ಶೈಕ್ಷಣಿಕ ಕಾರ್ಯಕ್ರಮಗಳಿಗೆ ಎಸ್ಸಿ,ಎಸ್ಟಿ ಶಿಕ್ಷಕರ ಸಂಘವನ್ನೂ ಆಹ್ವಾನಿಸಿ: ಜಿ. ಮುನಿಯಪ್ಪ

| Published : Jul 04 2024, 01:08 AM IST

ಶೈಕ್ಷಣಿಕ ಕಾರ್ಯಕ್ರಮಗಳಿಗೆ ಎಸ್ಸಿ,ಎಸ್ಟಿ ಶಿಕ್ಷಕರ ಸಂಘವನ್ನೂ ಆಹ್ವಾನಿಸಿ: ಜಿ. ಮುನಿಯಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಇಲಾಖಾ ಮಟ್ಟದಲ್ಲಿ ನಡೆಯಲಿರುವ ವಿವಿಧ ಸಭೆಗಳಿಗೆ ಮತ್ತು ರಾಷ್ಟ್ರೀಯ ಹಬ್ಬಗಳು, ಸಮ್ಮೇಳನಗಳು, ಪ್ರತಿಭಾ ಕಾರಂಜಿ, ಕ್ರೀಡಾ ಕಾರ್ಯಕ್ರಮಗಳಿಗೆ ಆಹ್ವಾನಿಸಿ ಸಹಕಾರ ನೀಡಲು ಕ್ಷೇತ್ರ ಶಿಕ್ಷಣಾಧಿಕಾರಿಯಾದ ತಾವು ಅಗತ್ಯ ಕ್ರಮ ಕೈಗೊಂಡು ನಮ್ಮ ಸಂಘಟನೆಗೆ ಅವಕಾಶ ಮಾಡಿಕೊಡಬೇಕೆಂದು ಮಾಲೂರು ತಾಲೂಕು ಸಮಿತಿಯು ವಿನಂತಿ ಮಾಡುತ್ತದೆ.

ಕನ್ನಡಪ್ರಭ ವಾರ್ತೆ ಮಾಲೂರು

ಎಸ್ಸಿ,ಎಸ್ಟಿ ಶಿಕ್ಷಕರ ಕುಂದು ಕೊರತೆಗಳು ಹಾಗೂ ಇಲಾಖಾ ಮಟ್ಟದಲ್ಲಿ ನಡೆಯಲಿರುವ ಸಭೆ ಮತ್ತು ರಾಷ್ಟ್ರೀಯ ಹಬ್ಬಗಳು, ಸಮ್ಮೇಳನಗಳು, ಪ್ರತಿಭಾ ಕಾರಂಜಿ, ಕ್ರೀಡಾ ಕಾರ್ಯಕ್ರಮಗಳು ಮತ್ತು ಶೈಕ್ಷಣಿಕ ಸಮಾರಂಭ ಪೂರ್ವಭಾವಿ ಸಭೆಗಳಿಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಎಸ್ಸಿ, ಎಸ್ಟಿ ಶಿಕ್ಷಕರ ಸಂಘದ ಪದಾಧಿಕಾರಿಗಳನ್ನು ಆಹ್ವಾನಿಸುವಂತೆ ಸಂಘದ ಪದಾಧಿಕಾರಿಗಳು ಅಧ್ಯಕ್ಷ ಜಿ. ಮುನಿಯಪ್ಪ ನೇತೃತ್ವದಲ್ಲಿ ಪಟ್ಟಣದ ಬಿಇಒ ಚಂದ್ರಕಲಾ ಹಾಗೂ ತಹಸೀಲ್ದಾರ್ ಹರಿಪ್ರಸಾದ್ ಅವರಿಗೆ ಮನವಿ ಸಲ್ಲಿಸಿದರು.

