ಅಪಾಯಕಾರಿ ಮರ, ಕೊಂಬೆ ಬಗ್ಗೆ ಮಾಹಿತಿ ಕೊಡಿ: ಪಾಲಿಕೆ

| Published : May 18 2024, 01:34 AM IST / Updated: May 18 2024, 08:42 AM IST

ಅಪಾಯಕಾರಿ ಮರ, ಕೊಂಬೆ ಬಗ್ಗೆ ಮಾಹಿತಿ ಕೊಡಿ: ಪಾಲಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ನಗರದಲ್ಲಿ ರಸ್ತೆ ಬದಿ ಒಣಗಿರುವ ಮರಗಳು ಹಾಗೂ ರೆಂಬೆ ಕೊಂಬೆಗಳ ಮಾಹಿತಿಯನ್ನು ಪಾಲಿಕೆ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಬಿಬಿಎಂಪಿ ಕೋರಿದೆ.

ಬೆಂಗಳೂರು :ನಗರದಲ್ಲಿ ರಸ್ತೆ ಬದಿ ಒಣಗಿರುವ ಮರಗಳು ಹಾಗೂ ರೆಂಬೆ ಕೊಂಬೆಗಳ ಮಾಹಿತಿಯನ್ನು ಪಾಲಿಕೆ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಬಿಬಿಎಂಪಿ ಕೋರಿದೆ.

ಒಣಗಿರುವ ಮರಗಳು ಬುಡ ಸಮೇತ ಬೀಳುತ್ತಿದ್ದು, ಮರಗಳ ಹಸಿ ರೆಂಬೆಗಳು ಸಹ ಗಾಳಿಯಿಂದ ಆಕಸ್ಮಿಕವಾಗಿ ಮುರಿದು ಬೀಳುತ್ತಿರುವುದು ವರದಿಯಾಗುತ್ತಿದೆ. ಇದರಿಂದಾಗಿ ಸಾರ್ವಜನಿಕರಿಗೆ ಹಾಗೂ ಆಸ್ತಿ ಪಾಸ್ತಿಗೆ ಹಾನಿಯಾಗುತ್ತಿದೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಈಗಾಗಲೇ ರಸ್ತೆ ಬದಿ, ಸರ್ಕಾರಿ ಜಾಗಗಳಲ್ಲಿ ಒಣಗಿರುವ, ಅಪಾಯ ಸ್ಥಿತಿಯ ಮರಗಳು ಹಾಗೂ ಒಣಗಿರುವ ರೆಂಬೆ ಕೊಂಬೆಗಳನ್ನು ಅರಣ್ಯ ವಿಭಾಗದ ವತಿಯಿಂದ ತೆರವುಗೊಳಿಸುವ ಕಾರ್ಯವನ್ನು ನಿರ್ವಹಿಸಲಾಗುತ್ತಿದೆ.

ಬೆಂಗಳೂರು ನಗರದ ಸಾರ್ವಜನಿಕರು ತಮ್ಮ ಪ್ರದೇಶಗಳಲ್ಲಿ ಒಣಗಿರುವ, ಅಪಾಯ ಸ್ಥಿತಿಯ ಮರಗಳು ಹಾಗೂ ಒಣಗಿರುವ ಅಪಾಯ ಸ್ಥಿತಿಯ ರೆಂಬೆಗಳು ಕಂಡುಬಂದಲ್ಲಿ ಬಿಬಿಎಂಪಿ ಅರಣ್ಯ ಇಲಾಖೆಯ ಅಧಿಕಾರಿಗಳಿಗಳಿಗೆ ದೂರವಾಣಿ ಮೂಲಕ (ವಾಟ್ಸ್ ಅಪ್ ಫೋಟೋ ಲಗತ್ತಿಸಿ) ಮಾಹಿತಿ ನೀಡಲು ಬಿಬಿಎಂಪಿ ಪ್ರಕಟಣೆಯಲ್ಲಿ ಕೋರಿದೆ.