ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರ
ಕುಶಾಲನಗರ ಜೆಸಿಐ 2024 ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.ಜೆಸಿಐ ವಲಯ 14 ರ ಅಧ್ಯಕ್ಷೆ ಆಶಾ ಜೈನ್ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜೆಸಿಐ ನಲ್ಲಿ ತೊಡಗಿಸಿಕೊಳ್ಳುವ ಸದಸ್ಯರು ಸಂಸ್ಥೆಯಲ್ಲಿ ಹೆಚ್ಚು ಕ್ರಿಯಾಶೀಲರಾದಲ್ಲಿ ವೈಯಕ್ತಿಕ ಜೀವನದಲ್ಲಿ ಕೂಡ ಯಶಸ್ಸು ಗಳಿಸಲು ಸಾಧ್ಯ. ಜೆಸಿಇ ವೇದಿಕೆಯಲ್ಲಿ ದೊರೆಯುವ ತರಬೇತಿ, ಆತ್ಮವಿಶ್ವಾಸ ನಮ್ಮಲ್ಲಿ ಹೊಸ ಬದಲಾವಣೆ ತರುತ್ತದೆ. ಜೆಸಿಐನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಹ ಚಟುವಟಿಕೆಗಳನ್ನು ಹಮ್ಮಿಕೊಳ್ಳುವಂತಾಗಬೇಕಿದೆ ಎಂದರು.ನೂತನ ಸಾಲಿನ ಅಧ್ಯಕ್ಷರಾಗಿ ಬಿ.ಜಗದೀಶ್, ಕಾರ್ಯದರ್ಶಿಯಾಗಿ ತೇಜ ದಿನೇಶ್ ಅವರನ್ನು ನಿಯೋಜಿಸಲಾಯಿತು.ವಲಯ ಉಪಾಧ್ಯಕ್ಷ ರಾಕೇಶ್ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು.ನೂತನ ಅಧ್ಯಕ್ಷ ಬಿ.ಜಗದೀಶ್ ಮಾತನಾಡಿ, ಈ ಸಾಲಿನಲ್ಲಿ ಜೆಸಿಐ ಹೆಮ್ಮೆಪಡುವಂತಹ ಅತ್ಯುತ್ತಮ ಚಟುವಟಿಕೆಗಳ ಹಮ್ಮಿಕೊಳ್ಳಲು ಬದ್ಧನಾಗಿದ್ದೇನೆ ಎಂದರು.ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಜೆಸಿಐನ ಮಾಜಿ ರಾಷ್ಟ್ರೀಯ ಉಪಾಧ್ಯಕ್ಷ ವಿಕಾಸ್ ಗುಗ್ಲಿಯ, ವಿಶೇಷ ಆಹ್ವಾನಿತರಾದ ಜೆಸಿಐ ಅಲುಮಿನಿ ಕ್ಲಬ್ ಪ್ರಮುಖ ಎಂ.ಡಿ.ರಂಗಸ್ವಾಮಿ ಮಾತನಾಡಿದರು.ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿ ಸೇರ್ಪಡೆಗೊಳಿಸಲಾಯಿತು. ವಿಶೇಷ ಸಾಧನೆ ತೋರಿದ ಪ್ರಮುಖರನ್ನು ಗೌರವಿಸಲಾಯಿತು.ಜೆಸಿಐ ವಲಯ 14ರ ಜೂನಿಯರ್ ಜೆಸಿ ವಿಭಾಗದ ನಿರ್ದೇಶಕ ಪ್ರಶಾಂತ್ ಕೆ.ಡಿ, ಕುಶಾಲನಗರ ಜೆಸಿಐ ನಿಕಟ ಪೂರ್ವ ಅಧ್ಯಕ್ಷ ರಜನಿಕಾಂತ್, ಪ್ರಮುಖರಾದ ಪ್ರವೀಣ್, ಪುನಿತ್, ಕವಿತಾ ಪ್ರವೀಣ್, ಎಚ್.ಕೆ.ಕುಮಾರ್, ಅಮೃತ್ ರಾಜ್, ಲೋಕೇಶ್ ಸಾಗರ್, ಸುಜಯ್ ಮತ್ತಿತರರು ಇದ್ದರು.
