ಕಲ್ಯಾಣಿ ಸಂರಕ್ಷಣೆ ಮಾಡಿಕೊಳ್ಳುವುದು ನಮ್ಮೆಲ್ಲರ ಹೊಣೆ

| Published : Aug 29 2025, 01:00 AM IST

ಕಲ್ಯಾಣಿ ಸಂರಕ್ಷಣೆ ಮಾಡಿಕೊಳ್ಳುವುದು ನಮ್ಮೆಲ್ಲರ ಹೊಣೆ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಇತಿಹಾಸ ಪ್ರಸಿದ್ದ ದೊಡ್ಡರಸನ ಕೊಳಕ್ಕೆ ವಿದ್ಯುತ್ ಕಂಬಗಳಿಗೆ ೨೫ಕ್ಕು ಹೆಚ್ಚು ಎಲ್‌ಇಡಿ ಲೈಟ್‌ಗಳನ್ನು ಅಳವಡಿಸಿರುವುದಕ್ಕೆ ಜಿಲ್ಲಾಧಿಕಾರಿ ಶಿಲ್ಪನಾಗ್ ಸ್ವಿಚ್ ಆನ್ ಮಾಡುವ ಮೂಲಕ ಉದ್ಘಾಟನೆ ಮಾಡಿದರು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ನಗರದ ಇತಿಹಾಸ ಪ್ರಸಿದ್ದ ದೊಡ್ಡರಸನ ಕೊಳಕ್ಕೆ ವಿದ್ಯುತ್ ಕಂಬಗಳಿಗೆ ೨೫ಕ್ಕು ಹೆಚ್ಚು ಎಲ್‌ಇಡಿ ಲೈಟ್‌ಗಳನ್ನು ಅಳವಡಿಸಿರುವುದಕ್ಕೆ ಜಿಲ್ಲಾಧಿಕಾರಿ ಶಿಲ್ಪನಾಗ್ ಸ್ವಿಚ್ ಆನ್ ಮಾಡುವ ಮೂಲಕ ಉದ್ಘಾಟನೆ ಮಾಡಿದರು.

ನಗರಸಭೆ ವತಿಯಿಂದ ಜಿಲ್ಲಾಧಿಕಾರಿಗಳ ಅನುಮೋದನೆ ಮೇರೆಗೆ ದೊಡ್ಡರಸನ ಕೊಳದ ಒಳ ಅವರಣಗಳಲ್ಲಿ ೨೫ಕ್ಕು ಹೆಚ್ಚು ಎಲ್‌ಇಡಿ ಲೈಟ್‌ಗಳನ್ನು ಅಳವಡಿಸಿ, ಕೊಳವನ್ನು ಸುಂದರವಾಗಿ ಸಾಯಂಕಾಲದ ಸಮಯದಲ್ಲಿ ವಾಯುವಿಹಾರ ಹಾಗೂ ಗಣೇಶ ಮುರ್ತಿಯನ್ನು ವಿರ್ಸಜನೆ ಮಾಡಲು ಅನುಕೂಲವಾಗುವಂತೆ ಮಾಡಲು ನಗರಸಭೆಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದರು.

ಅದರಂತೆ ನಗರಸಭೆ ವತಿಯಿಂದ ಕೊಳದ ಸುತ್ತಲು ೨೫ಕ್ಕು ಹೆಚ್ಚು ಎಲ್‌ಇಡಿ ಲೈಟ್‌ಗಳನ್ನು ಅಳವಡಿಸಲಾಗಿತ್ತು. ಗೌರಿ ಹಬ್ಬದ ದಿನದಂದು ಜಿಲ್ಲಾಧಿಕಾರಿಗಳಿಂದ ಉದ್ಘಾಟನೆಗೊಂಡಿತ್ತು. ಬಳಿಕ ಕೊಳವನ್ನು ವೀಕ್ಷಣೆ ಮಾಡಿದರು. ದೊಡ್ಡರಸನ ಕೊಳದಲ್ಲಿರುವ ಗಣಪತಿಗೆ ಪೂಜೆ ಸಲ್ಲಿಸಿ, ಗಣಪತಿಯ ವಿಶೇಷತೆಯ ಬಗ್ಗೆ ಮಾಹಿತಿ ಪಡೆದುಕೊಂಡರು.

