ಜೀವನದಲ್ಲಿ ಎದುರಿಸಿದ ಅಸಮಾನತೆ ಹಾಗೂ ಅನ್ಯಾಯದ ವಿರುದ್ಧ ಅಂಬೇಡ್ಕರ ಅವರು ಗೆಲುವು ಸಾಧಿಸಿದರು. ಪ್ರಜಾಪ್ರಭುತ್ವದ ಮೌಲ್ಯಗಳಿಂದ ಹಾಗೂ ಸಂವಿಧಾನ ನೀಡಿದ ಅವಕಾಶಗಳಿಂದ ವಿಶ್ವದಲ್ಲಿ ಭಾರತವು ಪ್ರಜ್ವಲಿಸುತ್ತಿದೆ.
ಗಜೇಂದ್ರಗಡ: ಭಾರತದ ಬಹುಸಂಖ್ಯಾತರ ಪಾಲಿನ ಭಾಗ್ಯವಿಧಾತರಾದ ಡಾ. ಬಿ.ಆರ್. ಅಂಬೇಡ್ಕರ್ ಅವರು ಬರೆದ ಸಂವಿಧಾನದಿಂದ ವಿಶ್ವದಲ್ಲಿ ದೇಶವು ಪ್ರಜ್ವಲಿಸುತ್ತಿದೆ ಎಂದು ಡಾ. ಬಿ.ಆರ್. ಅಂಬೇಡ್ಕರ್ ಸೇವಾ ಸಮಿತಿ ಅಧ್ಯಕ್ಷ ಬಸವರಾಜ ಬಂಕದ ತಿಳಿಸಿದರು.
ಸ್ಥಳೀಯ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಶನಿವಾರ ಸೇವಾ ಸಮಿತಿಯಿಂದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ೬೯ನೇ ಪರಿನಿರ್ವಾಣ ದಿನದ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.ಜೀವನದಲ್ಲಿ ಎದುರಿಸಿದ ಅಸಮಾನತೆ ಹಾಗೂ ಅನ್ಯಾಯದ ವಿರುದ್ಧ ಅಂಬೇಡ್ಕರ ಅವರು ಗೆಲುವು ಸಾಧಿಸಿದರು. ಪ್ರಜಾಪ್ರಭುತ್ವದ ಮೌಲ್ಯಗಳಿಂದ ಹಾಗೂ ಸಂವಿಧಾನ ನೀಡಿದ ಅವಕಾಶಗಳಿಂದ ವಿಶ್ವದಲ್ಲಿ ಭಾರತವು ಪ್ರಜ್ವಲಿಸುತ್ತಿದೆ. ಸಂವಿಧಾನ ರಕ್ಷಣೆಯ ಜತೆಗೆ ಅಂಬೇಡ್ಕರ ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ಬಲಿಷ್ಠ ಭಾರತದ ನಿರ್ಮಾಣಕ್ಕೆ ಅಣಿಯಾಗಬೇಕಿದೆ ಎಂದರು.ಪುರಸಭೆ ಮಾಜಿ ಸದಸ್ಯ ರೂಪಲೇಶ್ ರಾಠೋಡ, ಮುಖಂಡರಾದ ಅಶೋಕ ಹೊಸಮನಿ, ಶಿವಪ್ಪ ಛಲವಾದಿ, ಶರಣಪ್ಪ ಛಲವಾದಿ, ಶಿವಪ್ಪ ಪಮ್ಮಾರ, ಕೃಷ್ಣಾ ರಾಠೋಡ, ಮಾರುತಿ ರಾಠೋಡ, ಸುರೇಶ ಹೊಸಮನಿ ಇತರರು ಇದ್ದರು.
ಕಳಕಪ್ಪ ಬಂಡಿ ಗೃಹ ಕಚೇರಿ: ಬಿಜೆಪಿ ರೋಣ ಮಂಡಲದ ವತಿಯಿಂದ ಪಟ್ಟಣದ ಮಾಜಿ ಸಚಿವ ಕಳಕಪ್ಪ ಬಂಡಿ ಅವರ ಗೃಹ ಕಚೇರಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ೬೯ನೇ ಪರಿನಿರ್ವಾಣ ದಿನ ನಿಮಿತ್ತ ಡಾ. ಬಿ.ಆರ್. ಅಂಬೇಡ್ಕರ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಈ ವೇಳೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಪ್ಪ ಚವ್ಹಾಣ, ಬಾಳಾಜಿರಾವ್ ಭೋಸ್ಲೆ, ರಾಜೇಂದ್ರ ಘೋರ್ಪಡೆ, ದುರಗಪ್ಪ ಸಂದಿಮನಿ, ದುರಗಪ್ಪ ಪೂಜಾರ, ಮಹಾಂತೇಶ ಪೂಜಾರ ಇತರರು ಇದ್ದರು.