ರೈತರಿಂದ ತುಂತುರು ಹನಿ ನೀರಾವರಿಗೆ ಆಸಕ್ತಿ

| Published : Feb 21 2024, 02:00 AM IST

ಸಾರಾಂಶ

ಸರಕಾರದಿಂದ ದೊರೆಯುವ ಸಬ್ಸಿಡಿ ಯೋಜನೆಯ ತುಂತುರು ನೀರಾವರಿ ಯೋಜನೆ ಸದುಪಯೋಗವನ್ನು ರೈತರು ಹೆಚ್ಚಾಗಿ ಪಡೆದುಕೊಳ್ಳುತ್ತಿದ್ದಾರೆ. ಇದು ಖುಷಿಯ ಸಂಗತಿ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ಯರಗಟ್ಟಿ

ಸರಕಾರದಿಂದ ದೊರೆಯುವ ಸಬ್ಸಿಡಿ ಯೋಜನೆಯ ತುಂತುರು ನೀರಾವರಿ ಯೋಜನೆ ಸದುಪಯೋಗವನ್ನು ರೈತರು ಹೆಚ್ಚಾಗಿ ಪಡೆದುಕೊಳ್ಳುತ್ತಿದ್ದಾರೆ. ಇದು ಖುಷಿಯ ಸಂಗತಿ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

ಈ ಸಂದರ್ಭದಲ್ಲಿ ಕೃಷಿ ಅಧಿಕಾರಿಗಳಾದ ಎಂ. ಜಿ. ಕಳಸಪ್ಪನವರ, ನಾಗೇಶ ವಿರಕ್ತಮಠ, ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದ್ದಬಸನ್ನವರ, ಶಿವಾನಂದ ಕರಿಗೊಣ್ಣವರ, ಮಂಜುನಾಥ ತಡಸಲೂರ, ರಫೀಕ್ ಡಿ ಕೆ, ರಾಮನಗೌಡ ಪಾಟೀಲ, ಬಂಗಾರಪ್ಪ ಹರಳಿ, ಪ್ರಕಾಶ ವಾಲಿ, ಶಂಕರ ಇಟ್ನಾಳ, ಫಾರುಕ್ ಅತ್ತಾರ, ಉಮೇಶ ಪಾಟೀಲ, ಕೃಷಿ ಸಂಜೀವಿನಿ ಸಿಬ್ಬಂದಿ, ಆತ್ಮಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

--

ಬೇಸಿಗೆಯಲ್ಲಿ ಹರಿ ಮೂಲಕ ನೀರು ಹರಿಸುವುದರಿಂದ ನೀರು ಸಾಕಾಗುವುದಿಲ್ಲ. ಅದೇ ನೀರನ್ನು ಸ್ಟ್ರಿಂಕರ್ ಪೈಪ್ ಮೂಲಕ ತುಂತುರು ಪದ್ಧತಿಯಲ್ಲಿ ಹರಿಸುವುದರಿಂದ ನೀರು ಉಳಿತಾಯವಾಗಿ ಇಳುವರಿ ಚೆನ್ನಾಗಿ ಬರುತ್ತದೆ. ರೈತರ ಶ್ರಮವೂ ಕಡಿಮೆಯಾಗುತ್ತದೆ.

-ಸಹಾಯಕ ಕೃಷಿ ನಿರ್ದೇಶಕ ಶಿವಪ್ರಕಾಶ ಪಾಟೀಲ