ಸಮಾಜದ ಸಮಸ್ಯೆಗಳು, ಜನರ ನೋವು-ನಲಿವು ಹಾಗೂ ವಿವಿಧ ಕ್ಷೇತ್ರಗಳ ಬೆಳವಣಿಗೆಗಳನ್ನು ನಿರಂತರವಾಗಿ ವರದಿ ಮಾಡುವ ಪತ್ರಕರ್ತರ ಸೇವೆಗೆ ಗೌರವ ಸೂಚಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇನ್ನರ್‌ವ್ಹೀಲ್‌ ಸಂಸ್ಥೆಯ ಸೋದರಿಯರು ಪತ್ರಕರ್ತರಿಗೆ ರಾಖಿ ಕಟ್ಟುವ ಮೂಲಕ ಸಮಾಜದ ಓರೆ-ಕೋರೆಗಳನ್ನು ಬಿಂಬಿಸುವ ಅವರ ಕಾರ್ಯ ಮತ್ತಷ್ಟು ಬಲಿಷ್ಠವಾಗಲಿ ಎಂದು ಆಶಿಸಿದರು. ರಕ್ಷಾಬಂಧನದ ಅಂಗವಾಗಿ ಹಿರಿಯ ಪತ್ರಕರ್ತರು ಇನ್ನರ್‌ವ್ಹೀಲ್‌ ಸದಸ್ಯೆಯರಿಗೆ ಶುಭ ಹಾರೈಸಿದರು. ಕಿರಿಯ ಪತ್ರಕರ್ತರು ಸದಸ್ಯೆಯರಿಂದ ಆಶೀರ್ವಾದ ಪಡೆದು ಪರಸ್ಪರ ಸಿಹಿ ಹಂಚಿಕೊಂಡು ಸಂಭ್ರಮಿಸಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಸಮಾಜದ ಆಗುಹೋಗುಗಳನ್ನು ಜನರ ಮುಂದಿಡುವ ಪತ್ರಕರ್ತರು ಹಾಗೂ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡಿರುವ ಇನ್ನರ್‌ವ್ಹೀಲ್‌ ಸಂಸ್ಥೆಯ ಸದಸ್ಯೆಯರ ನಡುವೆ ರಕ್ಷಾಬಂಧನದ ಮೂಲಕ ಸಹೋದರತ್ವದ ಬಾಂಧವ್ಯ ಬೆಸೆಯಿತು. ನಗರದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಇನ್ನರ್ ವೀಲ್ ಸಂಸ್ಥೆಯ ಸದಸ್ಯೆಯರು ಪತ್ರಕರ್ತರಿಗೆ ರಾಖಿ ಕಟ್ಟಿ ಶುಭ ಹಾರೈಸಿದರು.ಸಮಾಜದ ಸಮಸ್ಯೆಗಳು, ಜನರ ನೋವು-ನಲಿವು ಹಾಗೂ ವಿವಿಧ ಕ್ಷೇತ್ರಗಳ ಬೆಳವಣಿಗೆಗಳನ್ನು ನಿರಂತರವಾಗಿ ವರದಿ ಮಾಡುವ ಪತ್ರಕರ್ತರ ಸೇವೆಗೆ ಗೌರವ ಸೂಚಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇನ್ನರ್‌ವ್ಹೀಲ್‌ ಸಂಸ್ಥೆಯ ಸೋದರಿಯರು ಪತ್ರಕರ್ತರಿಗೆ ರಾಖಿ ಕಟ್ಟುವ ಮೂಲಕ ಸಮಾಜದ ಓರೆ-ಕೋರೆಗಳನ್ನು ಬಿಂಬಿಸುವ ಅವರ ಕಾರ್ಯ ಮತ್ತಷ್ಟು ಬಲಿಷ್ಠವಾಗಲಿ ಎಂದು ಆಶಿಸಿದರು. ರಕ್ಷಾಬಂಧನದ ಅಂಗವಾಗಿ ಹಿರಿಯ ಪತ್ರಕರ್ತರು ಇನ್ನರ್‌ವ್ಹೀಲ್‌ ಸದಸ್ಯೆಯರಿಗೆ ಶುಭ ಹಾರೈಸಿದರು. ಕಿರಿಯ ಪತ್ರಕರ್ತರು ಸದಸ್ಯೆಯರಿಂದ ಆಶೀರ್ವಾದ ಪಡೆದು ಪರಸ್ಪರ ಸಿಹಿ ಹಂಚಿಕೊಂಡು ಸಂಭ್ರಮಿಸಿದರು.