ಸಾರಾಂಶ
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ವಿಶೇಷ ಸವಲತ್ತು ನೀಡಿಕೆ ಪ್ರಕರಣದಲ್ಲಿ ನಟ ದರ್ಶನ್ ಆಪ್ತನ ಬಳಿಕ ಅವರ ಪತ್ನಿ ವಿಜಯಲಕ್ಷ್ಮೀ ಅವರಿಗೆ ಪೊಲೀಸರ ತನಿಖೆ ಸಂಕಷ್ಟ ಎದುರಾಗಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ವಿಶೇಷ ಸವಲತ್ತು ನೀಡಿಕೆ ಪ್ರಕರಣದಲ್ಲಿ ನಟ ದರ್ಶನ್ ಆಪ್ತನ ಬಳಿಕ ಅವರ ಪತ್ನಿ ವಿಜಯಲಕ್ಷ್ಮೀ ಅವರಿಗೆ ಪೊಲೀಸರ ತನಿಖೆ ಸಂಕಷ್ಟ ಎದುರಾಗಿದೆ.ಜೈಲು ವಿವಾದದ ವಿಡಿಯೋ ಬಹಿರಂಗ ಹಿಂದೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರ ಹೆಸರು ಸಹ ಕೇಳಿ ಬಂದಿದ್ದು, ಅವರಿಗೆ ನೋಟಿಸ್ ನೀಡಿ ವಿಚಾರಣೆಗೊಳಪಡಿಸಲು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಮುಂದಾಗಿದ್ದಾರೆ ಎನ್ನಲಾಗಿದೆ.
ಇದೇ ಪ್ರಕರಣದ ಸಂಬಂಧ ಎರಡು ಬಾರಿ ದರ್ಶನ್ ಅವರ ಪರಮಾಪ್ತ ಧನ್ವೀರ್ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದರು. ಈ ವೇಳೆ ತಾನು ವಿಡಿಯೋವನ್ನು ವಿಜಯಲಕ್ಷ್ಮೀ ಅವರ ಜತೆ ಹಂಚಿಕೆಕೊಂಡಿದ್ದಾಗಿ ಧನ್ವೀರ್ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಆಧರಿಸಿ ವಿಜಯಲಕ್ಷ್ಮೀ ಅವರಿಗೆ ತನಿಖೆಗೊಳಪಡಿಸುವ ಬಗ್ಗೆ ಪೊಲೀಸರು ಚಿಂತಿಸಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.ಕೆಲ ದಿನಗಳ ಹಿಂದೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಕೃತ ಕಾಮಿ ಉಮೇಶ್ ರೆಡ್ಡಿ, ಶಂಕಿತ ಉಗ್ರ ಶಕೀಲ್ ಹಾಗೂ ಚಿನ್ನಾಭರಣ ಸಾಗಣೆ ಪ್ರಕರಣದ ತರುಣ್ ರಾಜ್‌ಗೆ ಮೊಬೈಲ್ ಸೇರಿ ಇತರೆ ಸೌಲಭ್ಯ ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಇದಕ್ಕೆ ಪೂರಕವಾಗಿ ಕೆಲ ವಿಡಿಯೋಗಳು ಬಹಿರಂಗವಾಗಿ ವೈರಲ್ ಆಗಿದ್ದವು. ಈಗ ವಿಡಿಯೋ ಬಹಿರಂಗ ಹಿಂದಿನವರ ಪತ್ತೆಗೆ ಪೊಲೀಸರು ತನಿಖೆಗಿಳಿದಿದ್ದಾರೆ.
ಮೆಟಾಗೆ ಪೊಲೀಸರ ಪತ್ರವಿಡಿಯೋ ಹಂಚಿಕೆ ಕುರಿತು ಅಸಲಿ ಖಾತೆಗಳ ಮಾಹಿತಿ ನೀಡುವಂತೆ ಫೇಸ್‌ಬುಕ್, ಇನ್‌ಸ್ಟಾಗ್ರಾಂ ಹಾಗೂ ವಾಟ್ಸಪ್ ಕಂಪನಿಗಳಿಗೆ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಪತ್ರ ಬರೆದಿದ್ದಾರೆ.
ಸಾಮಾಜಿಕ ಮಾಧ್ಯಮ ಬಳಸಿಕೊಂಡು ಜೈಲಿನ ವಿಡಿಯೋಗಳನ್ನು ಕೆಲವರು ಬಹಿರಂಗಪಡಿಸಿದ್ದರು. ಹೀಗಾಗಿ ಮೆಟಾ ಕಂಪನಿಗೆ ಪೊಲೀಸರು ಮಾಹಿತಿ ಕೋರಿದ್ದಾರೆ ಎನ್ನಲಾಗಿದೆ.;Resize=(128,128))
;Resize=(128,128))
;Resize=(128,128))
;Resize=(128,128))