ಸಾರಾಂಶ
ಕೊಪ್ಪಳದಲ್ಲಿ ಇನ್ನರ್‌ವೀಲ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭ
ಕನ್ನಡಪ್ರಭ ವಾರ್ತೆ ಕೊಪ್ಪಳಸಮಾಜಮುಖಿ ಕಾರ್ಯ ಮಾಡುವುದಕ್ಕೆ ಇನ್ನರ್‌ವೀಲ್ ಅತ್ಯುತ್ತಮ ವೇದಿಕೆಯಾಗಿದೆ ಎಂದು ಭಾಗ್ಯನಗರ ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ಶಾರದಾ ಪಾನಘಂಟಿ ಅಭಿಪ್ರಾಯಪಟ್ಟರು.
ಭಾಗ್ಯನಗರದ ಪಾನಘಂಟಿ ಕಲ್ಯಾಣ ಮಂಟಪದಲ್ಲಿ ಇನ್ನರ್‌ವೀಲ್ ಕ್ಲಬ್ ವತಿಯಿಂದ ಅಭಿನಂದನಾ ಕಾರ್ಯಕ್ರಮ ಮತ್ತು ಭಾಗ್ಯನಗರ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು. ಮಹಿಳೆಯರು ಕೇವಲ ಮನೆಗೆ ಸೀಮಿತವಾಗದೆ, ಸಮಾಜಮುಖಿ ಕಾರ್ಯದಲ್ಲಿಯೂ ತೊಡಗಿಕೊಳ್ಳಬೇಕು. ಉದ್ಯೋಗ ಮಾಡುವಲ್ಲಿ ಯಶಸ್ವಿಯಾಗಿರುವ ಮಹಿಳೆಯರು ಇಂದು ಸಮಾಜಮುಖಿಯ ಕಾರ್ಯದಲ್ಲಿ ಯಶಸ್ವಿಯಾಗುತ್ತಿದ್ದಾರೆ. ಅದಕ್ಕೆ ಇನ್ನರ್‌ವೀಲ್ ಕ್ಲಬ್ ಅತ್ಯುತ್ತಮ ಅವಕಾಶ ನೀಡುತ್ತದೆ ಎಂದರು.ಜಿಲ್ಲಾ ಖಜಾಂಚಿ ಡಾ. ಪಾರ್ವತಿ ಪಲೋಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಿಳೆಯರು ಸಮಾಜದ ಜತೆ ಬೆರೆತು, ಕೌಶಲ್ಯ ಹೊರಹಾಕಲು ಹಾಗೂ ಪ್ರೀತಿ-ಸ್ನೇಹವನ್ನು ಹಂಚಲು ಸಂಘಟನಾ ಮನೋಭಾವ ಬೆಳೆಸಲು ಇಂತಹ ವೇದಿಕೆಗಳು ಅವಶ್ಯಕವಾಗಿವೆ ಎಂದರು.
ವೈದ್ಯರು ಹಾಗೂ ಸಮಾಜಮುಖಿ ವ್ಯಕ್ತಿಗಳನ್ನು ಸನ್ಮಾನಿಸಲಾಯಿತು. ಸುವರ್ಣಾ ಗಂಟಿ ಇನ್ನರ್‌ವೀಲ್ ಕ್ಲಬ್‌ನ ೨೦೨೩-೨೪ನೇ ಸಾಲಿನ ವಾರ್ಷಿಕ ವರದಿ ಓದಿದರು.ಕ್ಲಬ್‌ನ ನೂತನ ಅಧ್ಯಕ್ಷರಾಗಿ ಲಲಿತಾ ಕಬ್ಬೇರ್, ಕಾರ್ಯದರ್ಶಿಯಾಗಿ ಸಂಗೀತಾ ಕಬಾಡಿ, ಖಜಾಂಚಿಯಾಗಿ ಪದ್ಮಾವತಿ ಕಂಬಳಿ ಅಧಿಕಾರ ವಹಿಸಿಕೊಂಡರು. ಜ್ಯೋತಿ ಗೊಂಡಬಾಳ, ರೂಪಾ ಪವಾರ, ಜಯಮಾಲಾ ಶೇಡ್ಮಿ, ಶಾಂತಾ ಗೌರಿಮಠ, ರಮಾ ಅಂಟಾಳಮರದ, ಲಕ್ಷ್ಮೀ ಪಾನಘಂಟಿ, ಸುನೀತಾ ಅಂಟಾಳಮರದ, ವಿದ್ಯಾಲಕ್ಷ್ಮೀ ಹಾಗೂ ಮತ್ತಿತರರಿದ್ದರು.
ಉಚಿತ ಕೌಶಲ್ಯಾಧಾರಿತ ತರಬೇತಿಗೆ ಅರ್ಜಿ ಆಹ್ವಾನ:ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ಸಂಸ್ಥೆಯಿಂದ ಉಚಿತ ಕೌಶಲ್ಯಾಧಾರಿತ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
18ರಿಂದ 45 ವಯೋಮಾನದ ಗ್ರಾಮೀಣ ಭಾಗದ ನಿರುದ್ಯೋಗಿ ಯುವಕ, ಯುವತಿಯರಿಗಾಗಿ ಜುಲೈ ತಿಂಗಳಿನ 3ನೇ ವಾರದಲ್ಲಿ 30 ದಿನಗಳ ಪುರುಷರ ಹೊಲಿಗೆ ತರಬೇತಿ ನೀಡಲಾಗುತ್ತಿದ್ದು, ತರಬೇತಿ ಅವಧಿಯಲ್ಲಿ ಊಟ, ವಸತಿಯು ಉಚಿತವಾಗಿರುತ್ತದೆ.ಅಭ್ಯರ್ಥಿಗಳು ತಮ್ಮ ಹೆಸರು, ವಿಳಾಸಗಳನ್ನು ನೋಂದಾಯಿಸಲು ಜು. 20 ಕೊನೆಯ ದಿನವಾಗಿದ್ದು, ಮೊದಲು ಬಂದವರಿಗೆ ಹಾಗೂ ಗ್ರಾಮೀಣರಿಗೆ ಆದ್ಯತೆ ನೀಡಲಾಗುವುದು. ತರಬೇತಿಯಲ್ಲಿ ಕೌಶಲ್ಯ, ಸಾಫ್ಟ್ ಸ್ಕಿಲ್ಸ್, ಯೋಗ ತರಬೇತಿ ಹಾಗೂ ಬ್ಯಾಂಕ್‍ನಿಂದ ಸಾಲ ಪಡೆದು ಸ್ವ-ಉದ್ಯೋಗ ಪ್ರಾರಂಭಿಸಲು ಬೇಕಾಗುವ ಜ್ಞಾನ, ಸರ್ಕಾರಿ ಯೋಜನೆಗಳು ಮತ್ತು ಯೋಜನಾ ವರದಿ ತಯಾರಿಕೆ ಇತರ ಮಾಹಿತಿ ನೀಡಲಾಗುವುದು.ತರಬೇತಿಯಲ್ಲಿ ಭಾಗವಹಿಸಲು ಇಚ್ಛಿಸುವ ಆಸಕ್ತರು ನಿರ್ದೇಶಕರು, ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ಸಂಸ್ಥೆ, ಹಳಿಯಾಳ, ಉತ್ತರ ಕನ್ನಡ ಜಿಲ್ಲೆ ಈ ವಿಳಾಸಕ್ಕೆ, ದೂ.: 9980510717, 9483485489ಗೆ ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.