ವಿದ್ಯಾರ್ಥಿ ವೇತನಕ್ಕೆ ಆನ್ಲೈನ್ ಅರ್ಜಿ ಆಹ್ವಾನ2023-24ನೇ ಸಾಲಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕೆ ssp.postmatric.karnataka.gov. ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ.ಸೋಮವಾರಪೇಟೆ ತಾಲೂಕು ವ್ಯಾಪ್ತಿಯ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು ವಿದ್ಯಾರ್ಥಿಯ ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ (ಆದಾಯ ಮಿತಿ 2.50 ಲಕ್ಷ), ವಿದ್ಯಾರ್ಥಿಯ ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿ, ಆಧಾರ್ ಕಾರ್ಡ್ ಪ್ರತಿ (ಕಡ್ಡಾಯವಾಗಿ ಆಧಾರ್ ಸೀಡಿಂಗ್ ಮತ್ತು ಎನ್‌ಪಿಸಿಐ ಮ್ಯಾಪಿಂಗ್ ಮಾಡಿಸಿರತಕ್ಕದು), ಚಾಲ್ತಿಯಲ್ಲಿರುವ ಆಧಾರ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ (ಕಡ್ಡಾಯವಾಗಿ ಹಿಂದಿನ ವರ್ಷದ ಮಾರ್ಕ್ಸ್ ಕಾರ್ಡ್ ಪ್ರತಿ, ಇತ್ತೀಚಿನ ಭಾವಚಿತ್ರ, ಅಧ್ಯಯನ/ ಬೋನಾಫೈಡ್ ಪ್ರಮಾಣ ಪತ್ರ(ಮೆಟ್ರಿಕ್ ನಂತರದ ಕೋರ್ಸ್ಗಳಿಗೆ), ಶುಲ್ಕ ರಶೀದಿ(ಮೆಟ್ರಿಕ್ ನಂತರದ ಕೋರ್ಸ್ಗಳಿಗೆ), ತಂದೆ/ತಾಯಿ/ ಪೋಷಕರ ಆಧಾರ್ ಪ್ರತಿ ಒದಗಿಸಬೇಕು.ಆದಾಯ ಮಿತಿ 2.50 ಲಕ್ಷಕ್ಕಿಂತ ಒಳಗಿರುವ ಸಿಇಟಿ ಮೂಲಕ ಎಂಬಿಬಿಎಸ್, ಬಿಡಿಎಸ್, ಬಿಇ, ಬಿಟೆಕ್, ಬಿಆರ್‌ಕೆ ಕೋರ್ಸ್‌ಗಳಿಗೆ ಆಯ್ಕೆಯಾಗುವ ವಿದ್ಯಾರ್ಥಿಗಳು ಮಾತ್ರ ಸರ್ಕಾರಿ, ಅನುದಾನಿತ, ಅನುದಾನರಹಿತ, ಖಾಸಗಿ ಮತ್ತು ಡೀಮ್ಡ್ ವಿಶ್ವವಿದ್ಯಾನಿಲಯದ ಕಾಲೇಜು/ ಸಂಸ್ಥೆಗಳಲಿ ಪ್ರವೇಶ ಪಡೆದಿದ್ದಲ್ಲಿ ಅಂತಹ ವಿದ್ಯಾರ್ಥಿಗಳು ಶೇ.100 ರಷ್ಟು ಆಯಾಯ ಸಂಸ್ಥೆಗಳಿಗೆ ನಿಗದಿಪಡಿಸಿದ ಶುಲ್ಕ ಪಡೆಯಲು ಅರ್ಹರಿರುತ್ತಾರೆ.ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಫೆ.14 ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಮಾ. 31 ಕೊನೆಯ ದಿನವಾಗಿದೆ. ಅರ್ಜಿ ಸಲ್ಲಿಸಬೇಕಾದ ವೆಬ್‌ಸೈಟ್ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕೆ ssp.postmatric.karnataka.gov. ವೆಬ್‌ಸೈಟ್ ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಸಂಖ್ಯೆ 080-44554455 ಮತ್ತು ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಸೋಮವಾರಪೇಟೆ ಅವರ ಕಚೇರಿ, ದೂ.ಸಂ. 9480843156/ 08276-281115 ನ್ನು ಸಂಪರ್ಕಿಸಬಹುದು ಎಂದು ಸೋಮವಾರಪೇಟೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.