ಸಾರಾಂಶ
ನಮ್ಮ ನಾಡಿನ ಇತಿಹಾಸ ಕಾಲದಲ್ಲಿ ನಡೆದ ಘಟನೆಗಳ ಬಗ್ಗೆ ಮಕ್ಕಳಿಗೆ ತಿಳಿಸಿಕೊಡುವ ಮೂಲಕ ಅವರಲ್ಲಿ ಪ್ರಾಚೀನ ಕಾಲದ ಮಹತ್ವ ತಿಳಿಸಿಕೊಡುವುದು ಅಗತ್ಯವಾಗಿದೆ ಎಂದು ಸೋಮೇಶ್ವರ ಭಕ್ತರ ಸೇವಾ ಸಮಿತಿಯ ಅಧ್ಯಕ್ಷ ಚಂಬಣ್ಣ ಬಾಳಿಕಾಯಿ ಹೇಳಿದರು.
ಲಕ್ಷ್ಮೇಶ್ವರ: ನಮ್ಮ ನಾಡಿನ ಇತಿಹಾಸ ಕಾಲದಲ್ಲಿ ನಡೆದ ಘಟನೆಗಳ ಬಗ್ಗೆ ಮಕ್ಕಳಿಗೆ ತಿಳಿಸಿಕೊಡುವ ಮೂಲಕ ಅವರಲ್ಲಿ ಪ್ರಾಚೀನ ಕಾಲದ ಮಹತ್ವ ತಿಳಿಸಿಕೊಡುವುದು ಅಗತ್ಯವಾಗಿದೆ ಎಂದು ಸೋಮೇಶ್ವರ ಭಕ್ತರ ಸೇವಾ ಸಮಿತಿಯ ಅಧ್ಯಕ್ಷ ಚಂಬಣ್ಣ ಬಾಳಿಕಾಯಿ ಹೇಳಿದರು.
ಪಟ್ಟಣದ ಸೋಮೇಶ್ವರ ದೇವಸ್ಥಾನದಲ್ಲಿ ಗುರುವಾರ ಲಕ್ಷ್ಮೇಶ್ವರ ತಾಲೂಕು ಮಟ್ಟದ ಪ್ರಾಚ್ಯ ಪ್ರಜ್ಞೆ ಎನ್ನುವ ವಿಷಯದ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆಯು ಪ್ರೌಢಶಾಲಾ ಮಕ್ಕಳಿಗೆ ನಡೆದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ನಾಡಿನ ಪರಂಪರೆ ಹಾಗೂ ಇತಿಹಾಸ ಸಾರುವ ಸ್ಮಾರಕಗಳ ಕುರಿತು ನಮ್ಮ ವಿದ್ಯಾರ್ಥಿಗಳಿಗೆ ತಿಳಿಸಿಕೊಡುವುದರಿಂದ ಅವರಲ್ಲಿ ಇತಿಹಾಸ ಪ್ರಜ್ಞೆ ಜಾಗೃತವಾಗುತ್ತದೆ. ಇತಿಹಾಸ ಅರಿತವರು ಮಾತ್ರ ಇತಿಹಾಸ ನಿರ್ಮಿಸಬಲ್ಲರು. ನಮ್ಮ ನಾಡಿನಲ್ಲಿನ ಶಿಲ್ಪಕಲಾ ವೈಭವವನ್ನು ಮಕ್ಕಳಿಗೆ ತಿಳಿಸಿಕೊಡುವ ಮೂಲಕ ಅವರಲ್ಲಿ ಪ್ರಾಚೀನ ಪರಂಪರೆಯ ಬಗ್ಗೆ ಅರಿವು ಮೂಡಿಸುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು. ಪು.