ಜಾನುವಾರುಗಳ ಜೀವ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ

| Published : May 12 2024, 01:20 AM IST

ಸಾರಾಂಶ

ಕೊಡಿಗೇನಹಳ್ಳಿ ಹೋಬಳಿ ಆಂಧ್ರದ ಗಡಿ ಭಾಗಕ್ಕೆ ಹೊಂದಿದ್ದು, ತೀವ್ರ ಬರಪೀಡಿತ ಪ್ರದೇಶವಾಗಿದೆ. ಹಾಗಾಗಿ ರೈತರು, ಕೃಷಿಕರು ತಮ್ಮ ದನ ಕರುಗಳಿಗೆ ಮೇವಿಲ್ಲದೆ ಪರದಾಡುತ್ತಿರುವುದನ್ನು ಮನಗಂಡ ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಅವರ ಸೂಚನೆ ಮೇರೆಗೆ ತಾಲೂಕು ಆಡಳಿತದಿಂದ ಜಾನುವಾರುಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಮೇವು ಬ್ಯಾಂಕ್‌ಗೆ ಚಾಲನೆ ನೀಡಿದ್ದೇವೆ

ಕನ್ನಡಪ್ರಭ ವಾರ್ತೆ ಮಧುಗಿರಿ

ಕೊಡಿಗೇನಹಳ್ಳಿ ಹೋಬಳಿ ಆಂಧ್ರದ ಗಡಿ ಭಾಗಕ್ಕೆ ಹೊಂದಿದ್ದು, ತೀವ್ರ ಬರಪೀಡಿತ ಪ್ರದೇಶವಾಗಿದೆ. ಹಾಗಾಗಿ ರೈತರು, ಕೃಷಿಕರು ತಮ್ಮ ದನ ಕರುಗಳಿಗೆ ಮೇವಿಲ್ಲದೆ ಪರದಾಡುತ್ತಿರುವುದನ್ನು ಮನಗಂಡ ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಅವರ ಸೂಚನೆ ಮೇರೆಗೆ ತಾಲೂಕು ಆಡಳಿತದಿಂದ ಜಾನುವಾರುಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಮೇವು ಬ್ಯಾಂಕ್‌ಗೆ ಚಾಲನೆ ನೀಡಿದ್ದೇವೆ ಎಂದು ಉಪವಿಭಾಗಾಧಿಕಾರಿ ಗೂಟೋರು ಶಿವಪ್ಪ ತಿಳಿಸಿದರು.

ತಾಲೂಕಿನ ಕೊಡಿಗೇನಹಳ್ಳಿ ಸರ್ವೋದಯ ಪ್ರೌಢಶಾಲಾ ಆವರಣದಲ್ಲಿ ಮೇವು ಬ್ಯಾಂಕ್‌ಗೆ ಚಾಲನೆ ನೀಡಿ ಮಾತನಾಡಿದರು. ಮೇವನ್ನು ಈ ಹೋಬಳಿಯ ಸುತ್ತ ಮುತ್ತಲ ಎಲ್ಲ ರೈತರಿಗೂ ತಲುಪಿಸುವ ವ್ಯವಸ್ಥೆಯನ್ನು ಕಂದಾಯ ಹಾಗೂ ಪಶು ಇಲಾಖಾಧಿಕಾರಿಗಳು ಮಾಡಿದ್ದಾರೆ. ಆದ ಕಾರಣ ರೈತರು ಯಾವುದೇ ಗೊಂದಲಗಳಿಗೆ ಆಸ್ಪದ ನೀಡದೆ ತಮ್ಮ ಜಾನುವಾರುಗಳಿಗೆ ದೊರೆಯುವ ಮೇವನ್ನು ಶಾಂತಿಯುತವಾಗಿ ಪಡೆದುಕೊಂಡು ಹೋಗುವ ಮೂಲಕ ಜಾನುವಾರುಗಳ ರಕ್ಷಣೆ ಮುಂದಾಗಬೇಕು ಎಂದರು.

ಗ್ರೇಡ್‌ 2 ತಹಸೀಲ್ದಾರ್‌ ತಿಪ್ಪೇಸ್ವಾಮಿ, ಉಪ ತಹಸೀಲ್ದಾರ್‌ ಸುದರ್ಶನ್, ಕದಾಯ ತನಿಖಾಧಿಕಾರಿ ಸಿ.ಆರ್‌.ರವೀಂದ್ರ, ಪಶು ಇಲಾಖೆ ಸಹಾಯ ನಿರ್ದೇಶಕ ಸಿದ್ದನಗೌಡ, ಮುಖ್ಯ ಪಶು ವೈದ್ಯಾಧಿಕಾರಿ ಡಾ.ಎಸ್‌.ಕೆ.ಜಗದೀಶ್‌, ಹಿರಿಯ ಪಶು ವೈದ್ಯಾಧಿಕಾರಿ ಡಾ.ಎನ್‌.ಪ್ರದೀಪ್‌, ವೈದ್ಯಾಧಿಕಾರಿ ಡಾ.ಮೋನೋಹರ, ಗ್ರಾಮ ಲೆಕ್ಕಿಗರಾದ ಶಿವಶಂಕರ್‌ ನಾಯ್ಕ್‌, ರಜಾಲಿ, ಎಂ.ಎನ್‌.ಮಹೇಶ್‌, ಸುರೇಶ್‌, ಶ್ರೀಧರ, ನರೇಂದ್ರರೆಡ್ಡಿ, ಗ್ರಾಮ ಸಹಾಯಕರು ಹಾಗೂ ರೈತರು ಇದ್ದರು.