ನಂತರ ಮಾತನಾಡಿದ ಸಂಘದ ಅಧ್ಯಕ್ಷ ಜಿ.ಮುನಿಯಪ್ಪ ಅವರು, ಕರ್ನಾಟಕ ಸರ್ಕಾರದ ಸಹಕಾರ ಸಂಘಗಳ ನೋಂದಣಿ ಅಧಿನಿಯಮ (೧೯೬೦ನೆಯ ಇಸವಿ ೧ನೇ ಕ್ರಮಾಂಕದ ಕರ್ನಾಟಕದ ಅಧಿನಿಯಮ) ರಂತೆ ಮತ್ತು ರಾಜ್ಯ ಕಾರ್ಯಕಾರಿ ಸಮಿತಿ ವಾಪ ಸಮಿತಿಯ ಅನುಮೋದನೆ ಮೇರೆಗೆ ಮಾಲೂರು ತಾಲೂಕು ಶಾಖೆಯ ಪದಾಧಿಕಾರಿಗಳನ್ನು ಜಿಲ್ಲಾ ಶಾಖೆ ಎಸ್ಸಿ, ಎಸ್ಟಿ ಶಿಕ್ಷಕರ ಕುಂದು ಕೊರತೆಗಳಿಗೆ ಸಂಬಂಧಿಸಿ ಹಾಗೂ ಇಲಾಖಾ ಮಟ್ಟದಲ್ಲಿ ನಡೆಯಲಿರುವ ವಿವಿಧ ಸಭೆಗಳಿಗೆ ಮತ್ತು ರಾಷ್ಟ್ರೀಯ ಹಬ್ಬಗಳು, ಸಮ್ಮೇಳನಗಳು, ಪ್ರತಿಭಾ ಕಾರಂಜಿ, ಕ್ರೀಡಾ ಕಾರ್ಯಕ್ರಮಗಳಿಗೆ ಆಹ್ವಾನಿಸಿ ಸಹಕಾರ ನೀಡಲು ಕ್ಷೇತ್ರ ಶಿಕ್ಷಣಾಧಿಕಾರಿಯಾದ ತಾವು ಅಗತ್ಯ ಕ್ರಮ ಕೈಗೊಂಡು ನಮ್ಮ ಸಂಘಟನೆಗೆ ಅವಕಾಶ ಮಾಡಿಕೊಡಬೇಕೆಂದು ಮಾಲೂರು ತಾಲೂಕು ಸಮಿತಿಯು ವಿನಂತಿ ಮಾಡುತ್ತದೆ ಎಂದರು.

ಜಿಲ್ಲಾ ಸಂಘಟನೆಯ ಮನವಿಯೊಂದಿಗೆ ಮಾಲೂರು ತಾಲೂಕು ಶಾಖೆಯು ತಹಸೀಲ್ದಾರ್ ಹಾಗೂ ಬಿಇಒ ಅವರಿಗೆ ಮನವಿ ಪತ್ರಗಳನ್ನು ಸಲ್ಲಿಸಲಾಗುತ್ತಿದ್ದು , ಸಕರಾತ್ಮಕ ಉತ್ತರ ಸಿಕ್ಕಿದೆ ಎಂದರು.

ಎಸ್ಸಿ ,ಎಸ್ಟಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಆಲಹಳ್ಳಿ ಸುರೇಶ್, ಗ್ರಾಮೀಣ ಶಿಕ್ಷಕರ ಸಂಘದ ಉಪಾಧ್ಯಕ್ಷ ಶಶಿಧರ್, ಎಸ್‌ಸಿ, ಎಸ್‌ಟಿ ಸರ್ಕಾರಿ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಎನ್, ಗುರುಮೂರ್ತಿ, ಪ್ರಧಾನ ಕಾರ್ಯದರ್ಶಿ ಎಂ,ಸುಬ್ರಮಣಿ, ಖಜಾಂಚಿ ಎಸ್,ವಿ, ನಾರಾಯಣಸ್ವಾಮಿ, ಉಪಾಧ್ಯಕ್ಷ ಶ್ರೀನಿವಾಸ,ವಿ(ವಾಸು), ಬಿ,ಎನ್,ಮುನಿರಾಜು, ಬಿ,ಎಂ, ಶ್ರೀನಿವಾಸ್, ಪುಟ್ಟಮ್ಮ, ಸಹ ಕಾರ್ಯದರ್ಶಿ ಮುನಿರಾಜ, ಸಂಘಟನಾ ಕಾರ್ಯದರ್ಶಿ ತಿಮ್ಮರಾಯಪ್ಪ ವಿ, ಕುಮಾರ್ ಪಿ, ಬಸವರಾಜು ವಿ, ಇನ್ನಿತರರು ಹಾಜರಿದ್ದರು.