ಹಾಸನ ವಿಶ್ವವಿದ್ಯಾಲಯದಿಂದ ಕಳೆದ ವಾರ ನಡೆದ ಕ್ರೀಡೆಗಳಲ್ಲಿ ಬೇಲೂರು ಕಾಲೇಜು ಚಾಂಪಿಯನ್‌ಶಿಪ್ ಆಗಿದ್ದು ಸಂತೋಷವಾಗಿದೆ. ಇದಕ್ಕೆ ಶ್ರಮಿಸಿದ ಕ್ರೀಡಾ ಮುಖ್ಯಸ್ಥ ಬಾಬು ಪ್ರಸಾದ್ ಮತ್ತು ಮಾರ್ಗದರ್ಶನ ನೀಡಿದ ಕಾಲೇಜು ಪ್ರಾಂಶುಪಾಲ ಡಾ. ಮಹೇಶ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ, ಕ್ರೀಡೆಯಲ್ಲಿನ ಸಾಧನೆಯಿಂದ ಸರ್ಕಾರಿ ಉದ್ಯೋಗ ಪಡೆದಿರುವ ಹತ್ತಾರು ಉದಾಹರಣೆಗಳಿವೆ. ವೈಡಿಡಿ ಕಾಲೇಜು ಪುನಃ ಚಾಂಪಿಯನ್‌ಶಿಪ್ ಪಡೆಯಲಿ ಎಂದು ಹಾರೈಸಿದರು.
ಕನ್ನಡಪ್ರಭ ವಾರ್ತೆ ಬೇಲೂರು
ಹಾಸನ ವಿಶ್ವವಿದ್ಯಾಲಯ ವತಿಯಿಂದ ಅಂತರ ಕಾಲೇಜು ವಾಲಿಬಾಲ್ ಪಂದ್ಯಾವಳಿಯು ಬೇಲೂರು ವೈಡಿಡಿ ಪ್ರಥಮ ದರ್ಜೆ ಕಾಲೇಜು ಆತಿಥ್ಯದಲ್ಲಿ ಪಟ್ಟಣದ ಜ್ಯೂನಿಯರ್ ಕಾಲೇಜು ಆವರಣದಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಮಾತನಾಡಿದ ಪುರಸಭಾ ಅಧ್ಯಕ್ಷ ಅಕ್ರಂ ಶರೀಫ್, ಕ್ರೀಡೆ ವಿದ್ಯಾರ್ಥಿಗಳ ಪಾಲಿಗೆ ಅತಿಮುಖ್ಯವಾಗಿದೆ. ಓದಿನ ಜೊತೆಗೆ ದೈಹಿಕ ಸದೃಢತೆಗೆ ಕ್ರೀಡೆ ಪ್ರಯೋಜನವಾಗುತ್ತದೆ, ಪುರಸಭೆಯಿಂದ ಉತ್ತಮ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲಾಗುತ್ತದೆ ಎಂದು ಹೇಳಿದರು. ವೈಡಿಡಿ ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಹೆಬ್ಬಾಳು ಹಾಲಪ್ಪ ಮಾತನಾಡಿ, ಹಾಸನ ವಿಶ್ವವಿದ್ಯಾಲಯದಿಂದ ಕಳೆದ ವಾರ ನಡೆದ ಕ್ರೀಡೆಗಳಲ್ಲಿ ಬೇಲೂರು ಕಾಲೇಜು ಚಾಂಪಿಯನ್‌ಶಿಪ್ ಆಗಿದ್ದು ಸಂತೋಷವಾಗಿದೆ. ಇದಕ್ಕೆ ಶ್ರಮಿಸಿದ ಕ್ರೀಡಾ ಮುಖ್ಯಸ್ಥ ಬಾಬು ಪ್ರಸಾದ್ ಮತ್ತು ಮಾರ್ಗದರ್ಶನ ನೀಡಿದ ಕಾಲೇಜು ಪ್ರಾಂಶುಪಾಲ ಡಾ. ಮಹೇಶ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ, ಕ್ರೀಡೆಯಲ್ಲಿನ ಸಾಧನೆಯಿಂದ ಸರ್ಕಾರಿ ಉದ್ಯೋಗ ಪಡೆದಿರುವ ಹತ್ತಾರು ಉದಾಹರಣೆಗಳಿವೆ. ವೈಡಿಡಿ ಕಾಲೇಜು ಪುನಃ ಚಾಂಪಿಯನ್‌ಶಿಪ್ ಪಡೆಯಲಿ ಎಂದು ಹಾರೈಸಿದರು.
ತಾಲೂಕು ಜಾನಪದ ಪರಿಷತ್ತು ಅಧ್ಯಕ್ಷ ವೈ. ಎಸ್. ಸಿದ್ದೇಗೌಡ ಮಾತನಾಡಿ, ಕ್ರೀಡೆಯು ದೈಹಿಕ ಸದೃಢತೆ, ಮಾನಸಿಕ ಆರೋಗ್ಯ ಮತ್ತು ಶಿಸ್ತನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಇವು ದೇಹವನ್ನು ಕ್ರಿಯಾಶೀಲವಾಗಿಟ್ಟು, ಆತ್ಮವಿಶ್ವಾಸ ಹೆಚ್ಚಿಸಿ, ತಂಡದ ಕೆಲಸ ಮತ್ತು ಕ್ರೀಡಾ ಮನೋಭಾವವನ್ನು ಕಲಿಸುತ್ತವೆ ಎಂದರು.ವೈಡಿಡಿ ಕಾಲೇಜು ಪ್ರಾಂಶುಪಾಲ ಡಾ. ಮಹೇಶ ಮಾತನಾಡಿ, ಬೇಲೂರು ವೈಡಿಡಿ ಪ್ರಥಮ ದರ್ಜೆ ಕಾಲೇಜು ಇತ್ತೀಚಿನ ದಿನಗಳಲ್ಲಿ ಪಿಯು ಫಲಿತಾಂಶದಲ್ಲಿ ಪ್ರಥಮ ಸ್ಥಾನ ಮತ್ತು ಕ್ರೀಡಾಕೂಟದಲ್ಲಿ ಚಾಂಪಿಯನ್ ಶಿಪ್ ಪಡೆದಿದೆ ಎಂದರು.
ಕಾರ್ಯಕ್ರಮದಲ್ಲಿ ಹಾಸನ ವಿಶ್ವವಿದ್ಯಾಲಯ ಸಂಯೋಜಕ ಪ್ರಕಾಶ್ ಕುಮಾರ್, ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ವೆಂಕಟೇಶ್, ದೈಹಿಕ ಶಿಕ್ಷಣ ನಿರ್ದೇಶಕ ಮತ್ತು ಸಂಘಟನಾ ಕಾರ್ಯದರ್ಶಿ ಬಾಬು ಪ್ರಸಾದ್, ಹಾಸನ ವಿಭಾಗ ದೈಹಿಕ ಶಿಕ್ಷಣ ಸಹ ನಿರ್ದೇಶಕರು ಚಂದ್ರನಾಯಕ್ ಜೆ.ಬಿ., ವೈಡಿಡಿ ಕಾಲೇಜು ಅಧೀಕ್ಷಕ ಕೇಶವಕಿರಣ್ ಹಾಗೂ ಬೋಧಕ, ಬೋಧಕೇತರ ಎಲ್ಲಾ ಸಿಡಿಸಿ ಸದಸ್ಯರು ಹಾಗೂ ವಿದ್ಯಾರ್ಥಿಗಳು ಇದ್ದರು.