ನಗರದ ದೇವಸ್ಥಾನ ರಸ್ತೆಯಲ್ಲಿರುವ ರೇಣುಕ ಮಂದಿರದಲ್ಲಿ ಆ.3 ಹಾಗೂ ಆ.4ರಂದು ಬೆಳಗ್ಗೆ 6.30 ರಿಂದ 11 ಗಂಟೆಯವರೆಗೆ ಬಾಳೆಹೊನ್ನೂರು ರಂಭಾಪುರಿ ಪೀಠದ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಶ್ರೀಗಳ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜೆ ಹಾಗೂ ಧರ್ಮ ಜಾಗೃತಿ ಸಮಾರಂಭ ಹಮ್ಮಿಕೊಳ್ಳಲಾಗಿದೆ.
- ರೇಣುಕ ಮಂದಿರದಲ್ಲಿ ಇಂದು, ನಾಳೆ ಧರ್ಮ ಜಾಗೃತಿ ಸಮಾರಂಭ
- - -ಕನ್ನಡಪ್ರಭ ವಾರ್ತೆ ಹರಿಹರ
ನಗರದ ದೇವಸ್ಥಾನ ರಸ್ತೆಯಲ್ಲಿರುವ ರೇಣುಕ ಮಂದಿರದಲ್ಲಿ ಆ.3 ಹಾಗೂ ಆ.4ರಂದು ಬೆಳಗ್ಗೆ 6.30 ರಿಂದ 11 ಗಂಟೆಯವರೆಗೆ ಬಾಳೆಹೊನ್ನೂರು ರಂಭಾಪುರಿ ಪೀಠದ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಶ್ರೀಗಳ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜೆ ಹಾಗೂ ಧರ್ಮ ಜಾಗೃತಿ ಸಮಾರಂಭ ಹಮ್ಮಿಕೊಳ್ಳಲಾಗಿದೆ.ಆ.3ರಂದು ಸಂಜೆ 6.30ಕ್ಕೆ ನಡೆಯುವ ಧಾರ್ಮಿಕ ಸಭೆ ಸಾನ್ನಿಧ್ಯವನ್ನು ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಶ್ರೀ ವಹಿಸಿರುವರು. ಉಪದೇಶಾಮೃತವನ್ನು ಕಣ್ವಕುಪ್ಪೆ ಗವಿಮಠದ ಡಾ.ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ನೀಡಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಬಿ.ಪಿ.ಹರೀಶ್ ನೆರವೇರಿಸಿದರೆ, ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಎಚ್.ಎಸ್.ಶಿವಶಂಕರ್, ಜುಂಜಪ್ಪ ಹೆಗ್ಗಪ್ಪನವರು, ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಚಿದಾನಂದಪ್ಪ, ಬಿಜೆಪಿ ಮುಖಂಡ ಎಸ್.ಎಂ.ವೀರೇಶ್, ತಪೋವನದ ಡಾ.ಶಶಿಕುಮಾರ್ ಮೆಹರ‍್ವಾಡೆ ಭಾಗವಹಿಸಲಿದ್ದಾರೆ.
ಆ.4ರಂದು ಸಂಜೆ 6.30 ಗಂಟೆಗೆ ಧರ್ಮ ಜಾಗೃತಿ ಸಭೆ ಸಾನ್ನಿಧ್ಯವನ್ನು ರಂಭಾಪುರಿ ಪೀಠದ ಶ್ರೀ ವಹಿಸಿರುವರು. ಮುಖ್ಯ ಅತಿಥಿಗಳಾಗಿ ದಾವಣಗೆರೆ ದಕ್ಷಿಣ ಕ್ಷೇತ್ರ ಶಾಸಕ ಸಮರ್ಥ ಶಾಮನೂರು, ಅ.ಭಾವೀ.ಲಿಂ. ಮಹಾಸಭಾ ತಾಲೂಕು ಅಧ್ಯಕ್ಷ ಡಿ.ಜಿ.ಶಿವಾನಂದಪ್ಪ, ಡಾ.ನಾಗರಾಜ್ ಎಸ್.ಕೆ., ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್, ಕಾಂಗ್ರೆಸ್ ಮುಖಂಡ ಜಿ.ಬಿ.ಹಾಲೇಶ್ ಗೌಡ, ನಗರಸಭೆ ಮಾಜಿ ಸದಸ್ಯ ಎಬಿಎಂ ವಿಜಯಕುಮಾರ್ ಮತ್ತಿತರರು ಭಾಗವಹಿಸುವರು.ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ, ಗೌರವಿಸಲಾಗುವುದು.
ಆ.5ರಂದು ಬೆಳಗ್ಗೆ 6.30 ರಿಂದ 11 ರವರೆಗೆ ಹರಿಹರ ನಗರದ ಸಮೀಪದ ಕೊಡಿಯಾಲ ಹೊಸಪೇಟೆಯ ಶ್ರೀ ಬಾಳೇಹಳ್ಳಿ ವೀರಸಿಂಹಾಸನ ಮಂಗಲ ಮಂಟಪದಲ್ಲಿ ಶ್ರೀ ಅವರ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜೆ ಹಾಗೂ ಧರ್ಮ ಜಾಗೃತಿ ಸಮಾರಂಭ ಆಯೋಜಿಸಲಾಗಿದೆ.ಅಂದು ಸಂಜೆ 6.30ಕ್ಕೆ ಧಾರ್ಮಿಕ ಸಭೆ ಸಾನ್ನಿಧ್ಯ ರಂಭಾಪುರಿ ಶ್ರೀ ವಹಿಸಿರುವರು. ಉದ್ಘಾಟನೆಯನ್ನು ಶಾಸಕ ಪ್ರಕಾಶ್ ಕೋಳಿವಾಡ ನೇರವೇರಿಸುವರು. ಮುಖ್ಯ ಅತಿಥಿಗಳಾಗಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಮಾಜಿ ಶಾಸಕ ಅರುಣ್ ಪೂಜಾರ, ಡಾ.ಸವಿತಾ ಮಹೇಶ್, ಸಂತೋಷ್ ಪಾಟೀಲ್, ಬಸವರಾಜ್ ಪಾಟೀಲ್, ಭೀಮಪ್ಪ ಗೋಣೆಪ್ಪ, ಪಟ್ಟಣಶೆಟ್ಟಿ ಮತ್ತಿತರರು ಪಾಲ್ಗೊಳ್ಳುವರು.
- - --01ಎಚ್‌ಆರ್‌ಆರ್ 01: ರಂಭಾಪುರಿ ಶ್ರೀ