ಸಾರಾಂಶ
ಕುದೂರು: ಕಂಚುಗಲ್ ಬಂಡೆ ಮಠದ ಶ್ರೀ ಸಿದ್ದಗಂಗಾ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಹಳೇ ವಿದ್ಯಾರ್ಥಿಗಳ ಸಂಘದ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.
ಕುದೂರು: ಕಂಚುಗಲ್ ಬಂಡೆ ಮಠದ ಶ್ರೀ ಸಿದ್ದಗಂಗಾ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಹಳೇ ವಿದ್ಯಾರ್ಥಿಗಳ ಸಂಘದ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.
ಶಾಲೆಯ 1963ನೇ ಸಾಲಿನ ವಿದ್ಯಾರ್ಥಿಯಾಗಿದ್ದ ಗುಂಡಾಭಟ್ಟರು ಸ್ವಾತಂತ್ರ್ಯ ದಿನಾಚರಣೆಯ ಮಹತ್ವ ಹಾಗೂ ಶ್ರೀ ಶಿವಕುಮಾರಸ್ವಾಮೀಜಿಗಳ ಸಮಾಜ ಸೇವೆಯನ್ನು ಸ್ಮರಿಸಿದರು.ಸಂಘದ ಅಧ್ಯಕ್ಷ ಸುನೀಲ್ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದು ಶಾಲೆ ಮತ್ತು ಪೋಷಕರಿಗೆ ಕೀರ್ತಿ ತರುವಂತೆ ಸಲಹೆ ನೀಡಿದರು.
ಹಳೇ ವಿದ್ಯಾರ್ಥಿಗಳಾದ ಪಾಲನೇತ್ರಯ್ಯ ಮತ್ತು ಗುರುಶಾಂತಮೂರ್ತಿ ಮಾತನಾಡಿ, ಶಾಲೆ ಮತ್ತು ಗ್ರಾಮಗಳ ನಡುವಿನ ಸಮನ್ವಯತೆಯ ಅವಶ್ಯಕತೆಯನ್ನು ವಿವರಿಸಿದರು.ಈ ಸಂದರ್ಭದಲ್ಲಿ 2024-25ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಪ್ರಿಯಾಂಕ, ಅಜಯ್ , ರಾಹುಲ್ ಲಕ್ಕಪ್ಪ, ಅನುಷಾ, ಪ್ರಜ್ವಲ್ ಮತ್ತು ವಿದ್ಯಾ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸಂಘದ ಪದಾಧಿಕಾರಿಗಳಾದ ಶಿವಪ್ರಕಾಶ್ , ಲೀಲಾ ಮೂರ್ತಿ, ಸಿದ್ದರಾಜು, ಹರೀಶ್ ,ಮಂಜು ಆರಾದ್ಯ, ದೇವರಾಜು, ನಟರಾಜು, ಸೌಮ್ಯ, ಯೋಗೀಶ್ , ನಂದೀಶ್ , ನರಸಿಂಹರಾಜು, ಸುಮಲತಾ, ರಾಜೇಶ್ , ಕುಸುಮಾ, ಜ್ಯೋತಿ ಮತ್ತಿತರರು ಉಪಸ್ಥಿತರಿದ್ದರು.17ಕೆಆರ್ ಎಂಎನ್ 9.ಜೆಪಿಜಿ
ಕಂಚುಗಲ್ ಬಂಡೆ ಮಠದ ಶ್ರೀ ಸಿದ್ದಗಂಗಾ ಗ್ರಾಮಾಂತರ ಪ್ರೌಢಶಾಲೆಯಲ್ಲಿ ನಡೆದ 79ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚುಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.----------------------