ಸಾರಾಂಶ
850 ವರ್ಷಗಳ ಹಿಂದೆ ಬಸವಣ್ಣನವರು ಅನುಭವ ಮಂಟಪ ಮೂಲಕ ಪ್ರಜಾಪ್ರಭುತ್ವಕ್ಕೆ ಅಡಿಪಾಯ ಹಾಕಿ ಮಹಿಳೆಯರಿಗೂ ಅವಕಾಶ ಕಲ್ಪಿಸಿ, ಸಮಾನತೆ ಸಾರಿದವರು. ನಾವು ಕೇವಲ ಬಸವಣ್ಣನವರನ್ನು ಪೂಜಿಸಿದರೆ ಸಾಲದು ಅವರ ವಚನಗಳನ್ನು ಪಚನ ಮಾಡಿಕೊಂಡು ಅದರಂತೆ ನಡೆಯಬೇಕು ಎಂದು ಎಸಿ ಅಬೀದ್ ಗದ್ಯಾಳ ಹೇಳಿದರು.
ಕನ್ನಡಪ್ರಭ ವಾರ್ತೆ ಇಂಡಿ:
850 ವರ್ಷಗಳ ಹಿಂದೆ ಬಸವಣ್ಣನವರು ಅನುಭವ ಮಂಟಪ ಮೂಲಕ ಪ್ರಜಾಪ್ರಭುತ್ವಕ್ಕೆ ಅಡಿಪಾಯ ಹಾಕಿ ಮಹಿಳೆಯರಿಗೂ ಅವಕಾಶ ಕಲ್ಪಿಸಿ, ಸಮಾನತೆ ಸಾರಿದವರು. ನಾವು ಕೇವಲ ಬಸವಣ್ಣನವರನ್ನು ಪೂಜಿಸಿದರೆ ಸಾಲದು ಅವರ ವಚನಗಳನ್ನು ಪಚನ ಮಾಡಿಕೊಂಡು ಅದರಂತೆ ನಡೆಯಬೇಕು ಎಂದು ಎಸಿ ಅಬೀದ್ ಗದ್ಯಾಳ ಹೇಳಿದರು.ಪಟ್ಟಣದ ಮಿನಿ ವಿಧಾನಸೌಧದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಬಸವಣ್ಣ ಸಾಂಸ್ಕೃತಿಕ ನಾಯಕ ಎಂದು ರಾಜ್ಯ ಸರ್ಕಾರ ಘೋಷಿಸಿದ ಪ್ರಯುಕ್ತ ಬಸವಣ್ಣನವರ ಭಾವಚಿತ್ರ ಅನಾವರಣಗೊಳಲಾಯಿತು. ನಂತರ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಮನುಷ್ಯ ಮನುಷ್ಯನನ್ನು ಪ್ರೀತಿಸಿದರೆ ಸದ್ಗುಣ, ಮನುಷ್ಯ ಮನುಷ್ಯನನ್ನು ದ್ವೇಷಿಸಿದರೆ ದುರ್ಗಣ ಎಂದು ಬಸವಣ್ಣನವರು ಸಾರಿ ಸಾರಿ ಹೇಳಿದ್ದಾರೆ. ಬಸವಣ್ಣನವರ ಸಮಕಾಲಿನ ಎಲ್ಲ ಶರಣರ ವಚನಗಳು ಇಂದಿನ ಬದುಕಿಗೆ ದಾರಿ ಎಂದು ಹೇಳಿದರು.
ತಹಸೀಲ್ದಾರ್ ಮಂಜುಳಾ ನಾಯಕ, ಶ್ರೀ ಭಿಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕ, ಕಾಂಗ್ರೆಸ್ ಮುಖಂಡ ಜಟ್ಟೆಪ್ಪ ರವಳಿ ಮಾತನಾಡಿದರು.ಉಪ ತಹಸೀಲ್ದಾರ್ ಬಸವರಾಜ ರಾವೂರ, ಆಹಾರ ನಿರೀಕ್ಷಕ ಪರಮಾನಂದ ಹೂಗಾರ, ಎಇಇ ಚವ್ಹಾಣ, ಪುರಸಭೆ ಸದಸ್ಯ ಅನಿಲಗೌಡ ಬಿರಾದಾರ, ಶಂಕರ ಸೌಧಿ, ಶ್ರೀಕಾಂತ ಬಡಿಗೇರ, ವಸತಿ ನಿಲಯದ ವಾರ್ಡನ್ ಸುಗೂರ, ಚಂದ್ರಶೇಖರ ಹೊಸಮನಿ ಮೊದಲಾದವರು ಈವೇಳೆ ಇದ್ದರು.