ಸಾರಾಂಶ
protest in yadagiri: apeal to tahasildar
ಹುಣಸಗಿ: ಡಾ. ಸರೋಜಿನಿ ಮಹಿಷಿ ವರದಿ ಜಾರಿಗೆ ತರಲು ಆಗ್ರಹಿಸಿ ಕರ್ನಾಟಕ ಸೇನೆ ತಾ. ಘಟಕ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿತು.
ರಾಜ್ಯ ಸಂಚಾಲಕ ಭೀಮಣ್ಣ ಶಖಾಪುರ ಮಾತನಾಡಿ, ಕನ್ನಡಿಗರಿಗೆ ಆದ್ಯತೆ ನೀಡಲು ಶಿಫಾರಸು ಮಾಡಿದ್ದ ಡಾ. ಸರೋಜಿನಿ ಮಹಿಷಿ ವರದಿ 58 ಶಿಫಾರಸ್ಸುಗಳನ್ನು ಸರ್ಕಾರದ ಮುಂದಿಟ್ಟಿತು. ಕೇಂದ್ರ ಸರ್ಕಾರಿ ಇಲಾಖೆಗಳು ಮತ್ತು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾರ್ವಜನಿಕ ವಲಯ ಘಟಕಗಳ ಗ್ರೂಪ್ ಸಿ ಮತ್ತು ಗ್ರೂಪ್ ಡಿ ಹುದ್ದೆಗಳನ್ನು ಕೇವಲ ಕನ್ನಡಿಗರಿಗೆ ಮಾತ್ರ ಸಿಗಲಿದ್ದು, ಈ ವರದಿಯನ್ನು ಸರ್ಕಾರ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.ಬೇರೆ ರಾಜ್ಯಗಳದಲ್ಲಿಯೂ ಸ್ಥಳೀಯರಿಗೆ ಮೀಸಲಾತಿ ಅಲ್ಲಿನ ಸರಕಾರ ನೀಡಿದೆ. ಅದರಂತೆಯೂ ಕನ್ನಡಿಗರಿಗೆ ಮೀಸಲು ಸಿಗಲು ಮಹಿಷಿ ವರದಿ ಜಾರಿ ಅಗತ್ಯವಾಗಿದೆ ಎಂದು ಆಗ್ರಹಿಸಿದರು. ಸಿಎಂಗೆ ಬರೆದ ಮನವಿಯನ್ನು ತಹಸೀಲ್ದಾರ್ ಬಸಲಿಂಗಪ್ಪ ನೈಕೋಡಿ ಅವರಿಗೆ ಸಲ್ಲಿಸಲಾಯಿತು.
ಜಿಲ್ಲಾಧ್ಯಕ್ಷ ರಂಗಯ್ಯ, ತಾಲೂಕಾಧ್ಯಕ್ಷ ಹುಲಗಪ್ಪ ಪಾಳೆಗಾರ, ಶ್ರೀಧರ ನಾಯಕ, ರಾಮಲಿಂಗಪ್ಪ, ಅಂಬ್ರಯ್ಯಸ್ವಾಮಿ, ಸಿದ್ದು ಪಟ್ಟೇದಾರ, ಶ್ರೀಕಾಂತ ದೊರಿ, ಶರಣಗೌಡ ತಳ್ಳಳಿ, ದೇವಿಂದ್ರಪ್ಪ ಮುಂಡರಗಿ, ವೆಂಕಟೇಶ ಮಕಾಶಿ, ರಮೇಶ ಯಡಹಳ್ಳಿ, ಹಣಮಂತ್ರಾಯ, ದೇವರಾಜ, ಪಯಾಜ್, ಸೋಮನಗೌಡ ಇದ್ದರು.ಫೋಟೊ;;3ವೈಡಿಆರ್14:
ಹುಣಸಗಿಯಲ್ಲಿ ಡಾ. ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ ನಮ್ಮ ಕರ್ನಾಟಕ ಸೇನೆ ತಾಲೂಕು ಘಟಕ ವತಿಯಿಂದ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.--000---