ಮಾಗಡಿ: ಶಾಸಕ ಬಾಲಕೃಷ್ಣ ಹಾಗೂ ಪುರಸಭೆ ಮುಖ್ಯಧಿಕಾರಿಗಳು ನಾಡಪ್ರಭು ಕೆಂಪೇಗೌಡರ ಪ್ರತಿಮೆಗೆ ಅಪಮಾನ ಮಾಡುತ್ತಿದ್ದಾರೆ ಎಂದು ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಎಂ.ಕೃಷ್ಣಮೂರ್ತಿ ಆಕ್ರೋಶ ವ್ಯಕ್ತಪಡಿಸಿದರು

ಮಾಗಡಿ: ಶಾಸಕ ಬಾಲಕೃಷ್ಣ ಹಾಗೂ ಪುರಸಭೆ ಮುಖ್ಯಧಿಕಾರಿಗಳು ನಾಡಪ್ರಭು ಕೆಂಪೇಗೌಡರ ಪ್ರತಿಮೆಗೆ ಅಪಮಾನ ಮಾಡುತ್ತಿದ್ದಾರೆ ಎಂದು ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಎಂ.ಕೃಷ್ಣಮೂರ್ತಿ ಆಕ್ರೋಶ ವ್ಯಕ್ತಪಡಿಸಿದರು.

ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್ ಜೊತೆ ಕೆಂಪೇಗೌಡ ಪ್ರತಿಮೆ ತೆರವು ಕಾರ್ಯಾಚರಣೆ ಹಿನ್ನೆಲೆಯಲ್ಲಿ ಚರ್ಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಿ ಆಸ್ಪತ್ರೆ ನಿರ್ಮಾಣದ ಹಿನ್ನೆಲೆಯಲ್ಲಿ ಪ್ರತಿಮೆ ಜಾಗದಿಂದ 500 ಮೀಟರ್ ಒಳಗೆ ಸ್ಥಳಾಂತರಿಸುವಂತೆ ಹೈಕೋರ್ಟ್‌ ಆದೇಶ ನೀಡಿದೆ. ಪ್ರತಿಮೆ ಸ್ಥಳಾಂತರಕ್ಕೆ ಪುರಸಭಾ ಮುಖ್ಯಾಧಿಕಾರಿಗಳ ಜೊತೆ ಚರ್ಚಿಸಿದ್ದು, ನ್ಯಾಯಾಲಯದ ಆದೇಶ ಪಾಲಿಸುವ ನೆಪದಲ್ಲಿ ಶಾಸಕರು, ಅಧಿಕಾರಿಗಳು ಸೇರಿ ಕೆಂಪೇಗೌಡರ ಪ್ರತಿಮೆಯನ್ನು ಮೂಲೆಯಲ್ಲಿ ಕೂರಿಸುವ ಹುನ್ನಾರ ಮಾಡುತ್ತಿರುವುದು ಸರಿಯಲ್ಲ. ಕೆಂಪೇಗೌಡರ ಪ್ರತಿಮೆಯನ್ನು ಗೌರವಯುತವಾಗಿ ಸ್ಥಳಾಂತರಿಸಿ ಎಂದು ಹೇಳಿದರೆ, ಇವರು ಕೆಂಪೇಗೌಡರಿಗೇ ಅಗೌರವ ತೋರುತ್ತಿರುವುದು ನ್ಯಾಯವೇ? ಕಳೆದ 20 ವರ್ಷಗಳ ಹಿಂದೆ ನನ್ನ ಸ್ವಂತ ಹಣದಲ್ಲಿ ಪುರಸಭೆಯ ಅನುಮತಿ ಪಡೆದು ಶಾಸಕ ಬಾಲಕೃಷ್ಣ, ಮಾಜಿ ಶಾಸಕ ಎಚ್.ಎಂ.ರೇವಣ್ಣ ಹಾಗೂ ಅನೇಕ ಗಣ್ಯರ ಸಮ್ಮುಖದಲ್ಲಿ ಪ್ರತಿಮೆ ಉದ್ಘಾಟಿಸಿದ್ದೇನೆ ಈಗ ಬೇಕಾಬಿಟ್ಟಿ ನಡೆಸಿಕೊಳ್ಳುವುದು ಒಳ್ಳೆಯ ಬೆಳವಣಿಗೆ ಎಲ್ಲ ಎಂದು ಕೃಷ್ಣಮೂರ್ತಿ ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರು ನಿರ್ಮಾಪಕ ಕೆಂಪೇಗೌಡರಿಗೆ ಮಾಗಡಿಯಲ್ಲಿ ಜಾಗವಿಲ್ಲ:

