ಕೃಷಿಗೆ ಸಂಬಂಧಿಸಿದ ಆವಿಷ್ಕಾರಗಳನ್ನು ಪರಿಚಯಿಸಿ ರೈತರಿಗೆ ಉತ್ತೇಜನ ನೀಡಿ: ಬಿ.ಎಂ.ನಂಜೇಗೌಡ

| Published : Jun 10 2024, 12:49 AM IST / Updated: Jun 10 2024, 12:50 AM IST

ಕೃಷಿಗೆ ಸಂಬಂಧಿಸಿದ ಆವಿಷ್ಕಾರಗಳನ್ನು ಪರಿಚಯಿಸಿ ರೈತರಿಗೆ ಉತ್ತೇಜನ ನೀಡಿ: ಬಿ.ಎಂ.ನಂಜೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ತಂತ್ರ ಜ್ಞಾನದಲ್ಲೂ ಕೂಡ ಸೈ ಎನಿಸಿಕೊಳ್ಳುವಷ್ಟರ ಮಟ್ಟಿಗೆ ಸಾಧನೆ ಹಾದಿಯಲ್ಲಿ ಜಿ.ಮಾದೇಗೌಡ ತಾಂತ್ರಿಕ ಮಹಾ ವಿದ್ಯಾಲಯದ ವಿದ್ಯಾರ್ಥಿಗಳು ಮುಂದುವರೆಯುತ್ತಿದ್ದಾರೆ. ವಿದ್ಯಾರ್ಥಿಗಳು ಹೊಸ ಆವಿಷ್ಕಾರಗಳತ್ತ ಆಲೋಚನೆ ಮಾಡಿದ್ದಲ್ಲಿ ತಂತ್ರಜ್ಞಾನದಲ್ಲಿ ನುರಿತರಾಗಬಹುದು.

ಕನ್ನಡಪ್ರಭ ವಾರ್ತೆ ಭಾರತೀನಗರ

ತಂತ್ರ ಜ್ಞಾನದಲ್ಲಿ ಹೊಸ ಆಲೋಚನೆಗಳೊಂದಿಗೆ ವಿದ್ಯಾರ್ಥಿಗಳು ಕೃಷಿಗೆ ಸಂಬಂಧಿಸಿದಂತೆ ಆವಿಷ್ಕಾರಗಳನ್ನು ಪರಿಚಯಿಸುವ ಮೂಲಕ ರೈತರಿಗೆ ಉತ್ತೇಜನ ನೀಡಬೇಕು ಎಂದು ಭಾರತೀ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಬಿ.ಎಂ. ನಂಜೇಗೌಡ ಕಿವಿಮಾತು ಹೇಳಿದರು.

ಜಿ.ಮಾದೇಗೌಡ ತಾಂತ್ರಿಕ ಮಹಾ ವಿದ್ಯಾಲಯದ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ ವಿಭಾಗದಿಂದ ಜಿಎಂಐಟಿ ಇಇಇ ಎಕ್ಸ್‌ಪೋ-2024ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಲ್ಲಾ ಕ್ಷೇತ್ರಗಳಿಗಿಂತಲೂ ತಾಂತ್ರಿಕ ಕ್ಷೇತ್ರ ಉಪಯುಕ್ತ ಮತ್ತು ಅಗತ್ಯತೆಯನ್ನು ತೋರಿಸುವಂತಹ ಕ್ಷೇತ್ರವಾಗಿದೆ ಎಂದರು.

ತಂತ್ರ ಜ್ಞಾನದಲ್ಲೂ ಕೂಡ ಸೈ ಎನಿಸಿಕೊಳ್ಳುವಷ್ಟರ ಮಟ್ಟಿಗೆ ಸಾಧನೆ ಹಾದಿಯಲ್ಲಿ ನಮ್ಮ ಕಾಲೇಜು ವಿದ್ಯಾರ್ಥಿಗಳು ಮುಂದುವರೆಯುತ್ತಿದ್ದಾರೆ. ವಿದ್ಯಾರ್ಥಿಗಳು ಹೊಸ ಆವಿಷ್ಕಾರಗಳತ್ತ ಆಲೋಚನೆ ಮಾಡಿದ್ದಲ್ಲಿ ತಂತ್ರಜ್ಞಾನದಲ್ಲಿ ನುರಿತರಾಗಬಹುದೆಂದು ತಿಳಿಸಿದರು.

ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳೊಡನೆ ವಿವಿಧ ಎಂಜಿನಿಯರ್ ಕಾಲೇಜುಗಳಾದ ಮೈಸೂರಿನ ವಿದ್ಯಾವಿಕಾಸ್ ತಾಂತ್ರಿಕ ಮಹಾವಿದ್ಯಾನಿಲಯ, ತುಮಕೂರಿನ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯ, ಎಟಿಎಂಇ ಸೇರಿದಂತೆ ಹಲವು ಕಾಲೇಜುಗಳಿಂದ 35ಕ್ಕೂ ಹೆಚ್ಚು ತಂಡಗಳು ಅಂತಿಮ ವರ್ಷದ ತಂತ್ರಜ್ಞಾನ ಬಳಕೆ ಯೋಜನೆಗಳನ್ನು ಪ್ರದರ್ಶನ ಮಾಡಿದರು.

ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥೆ ಪ್ರೊ.ಸಿ.ಸುಮಿತಾ ಮಾರ್ಗದರ್ಶನದಲ್ಲಿ ಪ್ರದರ್ಶನ ಮಾಡಿದ ವಿದ್ಯುತ್ ವಾಹನ ವಿನ್ಯಾಸ ಮತ್ತು ತಯಾರಿಕೆ ಯೋಜನಾ ಪ್ರದರ್ಶನಕ್ಕೆ ಪ್ರಥಮ ಬಹುಮಾನ ಪಡೆದುಕೊಂಡಿತು.

ಜಿಎಂಐಟಿಯ ಮೆಕಾನಿಕಲ್ ವಿಭಾಗದ ಪ್ರೊ.ಪ್ರಶಾಂತ್ ಮಾರ್ಗದರ್ಶನ ಮಾಡಿದ ಸ್ಯಾನಿಟರಿಯ ದಹನಕಾರಕ ವಿನ್ಯಾಸ ಮತ್ತು ತಯಾರಿಕೆಗೆ ದ್ವಿತೀಯ, ಜಿಎಂಐಟಿಯ ಪ್ರೊ.ರವಿಕುಮಾರ್ ಮಾರ್ಗದರ್ಶನ ಮಾಡಿದ ಬಹುಪಯೋಗಿ ಸ್ಮಾರ್ಟ್ ಕೃಷಿ ರೋಬೊಟ್ ಮತ್ತು ತುಮಕೂರಿನ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯ ಎಲೆಕ್ಟ್ರಿಕಲ್ ವಿಭಾಗದ ಮುಖ್ಯಸ್ಥ ಪ್ರೊ.ಪ್ರವೀಣ್ ಮಾರ್ಗದರ್ಶನದಲ್ಲಿ ಸೌರಶಕ್ತಿಯನ್ನು ಉಪಯೋಗಿಸಿ ಹವಾನಿಯಂತ್ರಿಕ ಯೋಜನೆಗಳಿಗೆ ತೃತೀಯ ಬಹುಮಾನ ಲಭಿಸಿತು.

ಕಾರ್ಯಕ್ರಮದಲ್ಲಿ ಜಿಎಂಐಟಿ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಆರ್.ಚಂದನ್ ಅಧ್ಯಕ್ಷತೆ ವಹಿಸಿದ್ದರು. ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ ವಿಭಾಗದ ಮುಖ್ಯಸ್ಥೆ ಪ್ರೊ.ಸಿ.ಸುಮಿತಾ, ಎಲೆಕ್ಟ್ರಾನಿಕ್ ಅಂಡ್ ಕಮ್ಯೂನಿಕೇಸನ್ ವಿಭಾಗ ದ ಮುಖ್ಯಸ್ಥ ಡಾ.ಎ.ಸಿ.ನೂತನ್, ಮೇಕಾನಿಕಲ್ ಅಂಡ್ ಇಂಜಿನಿಯರ್ ವಿಭಾಗದ ಮುಖ್ಯಸ್ಥ ಪ್ರಶಾಂತ್, ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ತನುಜ, ಚೇತನ್, ನವ್ಯಾಶ್ರೀ, ಸಿಂಧೂ, ಶಿಲ್ಪ, ಕಾರ್ಯಕ್ರಮದ ಸಂಶೋಜಕರಾದ ರವಿಕುಮಾರ್, ಸ್ವರೂಪ್ ಸೇರಿದಂತೆ ಹಲವರಿದ್ದರು.