ಬಳಿಕ ಮಾತನಾಡಿದ ಶಿಲ್ಪನಾಗ್ ಅವರು, ಹೃದಯ ಭಾಗದಲ್ಲಿ ಸುಂದರವಾದ ಕಲ್ಯಾಣಿ ಇದೆ. ಇದನ್ನು ಸಂರಕ್ಷಣೆ ಮಾಡಿಕೊಳ್ಳುವುದು ನಮ್ಮೆಲ್ಲರ ಹೊಣೆಯಾಗಿದೆ. ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಬೇಕು. ಅಲ್ಲದೇ ಕಲ್ಯಾಣಿ ಸುತ್ತಲು ಸಸಿಗಳನ್ನು ನೆಟ್ಟು ವಾಯುವಿಹಾರಕ್ಕೆ ಅವಕಾಶ ಮಾಡಿಕೊಟ್ಟರೆ, ವೃದ್ದರು ಮತ್ತು ಹಿರಿಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತದೆ. ಗಣಪತಿ ದರ್ಶನಕ್ಕೆ ಬರುವ ಭಕ್ತರು ಸಹ ಇಲ್ಲೇ ಸುಂದರ ಪರಿಸರ ಇದ್ದರೆ ಕಾಲ ಕಳೆಯುತ್ತದೆ. ಹೀಗಾಗಿ ಕೊಳದ ಅಭಿವೃದ್ದಿಗೆ ಜಿಲ್ಲಾಡಳಿತವು ಸಹ ಸಹಕಾರ ನೀಡಲಿದೆ. ಹೆಚ್ಚುವರಿಯಾಗಿ ಅಗತ್ಯವಾದ ಕಾಮಗಾರಿಗಳನ್ನು ನಗರಸಭೆ ಹಾಗೂ ಇತರೇ ಅನುದಾನದಿಂದ ಮಾಡೋಣ ಎಂದರು.

ನಗರಸಭೆ ಅಧ್ಯಕ್ಷ ಸುರೇಶ್ ಮಾತನಾಡಿ, ಕೇಂದ್ರ ಸರ್ಕಾರದಿಂದ ಕಲ್ಯಾಣಿ ಅಭಿವೃದ್ದಿ ಪಡಿಸಲು ೧.೫೦ ಕೋಟಿ ರು.ಗಳಿಗೆ ಕ್ರಿಯಾ ಯೋಜನೆ ಅನುಮೋದನೆಗೊಂಡಿದೆ. ಟಿಪಿಆರ್ ಸಿದ್ದವಾಗಿದ್ದು, ಅನುಮೋದನೆ ಬಳಿಕ ಕಾಮಗಾರಿ ಆರಂಭವಾಗಲಿದೆ. ಐತಿಹಾಸಿಕ ದೊಡ್ಡರಸನ ಕೊಳವನ್ನು ಉಳಿಸಿ, ನಮ್ಮ ಪರಂಪರೆಯನ್ನು ಕಾಪಾಡಿಕೊಳ್ಳೊಣ. ಇಂದಿನಿಂದ ಸತತವಾಗಿ ಒಂದು ವಾರಗಳ ಕಾಲ ಈ ಕಲ್ಯಾಣಿಯಲ್ಲಿ ಗಣಪತಿ ವಿರ್ಸಜನೆ ಮಾಡಲಾಗುತ್ತದೆ. ಸಾರ್ವಜನಿಕರು ಹಾಗೂ ಭಕ್ತರಿಗೆ ಯಾವುದೇ ರೀತಿ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಸುರೇಶ್, ಉಪಾಧ್ಯಕ್ಷೆ ಮಮತಾ ಬಾಲಸುಬ್ರಮಣ್ಯ, ಸದಸ್ಯರಾದ ಚಂದ್ರಶೇಖರ್, ರಾಘವೇಂದ್ರ, ಆಯುಕ್ತ ರಾಮದಾಸ್, ಮುಖಂಡರಾದ ನವೀನ್, ಮೊದಲಾಧವರು ಇದ್ದರು.