ಇಂದ್ರಾಳಿಯಲ್ಲಿರುವ ಮಾಹೆ ಸಂಯೋಜಿತ ಉಡುಪಿಯ ಯಕ್ಷಗಾನ ಕೇಂದ್ರ ಸಲಹಾ ಸಮಿತಿಯಿಂದ ಮಾಹೆಯ ಸಹ ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಅವರ 85ನೇ ಜನ್ಮ ದಿನೋತ್ಸವ ಆಚರಿಸಲಾಯಿತು.
ಉಡುಪಿ ಇಂದ್ರಾಳಿಯಲ್ಲಿರುವ ಮಾಹೆ ಸಂಯೋಜಿತ ಉಡುಪಿಯ ಯಕ್ಷಗಾನ ಕೇಂದ್ರ ಸಲಹಾ ಸಮಿತಿಯಿಂದ ಮಾಹೆಯ ಸಹ ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಅವರ 85ನೇ ಜನ್ಮ ದಿನೋತ್ಸವ ಆಚರಿಸಲಾಯಿತು.ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ ಶೆಟ್ಟಿ ಸ್ವಾಗತಿಸಿದರು. ಅಧ್ಯಕ್ಷ ಪಳ್ಳಿ ಕಿಶನ್ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿ ಶುಭ ಹಾರೈಸಿದರು. ಸಮಿತಿ ಸದಸ್ಯ ಭುವನ ಪ್ರಸಾದ ಹೆಗ್ಡೆ ಸನ್ಮಾನ ಪತ್ರ ವಾಚಿಸಿ, ಲಿಂಗ ಸಮಾನತೆಯಲ್ಲಿ ವಿಶ್ವದಲ್ಲೇ ಪ್ರಥಮ ಸ್ಥಾನ ಪಡೆದ ಮಾಹೆಯನ್ನು ಅಭಿನಂದಿಸಿದರು. ನಂತರ ಯಕ್ಷಸ್ಮರಣಿಕೆ, ಶಾಲು, ಹಾರ, ಪೇಟ ತೊಡಿಸಿ ಡಾ. ಬಲ್ಲಾಳರನ್ನು ಅಭಿನಂದಿಸಲಾಯಿತು. ಸನ್ಮಾನಕ್ಕೆ ಕೃತಜ್ಞತೆ ವ್ಯಕ್ತಪಡಿಸಿದ ಡಾ. ಬಲ್ಲಾಳರು, ಮಾಹೆ ಸದಾ ಯಕ್ಷಗಾನ ಕೇಂದ್ರವನ್ನು ಪ್ರೋತ್ಸಾಹಿಸುತ್ತದೆ ಎಂದರು. ಸಲಹಾ ಸಮಿತಿ ಸದಸ್ಯರಾದ ಮೀನಾ ಲಕ್ಷಣಿ. ಡಾ. ಶೈಲಜಾ ಭಟ್, ವಿಶ್ವನಾಥ ಶೆಣೈ, ಪ್ರೊ. ಎಸ್. ವಿ. ಉದಯ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಮಂಜುನಾಥ ಮಯ್ಯ ವಂದಿಸಿದರು.