ಸುತ್ತಮುತ್ತಲಿನ ವಾತಾವರಣ ಕಾಪಾಡುವುದು ಎಲ್ಲರ ಜವಾಬ್ದಾರಿ

| Published : Jul 30 2024, 12:49 AM IST

ಸಾರಾಂಶ

ಇಂದಿನ ದಿನಮಾನಗಳಲ್ಲಿ ಪರಿಸರ ಎಂಬುದು ತುಂಬಾ ಮುಖ್ಯ ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ಕಾಪಾಡುವುದು ನಮ್ಮ ಜವಾಬ್ದಾರಿ ಎಂದು ನ್ಯಾಯವಾದಿ ವೆರೋನಿಕಾ ಹೇಳಿದರು.

ಹಾನಗಲ್ಲ: ಇಂದಿನ ದಿನಮಾನಗಳಲ್ಲಿ ಪರಿಸರ ಎಂಬುದು ತುಂಬಾ ಮುಖ್ಯ ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ಕಾಪಾಡುವುದು ನಮ್ಮ ಜವಾಬ್ದಾರಿ ಎಂದು ನ್ಯಾಯವಾದಿ ವೆರೋನಿಕಾ ಹೇಳಿದರು.

ಗುಂಡೂರು ಗ್ರಾಮದಲ್ಲಿ ಮಕ್ಕಳ ಪಂಚಾಯಿತಿಯಿಂದ ನಡೆದ ವನಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳಿಗೆ ಪರಿಸರ ನಮ್ಮ ಜೀವನಕ್ಕೆ ಎಷ್ಟು ಮುಖ್ಯ ಗಾಳಿ ಇಲ್ಲದೇ ಯಾವ ಜೀವಿಯು ಜಗತ್ತಿನಲ್ಲಿ ಜೀವಿಸಲು ಸಾಧ್ಯವಿಲ್ಲ. ಇಂತಹ ಒಂದು ಮುಖ್ಯವಾದ ಪಾತ್ರ ನಮ್ಮ ಸುತ್ತಮುತ್ತಲಿನ ಪರಿಸರದ್ದಾಗಿದೆ. ಇಂದಿನ ಮಕ್ಕಳು ಇಂದಿನ ಪ್ರಜೆಗಳು ಎಂಬ ಮಾತು ಕೇವಲ ವೇದಾಂತವಾಗಿದೆ. ನಮ್ಮ ಮಕ್ಕಳು ಪರಿಸರವನ್ನು ಕಾಪಾಡಲು ಮುಂದಾಗಿ ಪ್ರತಿಯೊಬ್ಬರು ಒಂದು ಸಸಿಯನ್ನು ನೆಡುವುದರ ಮೂಲಕ ಇತರರಿಗೆ ಮಾದರಿಯಾಗಬೇಕು ಎಂದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಕುಮಾರ ಲಮಾಣಿ ಇವರು ಮಾತನಾಡಿ, ಮಕ್ಕಳ ಪಂಚಾಯಿತಿ ಎಂಬುದು ಒಂದು ಒಳ್ಳೆಯ ವೇದಿಕೆಯಾಗಿದ್ದು ನಮ್ಮ ಮಕ್ಕಳು ಮುಂದಿನ ಭವಿಷ್ಯದ ನಾಯಕರಾಗಲು ರೋಶನಿ ಸಂಸ್ಥೆಯು ಅವರಿಗೆ ಮಾರ್ಗದರ್ಶನ ನೀಡುವುದರೊಂದಿಗೆ ಇಂದಿನ ದಿವಸ ವನಮಹೋತ್ಸವ ಕಾರ್ಯಕ್ರಮವನ್ನು ಮಕ್ಕಳ ಪಂಚಾಯಿತಿ ಪ್ರತಿನಿಧಿಗಳೇ ಜವಾಬ್ದಾರಿವಹಿಸಿಕೊಂಡು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಕೌಶಲ್ಯವನ್ನು ಹೊಂದಿದ್ದಾರೆ ಜೊತೆಗೆ ನಮ್ಮ ಜೀವನವನ್ನು ನಡೆಸು ಮೂಲಭೂತ ಸೌಕರ್ಯಗಳು ಎಷ್ಟು ಪ್ರಾಮುಖ್ಯತೆಯನ್ನು ಹೊಂದಿದೆಯೋ ಅದೇ ರೀತಿ ಗಾಳಿ,ನೀರು ಕೂಡ ಮನುಷ್ಯರಾದ ನಮಗಷ್ಟೆ ಅಲ್ಲದೇ ಜಗತ್ತಿನ ಪ್ರತಿಯೊಬ್ಬ ಜೀವಿ ಜೀವಿಸಲು ಗಿಡ ಮರಗಳನ್ನು ಬೆಳೆಸುವುದು ನಮ್ಮೇಲ್ಲರ ಹೊಣೆಯಾಗಿದೆ ಆದ್ದರಿಂದ ಪ್ರತಿಯೊಬ್ಬರು ಸಸಿಗಳನ್ನು ನೆಟ್ಟು ಅದರ ಪಾಲನೆ ಪೋಷಣೆಗೆ ಮುಂದಾಗಬೇಕು ಎಂದರು.ಕಾರ್ಯಕ್ರಮದಲ್ಲಿ ಮಕ್ಕಳ ಪಂಚಾಯಿತಿ ೧೫ ಪ್ರತಿನಿಧಿಗಳಿಗೆ ಸಸಿಗಳನ್ನು ವಿತರಣೆ ಮಾಡಿ ಅವುಗಳನ್ನು ಉತ್ತಮವಾಗಿ ಪಾಲನೆ ಪೋಷಣೆ ಮಾಡಿದ ಪ್ರತಿನಿಧಿಗಳಿಗೆ ಸನ್ಮಾನ ಮಾಡುವುದಾಗಿ ತಿಳಿಸಿ ಕೊನೆಯಲ್ಲಿ ಎಲ್ಲಾ ಗಣ್ಯಮಾನ್ಯರು ಮತ್ತು ಮಕ್ಕಳು ಸೇರಿ ಸಸಿ ನೆಡುವುದರೊಂದಿಗೆ ಕಾರ್ಯಕ್ರಮವನ್ನು ಸಫಲಗೊಳಿಸಲಾಯಿತು.ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರಾದ ರಂಗಪ್ಪ ನಾಯಕ, ಚಂದ್ರಪ್ಪ ಲಮಾಣಿ, ಮಹಿಳಾ ಸಂಘದ ಸದಸ್ಯರಾದ ಹಕಮವ್ವ ಲಮಾಣಿ, ಗೌರವ್ವ ಲಮಾಣಿ ಮತ್ತು ಮಕ್ಕಳ ಪಂಚಾಯಿತಿ ಪ್ರತಿನಿಧಿ ನಾಗರಾಜ ಪೂಜಾರ, ಮಕ್ಕಳು ಗ್ರಾಮಸ್ಥರು, ರೋಶನಿ ಸಂಸ್ಥೆಯ ಸಂಯೋಜಕರಾದ ನಿರ್ಮಲಾ ಮಡಿವಾಳರ, ಪವಿತ್ರಾ ಜೋಗೆರ್ ಉಪಸ್ಥಿತರಿದ್ದರು.ಶ್ರೇಯಸ್ಸ ನಿರೂಪಿಸಿ, ಪ್ರತಿಕಾ ಲಮಾಣಿ ಸ್ವಾಗತಿಸಿ, ಲಕ್ಷ್ಮೀ ಲಮಾಣಿ ವಂದಿಸಿದರು.