ಸಾರಾಂಶ
ದೊಡ್ಡಬಳ್ಳಾಪುರ: ಬಯಲು ಸಿಮೇಯ ಜಿಲ್ಲೆಗಳಿಗೆ ರಾಜ್ಯದ ನೀರಾವರಿ ಯೋಜನೆಗಳಲ್ಲಿ ತಾರತಮ್ಯ ಮಾಡಲಾಗಿದೆ. ಕೃಷ್ಣಾ ನದಿ ನೀರು ಸೇರಿದಂತೆ ನಮ್ಮ ಪಾಲಿಗೆ ದೊರೆಯಬೇಕಿರುವ ನೀರಾವರಿ ಯೋಜನೆಗಳನ್ನು ಪಡೆಯಲು ಈಗಲಾದರೂ ಪ್ರಶ್ನೆ ಮಾಡದೇ ಹೋದರೆ ಈ ಭಾಗದ ಜನರು ಬೆಂಗಳೂರಿನ ತ್ಯಾಜ್ಯ ನೀರನ್ನೇ ನಂಬಿಕೊಂಡು ಅನಾರೋಗ್ಯಕ್ಕೆ ತುತ್ತಾಗುವ ಅಪಾಯಗಳು ಸಮೀಪದಲ್ಲೇ ಇವೆ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯರೆಡ್ಡಿ ಹೇಳಿದರು.
ಚಿಕ್ಕಬಳ್ಳಾಪುರದಲ್ಲಿ ಹಮ್ಮಿಕೊಳ್ಳಲಿರುವ ಶಾಶ್ವತ ನೀರಾವರಿ ದುಂಡು ಮೇಜಿನ ಸಭೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಬೆಳಗಾವಿ ಸೇರಿದಂದೆ ಮುಂದಿನ ವಿಧಾನಸಭಾ ಅಧಿವೇಷನಗಳಲ್ಲಿ ಬಯಲು ಸೀಮೆ ಜಿಲ್ಲೆಗಳ ಶಾಸಕರು, ವಿಧಾನ ಪರಿಷತ್ ಸದಸ್ಯರು ನಮ್ಮ ಪಾಲಿನ ನೀರಾವರಿ ಯೋಜನೆಗಳು ಹಾಗೂ ಇಲ್ಲಿನ ನೀರಿನ ರೈತರ ನೀರಿನ ಬವಣೆಗಳ ಬಗ್ಗೆ ಅಂಕಿ ಅಂಶಗಳ ಸಹಿತ ನಮ್ಮ ನೀರಿನ ಪಾಲು ಕೇಳಬೇಕಿದೆ. ಈ ಕುರಿತಂತೆ ನಮ್ಮ ಪಾಲಿನ ನೀರಾವರಿ ಯೋಜನೆಗಳ ಅಂಕಿ ಅಂಶಗಳನ್ನು ದುಂಡು ಮೇಜಿನ ಸಭೆಯಲ್ಲಿ ಮಂಡಿಸಲಾಗುವುದು ಎಂದು ಹೇಳಿದರು.ಎತ್ತಿನಹೊಳೆ ಕುಡಿಯುವ ನೀರಾವರಿ ಯೋಜನೆ ಗುತ್ತಿಗೆದಾರರು ಹಾಗೂ ರಾಜಕಾರಣಿಗಳು ತಮ್ಮ ಲಾಭಕ್ಕಾಗಿ ರೂಪಿಸಿರುವ ಯೋಜನೆಯಾಗಿದೆಯೇ ವಿನಹ ಬಯಲು ಸೀಮೆ ಜಿಲ್ಲೆಗಳ ಜನರ ನೀರಿನ ದಾಹ ನೀಗಿಸುವುದಿಲ್ಲ. ಎತ್ತಿನಹೊಳೆಯಲ್ಲಿನ ಜಲಸಂಪತ್ತಿನ ಕೊರತೆಯ ಬಗ್ಗೆ ಭಾರತೀಯ ವಿಜ್ಞಾನ ಸಂಸ್ಥೆಯ ಜಲ ತಜ್ಞರೇ ವರದಿ ನೀಡಿದ್ದಾರೆ. ಆದರೆ ಈ ವರದಿಯನ್ನು ರಾಜಕಾರಣಿಗಳು ಮರೆಮಾಚಿ ಎತ್ತಿನ ಹೊಳೆ ಯೋಜನೆ ಜಾರಿ ಮಾಡಿದ್ದಾರೆ ಎಂದು ದೂರಿದರು.