ಇನ್ನರ್‌ವ್ಹೀಲ್‌ ಸಂಸ್ಥೆಯ ಅಧ್ಯಕ್ಷೆ ಶ್ವೇತಾ ಮೋಹನ್ ಮಾತನಾಡಿ, ಮಾನವ ಸಂಬಂಧಗಳಲ್ಲಿ ಸಹೋದರತ್ವಕ್ಕೆ ವಿಶೇಷ ಸ್ಥಾನವಿದೆ. ರಕ್ತ ಸಂಬಂಧವೊಂದೇ ಸಹೋದರತ್ವದ ಆಧಾರವಲ್ಲ. ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಗೌರವದಿಂದಲೂ ಸಹೋದರತ್ವದ ಬಾಂಧವ್ಯ ನಿರ್ಮಾಣವಾಗುತ್ತದೆ. ಸ್ವಾಮಿ ವಿವೇಕಾನಂದರು ಪಾಶ್ಚಾತ್ಯ ದೇಶಗಳಲ್ಲಿ ‘ಸೋದರ-ಸೋದರಿಯರೇ’ ಎಂದು ಸಂಬೋಧಿಸುವ ಮೂಲಕ ವಿಶ್ವಕ್ಕೆ ಸಹೋದರತ್ವದ ಸಂದೇಶ ಸಾರಿದ್ದರು. ಅಂತಹ ಬಾಂಧವ್ಯದ ಪ್ರತೀಕವಾದ ರಕ್ಷಾಬಂಧನವನ್ನು ಪತ್ರಕರ್ತ ಸಹೋದರರೊಂದಿಗೆ ಆಚರಿಸುತ್ತಿರುವುದು ಸಂತಸ ತಂದಿದೆ ಎಂದರು.ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಟಿ. ಆನಂದ್ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಸಹೋದರತ್ವಕ್ಕೆ ಮಹತ್ವದ ಸ್ಥಾನವಿದೆ. ಸಂಕಷ್ಟದ ಸಂದರ್ಭದಲ್ಲಿ ಸಹೋದರನ ನೆರವು ಮತ್ತು ರಕ್ಷಣೆ ದೊರೆಯುತ್ತದೆ ಎಂಬ ವಿಶ್ವಾಸ ಮಹಿಳೆಯರಲ್ಲಿ ಹಿಂದಿನಿಂದಲೂ ಇದೆ. ಪೌರಾಣಿಕ ಸಂದರ್ಭಗಳಲ್ಲಿಯೂ ಸಹೋದರತ್ವದ ಮಹತ್ವವನ್ನು ಸಾರುವ ಹಲವು ಉದಾಹರಣೆಗಳಿವೆ. ರಕ್ಷಾಬಂಧನವು ಕೇವಲ ರಾಖಿ ಕಟ್ಟುವ ಆಚರಣೆಯಾಗಿರದೆ ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ರಕ್ಷಣೆಯ ಸಂಕೇತವಾಗಿದೆ ಎಂದರು.ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್‌, ಮಾಜಿ ಅಧ್ಯಕ್ಷ ರಾಮಚಂದ್ರ, ಕಾರ್ಯದರ್ಶಿ ಸ್ವಾಮಿ, ಇನ್ನರ್‌ವ್ಹೀಲ್‌ ಸಂಸ್ಥೆಯ ಕಾರ್ಯದರ್ಶಿ ಆರತಿ ಸಂತೋಷ್, ಖಜಾಂಚಿ ರೇಖಾ, ಐಎಸ್‌ಒ ಗೀತಾ ಧರ್ಮನಾಯಕ್, ಸದಸ್ಯರಾದ ಸವಿತಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.