ಕಟೀಲು ಯಕ್ಷಗಾನ ಏಳನೇ ಮೇಳ ಆರಂಭ ಆಮಂತ್ರಣ ಪತ್ರಿಕೆ ಬಿಡುಗಡೆ

| Published : Oct 04 2025, 12:00 AM IST

ಸಾರಾಂಶ

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಕಟೀಲು ಏಳನೇ ಮೇಳದ ಪ್ರಾರಂಭೋತ್ಸವದ ಆಮಂತ್ರಣ ಪತ್ರಿಕೆಯನ್ನು ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಬಿಡುಗಡೆಗೊಳಿಸಿದರು.

ಮೂಲ್ಕಿ: ಕಟೀಲು ದುರ್ಗೆಗೆ ಯಕ್ಷಗಾನ ಅತಿ ಪ್ರಿಯವಾದ ಸೇವೆಯಾಗಿದ್ದು ಇದೀಗ ಆರೂ ಮೇಳಗಳಿಂದ ಏಳು ಮೇಳಗಳಾಗುತ್ತಿರುವುದರೊಂದಿಗೆ ದೇವರ ಸೇವೆಯೊಂದಿಗೆ ಕಲೆ ಮತ್ತು ಕಲಾವಿದರ ಬೆಳವಣಿಯಾಗುತ್ತಿದೆ ಎಂದು ಉಡುಪಿ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಹೇಳಿದ್ದಾರೆ.ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಕಟೀಲು ಏಳನೇ ಮೇಳದ ಪ್ರಾರಂಭೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ಮತ್ತು ಅನುವಂಶಿಕ ಮೊಕ್ತೇಸರ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು, ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ವೇದವ್ಯಾಸ ತಂತ್ರಿ, ಅರ್ಚಕರಾದ ಲಕ್ಷೀನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಅನಂತ ಪದ್ಮನಾಭ ಆಸ್ರಣ್ಣ, ಕಮಲಾದೇವಿ ಪ್ರಸಾದ್ ಆಸ್ರಣ್ಣ, ಶ್ರೀಹರಿನಾರಾಯಣ ದಾಸ ಆಸ್ರಣ್ಣ, ಶ್ರೀಕರ ಆಸ್ರಣ್ಣ, ಕೃಷ್ಣರಾಜ ತಂತ್ರಿ, ಕಟೀಲಿನ ಯಕ್ಷಗಾನದ ಎಲ್ಲಾ ಮೇಳಗಳ ಯಜಮಾನ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ಬಿಪಿನ್ ಚಂದ್ರ ಶೆಟ್ಟಿ ಕೊಡೆತ್ತೂರುಗುತ್ತು, ಕೊಡೆತ್ತೂರುಗುತ್ತು ಗುತ್ತಿನಾರ್ ನಿತಿನ್ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ ಕೊಡೆತ್ತೂರು ಹೊಸಮನೆ, ಪ್ರಸನ್ನ ಶೆಟ್ಟಿ ಅತ್ತೂರುಗುತ್ತು, ಪ್ರಕಾಶ್ ಅಳ್ವ ಪಡುಮನೆ, ಗಿರೀಶ್ ಶೆಟ್ಟಿ ಕುಡ್ತಿಮಾರುಗುತ್ತು, ದೊಡ್ದಯ್ಯ ಮೂಲ್ಯ ಕಟೀಲು, ಅರುಣ್ ಶೆಟ್ಟಿ ಕೊಡೆತ್ತೂರುಗುತ್ತು, ಭರತ್ ಶೆಟ್ಟಿ ಕೊಡೆತ್ತೂರು ಹೊಸಮನೆ, ದಿವಾಕರ ರಾವ್ ಸಿತ್ಲ , ರಾಘವೇಂದ್ರ ರಾವ್ ಬಜಪೆ, ಪುರುಷೋತ್ತಮ ಶೆಟ್ಟಿ ಕೊಡೆತ್ತೂರು, ವಿಜಯ ಶೆಟ್ಟಿ ಅಜಾರುಗುತ್ತು, ಶಿವಾಜಿ ಶೆಟ್ಟಿ ಕೊಳಕೆಬೈಲ್, ಲಕ್ಷ್ಮಣ್ ಶೆಟ್ಟಿ ಸಾಂತ್ಯ, ಗಣೇಶ್ ರೈ ವಾಮಂಜೂರು ಮತ್ತಿತರರು ಹಾಜರಿದ್ದರು.