ಮಂಗಳೂರಿನಲ್ಲಿ ಭಕ್ತಿ ಸಡಗರದ ಶ್ರೀಕೃಷ್ಣ- ಬಲರಾಮ ರಥಯಾತ್ರೆ

| Published : Feb 11 2024, 01:47 AM IST

ಮಂಗಳೂರಿನಲ್ಲಿ ಭಕ್ತಿ ಸಡಗರದ ಶ್ರೀಕೃಷ್ಣ- ಬಲರಾಮ ರಥಯಾತ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ಇಸ್ಕಾನ್ ಹುಬ್ಬಳ್ಳಿ ಸಂಸ್ಥೆಯ ಅಧ್ಯಕ್ಷ ರಾಜೀವ ಲೋಚನದಾಸ ಅವರು ಧಾರ್ಮಿಕ ಪ್ರವಚನ ನೀಡಿ, ರಥಯಾತ್ರೆಯ ಮಹತ್ವವನ್ನು ವಿವರಿಸಿ, ಶ್ರದ್ಧೆ, ಭಕ್ತಿ- ಭಾವ, ಆಚಾರ ವಿಚಾರಗಳನ್ನು ಮೈಗೂಡಿಸಿಕೊಳ್ಳಲು ಇಂತಹ ಉತ್ಸವಗಳು ಪ್ರೇರಣೆಯಾಗಲಿವೆ ಎಂದು ನುಡಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘ (ಇಸ್ಕಾನ್‌) ಮಂಗಳೂರು ನಗರ ಶಾಖೆ ಆಶ್ರಯದಲ್ಲಿ 20ನೇ ವಾರ್ಷಿಕ ಶ್ರೀ ಕೃಷ್ಣ ಬಲರಾಮ ರಥಯಾತ್ರಾ ಉತ್ಸವ ಶನಿವಾರ ನಗರದ ಪಿ.ವಿ.ಎಸ್. ಕಲಾಕುಂಜ್ ಸಂಕೀರ್ಣದಲ್ಲಿ ಸಡಗರ- ಸಂಭ್ರಮದಿಂದ ನೆರವೇರಿತು. ಶ್ರೀ ಕೃಷ್ಣ ಬಲರಾಮರ ವಿಶೇಷ ಮಹಾಪೂಜೆಯ ವಿಧಿ ವಿಧಾನ ಬಳಿಕ ಸಾಂಕೇತಿಕವಾಗಿ ರಥಯಾತ್ರೆಗೆ ಚಾಲನೆ ನೀಡಲಾಯಿತು.ಇಸ್ಕಾನ್ ಹುಬ್ಬಳ್ಳಿ ಸಂಸ್ಥೆಯ ಅಧ್ಯಕ್ಷ ರಾಜೀವ ಲೋಚನದಾಸ ಅವರು ಧಾರ್ಮಿಕ ಪ್ರವಚನ ನೀಡಿ, ರಥಯಾತ್ರೆಯ ಮಹತ್ವವನ್ನು ವಿವರಿಸಿ, ಶ್ರದ್ಧೆ, ಭಕ್ತಿ- ಭಾವ, ಆಚಾರ ವಿಚಾರಗಳನ್ನು ಮೈಗೂಡಿಸಿಕೊಳ್ಳಲು ಇಂತಹ ಉತ್ಸವಗಳು ಪ್ರೇರಣೆಯಾಗಲಿವೆ ಎಂದು ನುಡಿದರು.ಮುಖ್ಯ ಅತಿಥಿಯಾಗಿ ಅಳ್ವಾಸ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ವಿವೇಕ್ ಆಳ್ವ ಭಾಗವಹಿಸಿದ್ದರು. ಎ.ಕೆ. ಬನ್ಸಲ್ ಸಂಸ್ಥೆಯ ನಿರ್ದೇಶಕ ಅಭಿನವ್ ಬನ್ಸಲ್ ಗೌರವ ಅತಿಥಿಯಾಗಿದ್ದರು. ಬೆಂಗಳೂರು ನಗರ ಇಸ್ಕಾನ್ ಸಂಸ್ಥೆಯ ಶ್ರೀ ಶ್ರೀಧಾಮ್ ಕೃಷ್ಣ ದಾಸ ಮತ್ತು ಶ್ರೀ ತತ್ವದರ್ಶನ ದಾಸ ಇದ್ದರು. ದಾನಿಗಳನ್ನು ಈ ಸಂದರ್ಭ ಗೌರವಿಸಲಾಯಿತು. ಮಂಗಳೂರು ಇಸ್ಕಾನ್ ಸಂಸ್ಥೆಯ ಅಧ್ಯಕ್ಷ ಶ್ರೀ ಗುಣಕರ ರಾಮದಾಸ ಸ್ವಾಗತಿಸಿದರು. ಉಪಾಧ್ಯಕ್ಷ ಸನಂದನ ದಾಸ ವಂದಿಸಿದರು. ವಿದ್ಯಾ ಶೆಣೈ ನಿರೂಪಿಸಿದರು.ಶ್ರೀಕೃಷ್ಣ ಬಲರಾಮರ ವಿಗ್ರಹಗಳನ್ನು ಹೊತ್ತ ವೈವಿಧ್ಯಮಯ ಪುಷ್ಪಗಳಿಂದ ಮತ್ತು ವಿದ್ಯುತ್‌ ಅಲಂಕೃತಗೊಂಡ ಭವ್ಯ ರಥಯಾತ್ರೆ ಮೆರವಣಿಗೆ ನಗರದಲ್ಲಿ ನಡೆಯಿತು. ನೂರಾರು ಭಕ್ತರು ‘ಹರೇ ಕೃಷ್ಣ ಹರೇ ರಾಮ’ ಜಪದೊಂದಿಗೆ ಭಜನೆ-ಸಂಕೀರ್ತನೆ- ನೃತ್ಯ- ವಾದ್ಯಗಳೊಂದಿಗೆ ನಗರದ ಪ್ರಮುಖ ರಸ್ತೆಯುದ್ದಕ್ಕೂ ಮೆರವಣಿಗೆ ಸಾಗಿದರು. ಶೋಭಾಯಾತ್ರೆಯುದ್ದಕ್ಕೂ ಫಲಪುಷ್ಪ ಮಂಗಳಾರತಿಯನ್ನು ಶೀ ಕೃಷ್ಣ ಬಲರಾಮ ದೇವರಿಗೆ ಅರ್ಪಿಸಲಾಯಿತು.10ರಾಮ