ಸಾರಾಂಶ
ಕನ್ನಡಪ್ರಭ ವಾರ್ತೆ ಕುಂದಾಪುರ
ಇಲ್ಲಿನ ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯದಲ್ಲಿ ಮಹಿಳಾ ಘಟಕದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ನಡೆಯಿತು.ಮುಖ್ಯ ಅತಿಥಿಗಳಾಗಿ ಕೆ.ಆರ್.ಎ.ಎಂ. ಕಾಲೇಜಿನ ಪ್ರಾಧ್ಯಾಪಕಿ, ಅಥರ್ವ ಆರ್ಗ್ಯಾನಿಕ್ಸ್‌ನ ಸಂಸ್ಥಾಪಕಿ ಡಾ.ಅಪೇಕ್ಷಾ ರಾವ್ ಭಾಗವಹಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಹಿಳೆಯರು ದೇಹದ ಮಾತು ಕೇಳುವ ಬದಲು ಅದನ್ನು ಗೊಂದಲಕ್ಕೆ ಸಿಲುಕಿಸುತ್ತಿದ್ದೇವೆ. ನಾವು ವಿಶ್ವದಲ್ಲಿ ಕೇವಲ ಒಂದು ಧೂಳಿನ ಕಣವಷ್ಟೇ. ಹಾಗಾಗಿ ಇರುವಷ್ಟು ದಿನ ಆರೋಗ್ಯ ಕಾಪಾಡಿಕೊಂಡು ನೆಮ್ಮದಿಯಿಂದ ಬದುಕುವುದು ಮುಖ್ಯ. ಅದಕ್ಕಾಗಿ ನಾವು ಉತ್ತಮ ನಿದ್ರೆ, ವ್ಯಾಯಾಮ, ಆಹಾರ ಕ್ರಮ, ಹಾಗೂ ಒತ್ತಡ ನಿಯಂತ್ರಣ ಎಂಬ ನಾಲ್ಕು ಸೂತ್ರಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.ಇನ್ನೋರ್ವ ಮುಖ್ಯ ಅತಿಥಿಯಾಗಿ ಪ್ರೊಲಾಕೆ ಟೆಕ್ನಾಲಜೀಸ್ ಸಂಸ್ಥಾಪಕಿ ಸುಮಂಗಲಾ ತುಂಗ ಮಾತನಾಡಿ, ಮಹಿಳೆಯರು ಉದ್ಯಮಿಯಾಗಲು ಬೇಕಾದ ಗುಣಗಳು, ಸವಾಲುಗಳು ಮತ್ತು ಅವುಗಳನ್ನು ಹೇಗೆ ಎದುರಿಸುವ ಬಗ್ಗೆ ಸ್ಫೂರ್ತಿದಾಯಕ ಮಾತುಗಳನ್ನಾಡಿದರು. ಕಾಲೇಜಿನ ಉಪ ಪ್ರಾಂಶುಪಾಲ ಡಾ. ಮೆಲ್ವಿನ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು.ಕಾಲೇಜಿನ ಮಹಿಳಾ ಸಾಧಕಿಯಾಗಿ ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯದ ಎಂಟೆಕ್ ಪದವಿಯ ಪರೀಕ್ಷೆಯಲ್ಲಿ ದ್ವಿತೀಯ ರ್‍ಯಾಂಕ್ ಪಡೆದ ಕಾಲೇಜಿನ ಹಳೆ ವಿದ್ಯಾರ್ಥಿ, ಕಂಪ್ಯೂಟರ್ ಸೈನ್ಸ್ (ಡಾಟಾ ಸೈನ್ಸ್) ವಿಭಾಗದ ಉಪನ್ಯಾಸಕಿ ಫರ್ಹಾನ ಇಮ್ರಾನ್ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಮಹಿಳಾ ಘಟಕದ ಸಂಯೋಜಕಿ ಪ್ರೊ. ಅಕ್ಷತ ನಾಯಕ್, ಡೀನ್ ಪ್ಲೇಸ್ಮೆಂಟ್ ಅಮೃತಮಾಲ, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅಫ಼್ರಾಹ್ ಕಾರ್ಯಕ್ರಮ ನಿರೂಪಿಸಿದರು. ಶ್ರೇಯ ವಂದಿಸಿದರು.