ಅನುಗ್ರಹ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ

| Published : Aug 17 2025, 01:32 AM IST

ಸಾರಾಂಶ

ಅನುಗ್ರಹ ವಿದ್ಯಾಸಂಸ್ಥೆ ಅಧ್ಯಕ್ಷ ಅಥಿತ್ ಉಪಸ್ಥಿತಿಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಮ್ಯಾಗ್ದಲಿನ್ ಪಿರೇರಾ ಧ್ವಜರೋಹಣ ನೆರವೇರಿಸಿದರು. ಆರ್‌ಎಸ್‌ಎಸ್ ಗ್ರಾಮ ವಿಕಾಸ್ ಪ್ರಾಂತ ಟೋಲಿ ಹಾಗೂ ಕಸಾಪ ಕೇಂದ್ರ ಸಮಿತಿ ಸದಸ್ಯರು ಹಾಗೂ ಅಂಕಣಕಾರ ಡ್ಯಾನಿ ಫಿರೇರಾ ಅವರು ಸ್ವಾತಂತ್ರ್ಯದ ಹೋರಾಟದಲ್ಲಿ ಭಾರತೀಯರ ತ್ಯಾಗ, ಬಲಿದಾನ, ಮಾತೆಯರ ಪ್ರೋತ್ಸಾಹ ಹಾಗೂ ಅವರಲ್ಲಿದ್ದ ಕಿಚ್ಚು, ಅನುಭವಿಸಿದ ಹಿಂಸೆ ಹಾಗೂ ಯುವಕರಲ್ಲಿ ಅಗತ್ಯವಾಗಿ ಇರಬೇಕಾದ ಮಾತೃಭೂಮಿಯ ತುಡಿತ ಮತ್ತು ದೇಶ ಸೇವೆಯ ಬಗ್ಗೆ ಸುದೀರ್ಘವಾಗಿ ಮಾತನಾಡಿ, ಎಚ್ಚರಿಕೆಯಿಂದ ಇರಬೇಕಾದ ವಿಷಯಗಳ ಕುರಿತು ಜಾಗೃತಿ ಮೂಡಿಸಿ, ಅಗತ್ಯ ಸಲಹೆ ಹಾಗೂ ಮಾರ್ಗದರ್ಶನ ನೀಡಿದರು.

ಹೊಳೆನರಸೀಪುರ: ತಾಲೂಕಿನ ಹಳ್ಳಿಮೈಸೂರಿನ ಅನುಗ್ರಹ ವಿದ್ಯಾಸಂಸ್ಥೆ ಆವರಣದಲ್ಲಿ 79ನೇ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆಯು ವಿದ್ಯಾರ್ಥಿಗಳ ಶಿಸ್ತುಬದ್ಧ ಕವಾಯತು ಹಾಗೂ ವಾದ್ಯಘೋಷದೊಂದಿಗೆ ಅದ್ಧೂರಿಯಾಗಿ ನಡೆಯಿತು.

ಅನುಗ್ರಹ ವಿದ್ಯಾಸಂಸ್ಥೆ ಅಧ್ಯಕ್ಷ ಅಥಿತ್ ಉಪಸ್ಥಿತಿಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಮ್ಯಾಗ್ದಲಿನ್ ಪಿರೇರಾ ಧ್ವಜರೋಹಣ ನೆರವೇರಿಸಿದರು. ಆರ್‌ಎಸ್‌ಎಸ್ ಗ್ರಾಮ ವಿಕಾಸ್ ಪ್ರಾಂತ ಟೋಲಿ ಹಾಗೂ ಕಸಾಪ ಕೇಂದ್ರ ಸಮಿತಿ ಸದಸ್ಯರು ಹಾಗೂ ಅಂಕಣಕಾರ ಡ್ಯಾನಿ ಫಿರೇರಾ ಅವರು ಸ್ವಾತಂತ್ರ್ಯದ ಹೋರಾಟದಲ್ಲಿ ಭಾರತೀಯರ ತ್ಯಾಗ, ಬಲಿದಾನ, ಮಾತೆಯರ ಪ್ರೋತ್ಸಾಹ ಹಾಗೂ ಅವರಲ್ಲಿದ್ದ ಕಿಚ್ಚು, ಅನುಭವಿಸಿದ ಹಿಂಸೆ ಹಾಗೂ ಯುವಕರಲ್ಲಿ ಅಗತ್ಯವಾಗಿ ಇರಬೇಕಾದ ಮಾತೃಭೂಮಿಯ ತುಡಿತ ಮತ್ತು ದೇಶ ಸೇವೆಯ ಬಗ್ಗೆ ಸುದೀರ್ಘವಾಗಿ ಮಾತನಾಡಿ, ಎಚ್ಚರಿಕೆಯಿಂದ ಇರಬೇಕಾದ ವಿಷಯಗಳ ಕುರಿತು ಜಾಗೃತಿ ಮೂಡಿಸಿ, ಅಗತ್ಯ ಸಲಹೆ ಹಾಗೂ ಮಾರ್ಗದರ್ಶನ ನೀಡಿದರು.

ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆಯಲ್ಲಿ ಹಳ್ಳಿಮೈಸೂರಿನ ಗ್ರಾಮಸ್ಥರು ಭಾಗವಹಿಸಿ ಪ್ರಶಂಸಿದರು. ಗ್ರಾಮದ ಸಮ್ರಾ ಎಂಜಿನಿಯರಿಂಗ್ ವರ್ಕ್ಸ್ ಮಾಲೀಕ ಎಚ್.ಎಸ್.ಸೈಯದ್ ಫಾರೂಕ್ ಅವರು ಸ್ವಾತಂತ್ರ್ಯೋತ್ಸವ ಪ್ರಯುಕ್ತ ತೇಜಸ್ ಯುದ್ಧ ವಿಮಾನದ ಮಾದರಿ ತಯಾರಿಸಿ, ಸಾರ್ವಜನಿಕರಿಗೆ ಉಪಹಾರದ ವ್ಯವಸ್ಥೆ ಮಾಡುವ ಮೂಲಕ ದೇಶಪ್ರೇಮ ಮೆರೆದರು.