ಸಾರಾಂಶ
ಶಿಗ್ಗಾಂವಿ: ಸುಳ್ಳು ಹೇಳುವುದು ಬಿಜೆಪಿ ಕಾರ್ಯವಾಗಿದೆ. ನುಡಿದಂತೆ ನಡೆಯುವ ಕಾಯಕ ಕಾಂಗ್ರೆಸ್ ಮಾಡುತ್ತಿದೆ ಎಂದು ಶಿಗ್ಗಾಂವಿ ಕಾಂಗ್ರೆಸ್ ಮುಖಂಡ ಯಾಸಿರಖಾನ್ ಪಠಾಣ್ ಹೇಳಿದರು.
ತಡಸ ಅಡವಿಸೋಮಾಪೂರ, ಕುನ್ನೂರು ಗ್ರಾಮದಲ್ಲಿ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಆಗಿದ್ದಾಗ ಬಸವರಾಜ್ ಬೊಮ್ಮಾಯಿ ಶಿಗ್ಗಾಂವಿ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಮಾಡಬಹುದಿತ್ತು . ಆದರೆ ಹಲವು ರಸ್ತೆ, ಕರೆ ತುಂಬಿಸುವ, ಗುಡಿ ಗೋಪುರಕ್ಕೆ ಅನುದಾನ ನೀಡದೆ ಕ್ಷೇತ್ರದ ಜನತೆಗೆ ವಂಚಿಸಿದ್ದಾರೆ. ಲೋಕಸಭಾ ಚುನಾಣೆಯಲ್ಲಿ ಶಿಗ್ಗಾಂವಿ ಕ್ಷೇತ್ರದಿಂದ ಹೆಚ್ಚು ಮತ ನೀಡಿದ್ದೀರಿ, ಉಪ ಚುನಾವಣೆಯಲ್ಲಿ ತಾವೆಲ್ಲ ಸಹಮತ ನೀಡಿ ಎಂದರು.ಪಕ್ಷವು ನಿರ್ಧರಿಸುವ ವ್ಯಕ್ತಿಯನ್ನು ನಾವೆಲ್ಲ ಒಂದಾಗಿ ಗೆಲ್ಲಿಸುತ್ತೇವೆ. ಶಿಗ್ಗಾಂವಿ ಕ್ಷೇತ್ರದಲ್ಲಿ ಈ ಸಲ ಗೆಲ್ಲುವುದು ಶತಃಸಿದ್ಧ ಕಾರ್ಯಕರ್ತರು ಗಾಳಿಮಾತಿಗೆ ತಲೆ ಕೆಡಿಸಿಕೊಳ್ಳದೆ ಪಕ್ಷದ ಸಲುವಾಗಿ ದುಡಿಯಿರಿ. ಈಗಾಗಲೇ ರಾಜ್ಯದಲ್ಲಿ ನಮ್ಮ ಸರ್ಕಾರ ಇದ್ದು, ಹಲವು ಬಗೆಯ ಅನುದಾನ ಪಡೆಯಲು, ಕುಂದು ಕೊರತೆಗೆ ಪರಿಹಾರ ಪಡೆದು ಬೆಳೆಯಲು ಸೂಕ್ತ ಸಮಯ ಇದಾಗಿದೆ ಎಂದರು.
ಪ್ರೇಮಾ ಪಾಟೀಲ್ ಮಾತನಾಡಿ, ಕಾಂಗ್ರೆಸ್ ಗೆಲುವು ಶಿಗ್ಗಾಂವಿಯಲ್ಲಿ ಈ ಬಾರಿ ನಿಶ್ಚಿತವಾಗಿದ್ದು, ಕಾರ್ಯಕರ್ತರು ಎಲ್ಲರೂ ಸೇರಿ ಉತ್ತಮ ರೀತಿಯಲ್ಲಿ ಕೆಲಸ ಮಾಡಬೇಕಾಗಿದೆ. ಸರ್ಕಾರ ನೀಡುತ್ತಿರುವ ಗ್ಯಾರಂಟಿ ಯೋಜನೆಗಳು ನಮ್ಮನ್ನು ಉತ್ಕೃಷ್ಟವಾಗಿ ಬೆಳೆಸುತ್ತಿವೆ ಎಂದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಸಂಜೀವ್ ನೀರಲಗಿ, ಸೋಮಣ್ಣ ಬೇವಿನಮರದ, ಶಿಗ್ಗಾಂವಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಬಿ.ಸಿ. ಪಾಟೀಲ್, ಸವಣೂರ ಅಧ್ಯಕ್ಷ ಎಂ.ಜೆ. ಮುಲ್ಲಾ, ಸುಭಾಸ ಮಾವೂರ, ಜಿಪಂ ಮಾಜಿ ಅಧ್ಯಕ್ಷ ಗುಡ್ಡಪ್ಪ ಜಲದಿ, ಬಾಬರ್ ಬಾವೂಜಿ, ಸುಧೀರ ಲಮಾಣಿ, ಮಹಾಂತೇಶ ಸಾಲಿ, ಅಬ್ದುಲ್, ಮಲ್ಲಮ್ಮ ಸೋಮನಕಟ್ಟಿ, ಅನಸೂಯಾ ಬಳಿಗೇರ, ಚಂದ್ರು ಕೊಡ್ಲಿವಾಡ, ಗದಿಗೆಪ್ಪ ಬಳ್ಳಾರಿ, ಗದಿಗೆಪ್ಪ ಬಳ್ಳಾರಿ, ಅಮ್ಜಾದಖಾನ್ ಪಠಾಣ, ಗ್ರಾ.ಪಂ. ಸದಸ್ಯ ಡಿ.ಆರ್. ಬೋಮ್ಮನಳ್ಳಿ, ಮಾಜಿ ಸದಸ್ಯ ಧರ್ಮಪ್ಪ ಕಿವಡನವರ, ಬಾಪೂಗೌಡ್ರ ಹೊಸಗೌಡ್ರ, ಆಸ್ಪಲಿ ಮತ್ತೇಖಾನ, ಜೈಲಾನಿ ಮತ್ತೇಖಾನ ಸೇರಿದಂತೆ ಹಲವಾರು ಗ್ರಾಮಸ್ಥರು ಇದ್ದರು. ಪಿ.ಡಿ. ಕಾಳಿ ಸ್ವಾಗತಿಸಿ, ವಂದಿಸಿದರು.