ಕೊಪ್ಪಳ ತಾಲೂಕಿನ ಹಿರೇಅರಳಿಹಳ್ಳಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸೋಮವಾರ ಮಕ್ಕಳ ಹಕ್ಕುಗಳ ಗ್ರಾಮಸಭೆ ನಡೆಯಿತು. ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶೇಖರಗೌಡ ಜಿ. ರಾಮತ್ನಾಳ ಭಾಗವಹಿಸಿದ್ದರು.
ಕೊಪ್ಪಳ: ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಕೊಪ್ಪಳ ಜಿಲ್ಲಾಡಳಿತ, ಕೊಪ್ಪಳ ಜಿಪಂ, ಯಲಬುರ್ಗಾ ತಾಲೂಕು ಆಡಳಿತ ಮತ್ತು ಹಿರೇಅರಳಿಹಳ್ಳಿ ಗ್ರಾಪಂ ಆಶ್ರಯದಲ್ಲಿ ಸೋಮವಾರ ಹಿರೇಅರಳಿಹಳ್ಳಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಮಕ್ಕಳ ಹಕ್ಕುಗಳ ಗ್ರಾಮಸಭೆ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶೇಖರಗೌಡ ಜಿ. ರಾಮತ್ನಾಳ ಅವರು, ಮಕ್ಕಳ ಹಕ್ಕುಗಳ ಒಡಂಬಡಿಕೆಗೆ ನಮ್ಮ ದೇಶವು 1992 ಡಿ. 11ರಂದು ಅನುಮೋದಿಸಿದ್ದು, ದೇಶದ 18 ವರ್ಷದೊಳಗಿನ ಎಲ್ಲ ಮಕ್ಕಳಿಗೂ ಬದುಕುವ, ಅಭಿವೃದ್ಧಿ ಮತ್ತು ವಿಕಾಸ ಹೊಂದುವ, ಶೋಷಣೆಯ ವಿರುದ್ಧ ಸಂರಕ್ಷಣೆಯ ಹಾಗೂ ಭಾಗವಹಿಸುವ ಹಕ್ಕುಗಳನ್ನು ಅನುಭವಿಸುವಂತಹ ಮತ್ತು ಮಕ್ಕಳಸ್ನೇಹಿ ವಾತಾವರಣ ನಿರ್ಮಿಸುವ ಅಗತ್ಯವಿದೆ ಎಂದರು.ಹಿರೇಅರಳಿಹಳ್ಳಿ ಗ್ರಾಪಂ ಅಧ್ಯಕ್ಷೆ ಶಾಂತಮ್ಮ ಹನುಮಪ್ಪ ವಾದಿ ಅಧ್ಯಕ್ಷತೆ ವಹಿಸಿದ್ದರು. ಯಲಬುರ್ಗಾ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶಶಿಧರ ಸಕ್ರಿ, ಕುಷ್ಟಗಿ ಕೆಕೆಎಸ್‌ಆರ್‌ಟಿಸಿ ಘಟಕದ ವ್ಯವಸ್ಥಾಪಕ ಸಣ್ಣ ಕುಂಟೆಪ್ಪ, ಹಿರೇಅರಳಿಹಳ್ಳಿಯ ಸಮೂಹ ಸಂಪನ್ಮೂಲ ವ್ಯಕ್ತಿ ಹುಸೇನ ಭಾಗವಾನ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಲೀಗಲ್ ಕಂ ಪ್ರೊಬೇಷನ್ ಆಫೀಸರ್ ಶಿವಲೀಲಾ ವನ್ನೂರು, ಅಂಗನವಾಡಿ ಮೇಲ್ವಿಚಾರಕಿ ಗಂಗಾ, ಹಿರೇಅರಳಿಹಳ್ಳಿ ಗ್ರಾಪಂ ಸದಸ್ಯರಾದ ತೀರ್ಥಪ್ಪ ಭಜಂತ್ರಿ, ಲಕ್ಷ್ಮಿದೇವಿ ದೇವಲಾಪುರ, ಶರಣಪ್ಪ ಹಳ್ಳಿಗುಡಿ, ದೇವಮ್ಮ, ಮಹೇಶ ಬಡಿಗೇರ, ವೆಂಕಟೇಶಗೌಡ ಪೊಲೀಸ್ ಪಾಟೀಲ್, ರವಿಚಂದ್ರಗೌಡ ಭಾವಿಕಟ್ಟಿ, ವಜ್ರಬಂಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಬಸವರಾಜ ಇಲ್ಲಾಳ, ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾರ್ಚಾರ್ಯ ಹನುಮಂತಪ್ಪಗೌಡ, ಹಿರೇ ಅರಳಿಹಳ್ಳಿ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಕಲ್ಲಯ್ಯ ಕೋಚಲಾಪುರಮಠ ಭಾಗವಹಿಸಿದ್ದರು.
ಹಿರೇಅರಳಿಹಳ್ಳಿ ಪಿಡಿಒ ಬಸವರಾಜ ಯರಗೇರಾ ಸ್ವಾಗತಿಸಿದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಆಪ್ತ ಸಮಾಲೋಚಕ ರವಿ ಬಡಿಗೇರ ವಂದಿಸಿದರು.