ಸುಂದರ ಪರಿಸರದಲ್ಲಿದ್ದ ಕೆಂಪೇಗೌಡರ ಪ್ರತಿಮೆಯನ್ನು ಶಾಸಕರು ಒಂದು ಮೂಲೆಯಲ್ಲಿ ಕೂರಿಸುತ್ತಿದ್ದಾರೆ. ಬೆಂಗಳೂರು ನಿರ್ಮಿಸಿದ ಮಹನೀಯರಿಗೆ ಜಾಗ ಕೊಡಲು ಪುರಸಭೆಗೆ ಯೋಗ್ಯತೆ ಇಲ್ಲ. ಅದೇ ಪುರಸಭೆ ಪ್ರತಿಮೆ ಪಕ್ಕದ ಸರ್ಕಾರಿ ಜಾಗವನ್ನು 68*70 ಅಳತೆಗೆ ಕ್ಯಾಬಿನೆಟ್ ಆದೇಶ ಎಂದು ಕೇವಲ 48 ರುಪಾಯಿಗೆ ಅಡಿ ಲೆಕ್ಕದಲ್ಲಿ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಸರ್ಕಾರಿ ಜಾಗ ನೀಡಿದೆ. 6*3 ಅಳತೆಯಲ್ಲಿ ಕೆಂಪೇಗೌಡರ ಪ್ರತಿಮೆಯನ್ನು ಮೂಲೆಯಲ್ಲಿ ನಿಲ್ಲಿಸುವ ಕೆಲಸ ಮಾಡುತ್ತಿದ್ದಾರೆ. ನೀವು ಪ್ರತಿಮೆಯನ್ನು ಸ್ಥಳಾಂತರ ಮಾಡಿ, ನಮಗೂ ಗೊತ್ತಿದೆ ಮುಂದೆ ಈಗಿರುವ ಜಾಗದಲ್ಲೇ ಕೆಂಪೇಗೌಡರನ್ನು ನಿಲ್ಲಿಸುತ್ತೇನೆ ಎಂದು ಎಚ್.ಎಂ. ಕೃಷ್ಣಮೂರ್ತಿ ಸವಾಲು ಹಾಕಿದರು.

ಒಂದು ಎಕರೆ ಜಾಗ ಕೊಡುವಂತೆ ಮನವಿ:

ಪುರಸಭೆ ಅವರು ಈಗ ಕಾಂಗ್ರೆಸ್ ಭವನಕ್ಕೆ 68*70 ಅಳತೆ ಜಾಗ ನೀಡಿದ್ದು ಅದೇ ರೀತಿ ಕೆಂಪೇಗೌಡ ಉದ್ಯಾನವನಕ್ಕೆ ಒಂದು ಎಕರೆ ಜಾಗ ನೀಡಲಿ. ಸರ್ಕಾರಕ್ಕೆ ಶಾಸಕರು ಕಟ್ಟಿರುವ ಹಣಕ್ಕಿಂತ 10 ರು. ಅಡಿಗೆ ಹೆಚ್ಚಿಗೆ ನೀಡಿ ಜಾಗ ನೀಡುತ್ತೇವೆ. ನಮಗೆ ಪ್ರತಿಮೆ ಹಾಗೂ ಉದ್ಯಾನವನ ನಿರ್ಮಾಣಕ್ಕೆ ಒಂದು ಎಕರೆ ಜಾಗ ನೀಡುವಂತೆ ಕೆಂಪೇಗೌಡ ಅಭಿವೃದ್ಧಿ ಸಮಿತಿಯಿಂದ ಪುರಸಭೆ ಮುಖ್ಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್ ಮಾತನಾಡಿ, ಆಸ್ಪತ್ರೆ ನಿರ್ಮಾಣಕ್ಕೆ 2.25 ಎಕರೆ ಜಾಗವನ್ನು ಪುರಸಭೆಯಿಂದ ಜಿಲ್ಲಾಧಿಕಾರಿಗಳ ಹೆಸರಿಗೆ ವರ್ಗಾವಣೆ ಮಾಡಿರುವುದರಿಂದ ಆ ಜಾಗದ ಮೇಲೆ ನಮಗೆ ಯಾವುದೇ ರೀತಿಯ ಹಕ್ಕು ಇಲ್ಲ. ಪ್ರತಿಮೆ ಸ್ಥಳಾಂತರಿಸಲು ನನಗೆ ಸೂಚನೆ ಬಂದಿದೆ. ಅದರಂತೆ ಎಚ್.ಎಂ.ಕೃಷ್ಣಮೂರ್ತಿ ಅವರಿಗೆ ತಿಳಿಸಿ ಪ್ರತಿಮೆಯನ್ನು ಪಕ್ಕದಲ್ಲಿ ಸ್ಥಳಾಂತರಿಸಲು ಅವಕಾಶ ಕೊಡುವಂತೆ ಪುರಸಭೆಗೆ ಕರೆದಿದ್ದೇವೆ. ಮುಂದೆ ಗುತ್ತಿಗೆದಾರರೇ ಪ್ರತಿಮೆ ಸ್ಥಳಾಂತರ ಕೆಲಸ ಮಾಡುತ್ತಾರೆ ಎಂದು ತಿಳಿಸಿದರು.

ಈ ವೇಳೆ ದಲಿತ ಮುಖಂಡ ಮಾಡಬಾಳ್ ಜಯರಾಂ, ವಾಯುಸೇನೆ ನಿವೃತ್ತ ಅಧಿಕಾರಿ ಶಿವಲಿಂಗಯ್ಯ, ಮುಖಂಡರಾದ ಕೆಂಪೇಗೌಡ, ಸಾಗರ್, ಅನಿಲ್, ರಮೇಶ್, ಆನಂದ್, ಗೋಪಿ, ಗುಂಡ,