2013ರಲ್ಲೇ ಕೇಂದ್ರ ಸರ್ಕಾರ ನಗರಗಳಲ್ಲನ ತ್ಯಾಜ್ ನೀರನ್ನು ಶುದ್ಧೀಕರಿಸಿ ಬಳಸುವಾಗ ಅನುಸರಿಬೇಕಿರುವ ನಿಯಮಗಳನ್ನು ಜಾರಿಗೆ ತಂದಿದೆ. ಆದರೆ ರಾಜ್ಯ ಸರ್ಕಾರ ಈ ನಿಯಮಗಳನ್ನು ಪಾಲಿಸದೇ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಕೆ.ಸಿ.ವ್ಯಾಲಿ, ಎಚ್.ಎನ್.ವ್ಯಾಲಿ ಯೋಜನೆ ಮೂಲಕ ಬೆಂಗಳೂರಿನ ತ್ಯಾಜ್ಯ ನೀರನ್ನು ಎರಡು ಹಂತಗಳಲ್ಲಿ ಮಾತ್ರ ಶುದ್ಧೀಕರಿಸಿ ಕೆರೆಗಳಿಗೆ ತುಂಬಿಸುತ್ತಿದೆ. ಇದರ ಪರಿಣಾಮವಾಗಿಯೇ ಬೆಂಗಳೂರಿನಲ್ಲಿ ಮಾರಾಟವಾಗುತ್ತಿರುವ ಹಣ್ಣು, ತರಕಾರಿಗಳಲ್ಲಿ ಭಾರದ ಲೋಹನೆಗಳು ಇವೆ ಎಂದು ಎಪ್ರಿಯ ವರದಿ ನೀಡಿದೆ. ನವದೆಹಲಿಯ ಹಸಿರು ನ್ಯಾಯ ಮಂಡಳಿಯು ಸ್ವಯಂ ದೂರು ದಾಖಲಿಸಿಕೊಂಡು ಹಣ್ಣು, ತರಕಾರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿ ವರದಿ ನೀಡುವಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚನೆ ನೀಡಿರುವುದು ಎಂದರು.ನಮ್ಮ ರಾಜ್ಯದ ಗಡಿ ಭಾಗದ ಹಿಂದೂಪುರ, ಅಂತಪುರ ಜಿಲ್ಲೆಯ ಎಲ್ಲಾ ಗ್ರಾಮಗಳ ಕೆರೆಗಳಿಗು ಕೃಷ್ಣಾ ನದಿ ನೀರು ಹರಿಯುತ್ತಿವೆ. ಆದರೆ ಕೆಲವೇ ಕಿ.ಮೀ. ದೂರದಲ್ಲಿರುವ ನಮ್ಮೂರಿನ ಕೆರೆಗಳಿಗೆ ಮಾತ್ರ ಬೆಂಗಳೂರಿನ ತ್ಯಾಜ್ಯ ನೀರನ್ನು ತುಂಬಿಸಲಾಗುತ್ತಿದೆ. ಈ ತಾರತಮ್ಯ ನೀರಾವರಿ ಯೋಜನೆಗಳ ಬಗ್ಗೆ ಧ್ವನಿ ಎತ್ತಲೇ ಬೇಕಾದ ತುರ್ತು ಇದೆ ಎಂದರು.
ಸಭೆಯಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಮುಖಂಡರಾದ ಸಂಜೀವ್ನಾಯ್ಕ್, ಹನುಮೇಗೌಡ, ವೆಂಕಟೇಶ್, ಮುನಿಪಾಪಯ್ಯ, ಮುತ್ತೇಗೌಡ, ಹನುಮಂತರಾಯಪ್ಪ, ವಸಂತಕುಮಾರ್, ನಾರಾಯಣಸ್ವಾಮಿ ಇತರರಿದ್ದರು.25ಕೆಡಿಬಿಪಿ2-ದೊಡ್ಡಬಳ್ಳಾಪುರದಲ್ಲಿ ಶಾಶ್ವತ ನೀರಾವರಿ ದುಂಡು ಮೇಜಿನ ಸಭೆ ಪೂರ್ವಭಾವಿ ಸಮಾಲೋಚನೆ ನಡೆಯಿತು.