಿದರು.ಸೋಮವಾರ ತಮ್ಮ 89ನೇ ಜನ್ಮದಿನಾಚರಣೆ ಪ್ರಯುಕ್ತ ತಾಲೂಕಿನ ಸುಲ್ತಾನ ಪೇಟೆಯಲ್ಲಿರುವ ದ್ವಾರಕ ಮಾಯಿ ವೃದ್ಧಾಶ್ರಮದಲ್ಲಿನ ವೃದ್ಧರಿಗೆ ಹೋಳಿಗೆ ಊಟದ ವ್ಯವಸ್ಥೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಸಚಿವ ಸ್ಥಾನ ಕೇಳಲ್ಲತಮ್ಮ ಪುತ್ರ ಹಾಗೂ ಸಂಸದ ಡಾ.ಕೆ. ಸುಧಾಕರ್ ರವರನ್ನು ಪ್ರಧಾನಿಮೋದಿಯವರು ಸಚಿವ ಸಂಪುಟದಲ್ಲಿ ಡಾ.ಸುಧಾಕರ್‌ಗೆ ಸ್ಥಾನ ನೀಡಲಿ ಎಂದು ನಾನು ಹೇಳುವುದಿಲ್ಲ. ಏಕೆಂದರೆ ಹಲವಾರು ಬಾರಿ ಗೆದ್ದಿರುವ ಹಿರಿಯರು ಇದ್ದಾರೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸೇರಿದಂತೆ ಐದು ಜನರಿಗೆ ಸಚಿವ ಪದವಿ ನೀಡಿದ್ದಾರೆ. ಡಾ.ಸಿ.ಎನ್. ಮಂಜುನಾಥ್ ರವರಿಗೂ ಸಚಿವ ಸ್ಥಾನ ನೀಡಿಲ್ಲ. ಆವಶ್ಯಕತೆ ಬಿದ್ದರೆ ಮತ್ತು ಸಚಿವ ಸ್ಥಾನಕ್ಕೆ ಸೂಕ್ತ ಎನಿಸಿದರೆ ಮಂತ್ರಿ ಮಾಡಲಿ ಎಂದು ಹೇಳಿದರು.ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಚಿಕ್ಕಗರಿಗರೆಡ್ಡಿ, ಗಿರೀಶ್ ಚಿಕ್ಕಗೆರಿಗರೆಡ್ಡಿ, ನಗರಸಭೆ ಮಾಜಿ ಅಧ್ಯಕ್ಷ ಆನಂದಬಾಬುರೆಡ್ಡಿ, ನಗರಸಭಾ ಮಾಜಿ ಸದಸ್ಯರಾದ ಕೇಶವ, ಮಹಾಕಾಳಿ ಬಾಬು, ನಗರಸಭಾ ಸದಸ್ಯ ಯತೀಶ್, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ, ಅನು ಆನಂದ್, ಮಧು ಚಂದ್ರ, ಗಡ್ಡಂ ನಾಗರಾಜ್, ಅನ್ನದಾನಿ ಸತೀಶ್, ನಂದಿ ರಮೇಶ್,ರಂಗಣ್ಣ, ಶ್ರೀನಿವಾಸ್ ಮತ್ತಿತರರು ಇದ್ದರು.