ಬಡ್ನಿಯ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಮಲ್ಲಿಕಾರ್ಜುನ ಹೊಸಮನಿ ಮಾತನಾಡಿ, ಮಕ್ಕಳಲ್ಲಿ ಇತಿಹಾಸದ ಅರಿವು ಮೂಡಿಸುವ ಕಾರ್ಯ ಇಂದಿನ ಅಗತ್ಯವಾಗಿದೆ. ಇತಿಹಾಸವು ನಮ್ಮ ನಾಡಿನ ಪುರಾತನ ಕಾಲದ ಮಹತ್ವ ಹಾಗೂ ಅದರ ಅರಿವು ವಿದ್ಯಾರ್ಥಿಗಳಿಗೆ ತಿಳಿಸಿಕೊಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು. ಸಮಾರಂಭದಲ್ಲಿ ಬಿಇಓ ಜಿ.ಎಂ. ಮುಂದಿನಮನಿ, ತಾಪಂ ಮಾಜಿ ಸದಸ್ಯ ಚನ್ನಪ್ಪ ಜಗಲಿ, ಸುರೇಶ ರಾಚನಾಯಕರ ಮಾತನಾಡಿದರು. ಬಿಆರ್‌ಸಿ ಈಶ್ವರ ಮೆಡ್ಲೇರಿ ಪ್ರಾಸ್ಥಾವಿಕವಾಗಿ ಮಾತನಾಡಿದರು. ಜಿ.ಎಸ್.ಗುಡಗೇರಿ ಸ್ವಾಗತಿಸಿದರು. ಉಮೇಶ ನೇಕಾರ ಕಾರ್ಯಕ್ರಮ ನಿರ್ವಹಿಸಿದರು. ಈ ವೇಳೆ ಎಸ್.ಕೆ. ಹವಾಲ್ದಾರ. ಹಾಷಮ ಗುತ್ತಲ, ಪ್ರಕಾಶ ಪಿ, ಎಸ್.ಡಿ.ಲಮಾಣಿ, ಎಲ್.ವಿ.ನಡುವಿನಮನಿ, ಎನ್.ಆರ್.ಸಾತಪುತೆ, ನಿಂಗಪ್ಪ ಗೊರವರ, ಹರೀಶ ಸೇಂದ್ರಗಯ, ಉಮೇಶ ಹುಚ್ಚಯ್ಯನಮಠ, ಬಿ.ಎಂ. ಯರಗುಪ್ಪಿ, ಆರ್. ಮಹಾಂತೇಶ, ಸತೀಶ ಬೊಮಲೆ ಇದ್ದರು. ಪ್ರಾಚ್ಯ ಪ್ರಜ್ಞೆ ಕಾರ್ಯಕ್ರಮದಲ್ಲಿನ ನಡೆದ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳ ಹೆಸರು ಹಾಗೂ ವಿಭಾಗ. ಚಿತ್ರಕಲಾ ಸ್ಪರ್ಧೆ-ವಿಕಾಸ ಗುಡಿಮನಿ-ಪ್ರಥಮ, ಪ್ರದೀಪ ಹರಿಜನ- ದ್ವಿತೀಯ, ಮಹ್ಮದ್ ಹನೀಫ್-ತೃತೀಯ ಪ್ರಬಂಧ ಸ್ಪರ್ಧೆ-ಚನ್ನಮ್ಮ ಕೋಳಿವಾಡ-ಪ್ರಥಮ, ರಚಿತಾ ಸಂಶಿ ದ್ವಿತೀಯ, ಪುಷ್ಪಾ ರಣತೂರ-ತೃತೀಯಭಾಷಣ ಸ್ಪರ್ಧೆ-ರಕ್ಷಿತಾ ಸಂಗನಪೇಟೆ-ಪ್ರಥಮ, ಹರ್ಷಿತಾ ಗಡ್ಡದೇವರಮಠ ದ್ವಿತೀಯ, ಸ್ನೇಹಾ ಕರ್ಜಗಿ ತೃತೀಯ. ರಸ ಪ್ರಶ್ನೆ ಸ್ಪರ್ಧೆ-ಸರ್ಕಾರಿ ಪ್ರೌಢಶಾಲೆ ಗೊಜನೂರ-ಪ್ರಥಮ, ಸರ್ಕಾರಿ ಪ್ರೌಢಶಾಲೆ ಪು.ಬಡ್ನಿ- ದ್ವಿತೀಯ ಸ್ಥಾನ ಪಡೆದುಕೊಂಡರು.