ಸಾರಾಂಶ
ಚನ್ನಗಿರಿ ಪಟ್ಟಣದ ಕಲ್ಲುಸಾಗರ ಬೀದಿಯ ಹಿರೇಮಠದಲ್ಲಿ ಶನಿವಾರ ಸಂಜೆ ಭೂಮಿ ಪೂರ್ಣಿಮೆಯ ನಿಮಿತ್ತವಾಗಿ 154ನೇ ಶಿವಾನುಭವ ಗೋಷ್ಠಿಯನ್ನು ನಡೆಸಲಾಯಿತು. ಸಮಾರಂಭದ ದಿವ್ಯ ಸಾನಿಧ್ಯವನ್ನು ಶ್ರೀ ಮಠದ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿದರು.
- ಚನ್ನಗಿರಿ ಕಲ್ಲುಸಾಗರ ಬೀದಿ ಹಿರೇಮಠದಲ್ಲಿ ಕಾರ್ಯಕ್ರಮ - - - ಕನ್ನಡಪ್ರಭ ವಾರ್ತೆ ಚನ್ನಗಿರಿ
ಪಟ್ಟಣದ ಕಲ್ಲುಸಾಗರ ಬೀದಿಯ ಹಿರೇಮಠದಲ್ಲಿ ಶನಿವಾರ ಸಂಜೆ ಭೂಮಿ ಪೂರ್ಣಿಮೆಯ ನಿಮಿತ್ತವಾಗಿ 154ನೇ ಶಿವಾನುಭವ ಗೋಷ್ಠಿಯನ್ನು ನಡೆಸಲಾಯಿತು. ಸಮಾರಂಭದ ದಿವ್ಯ ಸಾನಿಧ್ಯವನ್ನು ಶ್ರೀ ಮಠದ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿದರು.ಶ್ರೀಗಳು ಮಾತನಾಡಿ, ಶಿವಾನುಭವ ಗೋಷ್ಠಿಯಂಥ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತರು ಭಾಗವಹಿಸಬೇಕು. ಇದರಿಂದ ಸಾತ್ವಿಕ ಮನೋಭಾವನೆಗಳು ದೊರೆಯುವ ಜೊತೆಗೆ ಉತ್ತಮವಾದ ಸಂಸ್ಕಾರವನ್ನು ಹೊಂದಲು ಸಾಧ್ಯ ಎಂದರು.
ಇಂದಿನ ದಿನಗಳಲ್ಲಿ ಕೊಲೆ, ಸುಲಿಗೆ, ದರೋಡೆಯಂಥ ಅಮಾನವೀಯ ಕೃತ್ಯಗಳು ನಡೆಯುತ್ತಿವೆ. ಇದು ಪ್ರಪಂಚದ ಅವನತಿಯ ಸಂಕೇತವಾಗಿದೆ. ಮನುಷ್ಯ ಮನುಷ್ಯರ ಮಧ್ಯ ದ್ವೇಷದ ಜ್ವಾಲೆ ಬೆಳೆಯಬಾರದು. ಹುಬ್ಬಳಿಯ ಎರಡು ಜನ ಹೆಣ್ಣುಮಕ್ಕಳು ಮತ್ತು ಚಿತ್ರದುರ್ಗದ ರೇಣುಕಾಸ್ವಾಮಿಯಂತಹ ಯುವಪೀಳಿಗೆ ದುರಂತ ಸಾವುಗಳಿಗೆ ಈಡಾಗುತ್ತೀರುವುದು ಸರಿಯಲ್ಲ ಎಂದರು.ಮುಖ್ಯ ಅತಿಥಿಗಳಾಗಿ ಬಸವಾಪಟ್ಟಣ ಸೇವಾದಳದ ನಿವೃತ್ತ ಅಧಿಕಾರಿ ಶಿಕ್ಷಕ ಸಿದ್ದಪ್ಪ, ಶಿವಕೇಶವ ಭಜನಾ ಮಂಡಳಿ ಅಧ್ಯಕ್ಷ ಜಯಶಂಕರ್, ಕರಿಸಿದ್ದಪ್ಪ ಮಾಸ್ತರ್ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಬಾಲಾಜಿ, ಅಕ್ಕನ ಬಳಗ, ಶಿವಕೇಶವ ಭಜನಾ ತಂಡದ ಮಹಿಳಾ ಸದಸ್ಯರು ಸುಶ್ರಾವ್ಯವಾಗಿ ವಚನ ಗೀತೆಗಳನ್ನು ಹಾಡಿದರು.- - -
-23ಕೆಸಿಎನ್‌ಜಿ1:ಚನ್ನಗಿರಿ ಪಟ್ಟಣದ ಕಲ್ಲುಸಾಗರ ಬೀದಿಯ ಹಿರೇಮಠದಲ್ಲಿ ಶನಿವಾರ ಸಂಜೆ ಭೂಮಿ ಪೂರ್ಣಿಮೆಯ ನಿಮಿತ್ತವಾಗಿ 154ನೇ ಶಿವಾನುಭವ ಗೋಷ್ಠಿ ನಡೆಸಲಾಯಿತು.