ಸಮಾಜಘಾತಕ ಕೆಲಸದಲ್ಲಿ ವಿದ್ಯಾವಂತರು ತೊಡಗುತ್ತಿರುವುದು ದುರಂತ

| Published : Jun 27 2024, 01:04 AM IST

ಸಮಾಜಘಾತಕ ಕೆಲಸದಲ್ಲಿ ವಿದ್ಯಾವಂತರು ತೊಡಗುತ್ತಿರುವುದು ದುರಂತ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ದುರ್ಗಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಪೊಲೀಸ್ ಇಲಾಖೆ ವತಿಯಿಂದ ನಡೆದ ಮಾದಕ ವಸ್ತು ನಿರ್ಮೂಲನ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಪಿಐ ತಿಮ್ಮಣ್ಣ ಮಾತನಾಡಿದರು.

ಮಾದಕ ವಸ್ತು ನಿರ್ಮೂಲನ ಜಾಗೃತಿ ಅಭಿಯಾನದಲ್ಲಿ ತಿಮ್ಮಣ್ಣ ಕಳವಳಕನ್ನಡಪ್ರಭ ವಾರ್ತೆ ಹೊಸದುರ್ಗ ಸಮಾಜಘಾತಕ ಕೆಲಸದಲ್ಲಿ ವಿದ್ಯಾವಂತ ಯುವಕರು ತೊಡಗುತ್ತಿರುವುದು ದುರಂತ ಎಂದು ಹೊಸದುರ್ಗ ಠಾಣೆ ಪಿಐ ತಿಮ್ಮಣ್ಣ ಕಳವಳ ವ್ಯಕ್ತಪಡಿಸಿದರು.

ನಗರದ ದುರ್ಗಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಪೊಲೀಸ್ ಇಲಾಖೆ ವತಿಯಿಂದ ನಡೆದ ಮಾದಕ ವಸ್ತು ನಿರ್ಮೂಲನ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಜೀವನದ ಅಮೂಲ್ಯ ಸಮಯದಲ್ಲಿ ತಮ್ಮ ಭವಿಷ್ಯ ರೂಪಿಸಿಕೊಳ್ಳುವುದರ ಬದಲು ಮಾದಕ ವ್ಯಸನಕ್ಕೆ ತುತ್ತಾಗುತ್ತಿರುವುದು ಸಮಾಜದಲ್ಲಿ ಕಳವಳಕಾರಿಯಾಗಿದ್ದು, ಮಾದಕ ವ್ಯಸನ ಮಾಡುವುದರಿಂದ ಕುಟುಂಬದ ನೆಮ್ಮದಿ ಹಾಳಾಗುತ್ತಿದೆ ಎಂದರು.

ಮಾದಕ ವಸ್ತು ಸೇವನೆ ಮಾಡಿದವನಲ್ಲಿ ನಿರಂತರ ಒಂಟಿತನ ಕಾಡುತ್ತದೆ. ಗಾಂಜಾ ಅಫೀಮು ಸೇವಿಸಿದ ವ್ಯಕ್ತಿಗಳು ಮನಸ್ಸಿನ ನಿಯಂತ್ರಣವನ್ನು ಕಳೆದುಕೊಂಡು ಕಳ್ಳತನ, ದರೋಡೆಯಂತಹ ಹೀನ ಕೃತ್ಯದಲ್ಲಿ ಭಾಗಿಯಾಗುತ್ತಾನೆ. ಮಾದಕ ವಸ್ತುಗಳನ್ನು ಬೆಳೆಸುವುದು, ಸಾಗಾಣಿಕೆ ಮಾಡುವುದು ಮತ್ತು ಸೇವಿಸುವುದು ಅಕ್ಷಮ್ಯ ಅಪರಾಧವಾಗಿದ್ದು ಮಾದಕ ವ್ಯಸನ ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದರೆ 20 ವರ್ಷ ಜೈಲು ಮತ್ತು ಎರಡು ಲಕ್ಷ ಜುಲ್ಮಾನೆ ವಿದಿಸಲಾಗುವುದು ಎಂದರು.

ಅಪ್ರಾಪ್ತ ವಯಸ್ಕರೊಂದಿಗೆ ವಿವಾಹ ಅಕ್ಷ್ಯಮ್ಯ ಅಪರಾಧವಾಗಿದ್ದು, ಪೋಕ್ಸೋ ಮೊಕದ್ದಮೆ ದಾಖಲಿಸಿ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಉದ್ಯಮಿ ಸದ್ಗುರು ಪ್ರದೀಪ್ ಮಾತನಾಡಿ, ಮಾದಕ ವ್ಯಸನ ಎಂಬುದು ಯುವಕರಿಗೆ ಒಂದು ದೊಡ್ಡ ಪಿಡುಗಾಗಿದೆ. ಸಂವಿಧಾನದಲ್ಲಿ ಕಠಿಣ ಶಿಕ್ಷೆ ಇದ್ದರೂ ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆ ಮಾಡುವವರ ಸಂಖ್ಯೆ ಹೆಚ್ಚುತ್ತಿದ್ದು ಅದು ಕಾಲೇಜು ಹಂತದ ವಿದ್ಯಾರ್ಥಿಗಳಲ್ಲಿ ಹೆಚ್ಚಾಗುತ್ತಿರುವುದು ದುರಂತ ಎಂದರು.

ಕಾರ್ಯಕ್ರಮದಲ್ಲಿ ದುರ್ಗಾ ಐಟಿಐ ಪ್ರಾಚಾರ್ಯ ಪುನೀತ್, ಕಚೇರಿ ಅಧೀಕ್ಷಕ ಎಲ್.ಕೆ ಮನೋಹರ್, ಉಪನ್ಯಾಸಕ ಡಿ.ಎಂ. ಕುಮಾರ್, ರಾಜು, ಧನಂಜಯ ನಟರಾಜ್, ವೈ ಕುಮಾರ್, ರಮೇಶ್, ಹರೀಶ್ ,ಮಹೇಶ್, ಪದ್ಮಾವತಿ, ಬಸವರಾಜ್, ಮುನಿಸ್ವಾಮಿ, ಗಿರಿಶ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.