ಸಾರಾಂಶ
ಅರಸೀಕೆರೆ : ದೇಶದ ಗಡಿ ಭಾಗದಲ್ಲಿ ಉದ್ವಿಘ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ನಗರದ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ಲಗೇಜ್ ಸೇರಿದಂತೆ ಸೂಕ್ಷ್ಮ ಸ್ಥಳಗಳನ್ನು ರೈಲ್ವೆ ರಕ್ಷಣಾದಳ ಚಾರ್ಲಿ ಶ್ವಾನದಿಂದ ತಪಾಸಣೆ ಮಾಡಲಾಯಿತು.
ದೇಶದ ವಿವಿಧ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಅರಸೀಕೆರೆ ನಗರದ ರೈಲ್ವೆ ಜಂಕ್ಷನ್ ಪ್ರಮುಖ ಸಂಪರ್ಕ ಕೇಂದ್ರವಾಗಿದೆ. ಈ ರೈಲ್ವೆ ನಿಲ್ದಾಣ ಮೂಲಕ ಬಂದು ಹೋಗುವ ಪ್ರಯಾಣಿಕರು ಸೇರಿದಂತೆ ಲಗೇಜ್ ಮತ್ತು ಆಯಾ ಕಟ್ಟಿನ ಸ್ಥಳಗಳನ್ನು ಚಾರ್ಲಿ ಶ್ವಾನದಿಂದ ತಪಾಸಣೆಗೆ ಒಳಪಡಿಸಲಾಯಿತು.
ರೈಲ್ವೆ ನಿಲ್ದಾಣ ಫ್ಲಾಟ್ ಫಾರಂ, ಆಹಾರ ಮಾರಾಟ ಮಳಿಗೆ, ಶೌಚಾಲಯ, ಟಿಕೇಟ್ ಕೌಂಟರ್, ವಾಹನಗಳ ಪಾರ್ಕಿಂಗ್ ಸ್ಥಳ, ಪ್ರಯಾಣಿಕರ ಕಾಯ್ದಿರಿಸುವಿಕೆ ಕೊಠಡಿ ಸೇರಿದಂತೆ ಪ್ರಯಾಣಿಗಳ ಲಗ್ಗೇಜ್ ಗಳನ್ನು ಮುಂಜಾಗ್ರತಾ ಕ್ರಮವಾಗಿ ತಪಾಸಣೆ ನಡೆಸಲಾಯಿತು.
ಈ ಸಂದರ್ಭದಲ್ಲಿ ರೈಲ್ವೇ ರಕ್ಷಣಾ ದಳ ಇನ್ಸ್ಪೆಕ್ಟರ್ ರಾಕೇಶ್ ಕುಮಾರ್, ಸಬ್ ಇನ್ಸ್ಪೆಕ್ಟರ್ ಬಸವರಾಜು, ನಗರದ ಶ್ವಾನದಳ ಘಟಕದ ಹೆಡ್ ಕಾನ್ಸ್‌ಟೇಬಲ್ ಲೋಕೇಶ್ ಕುಮಾರ್ ಸೇರಿದಂತೆ ಸಿಬ್ಬಂದಿ ಭಾಗವಹಿಸಿದ್ದರು.