ಸಾರಾಂಶ
ಸವಣೂರು: ಸವಣೂರಿನಲ್ಲಿ ಗುರು ಭವನ ಇಲ್ಲದಿರುವುದು ವಿಷಾದನೀಯ ಸಂಗತಿಯಾಗಿದೆ. ಹಾವೇರಿ ಸಂಸದರಾದ ಬಸವರಾಜ ಬೊಮ್ಮಾಯಿ ಅವರು ಸ್ಥಳೀಯ ಶಾಸಕರಾಗಿ, ಮುಖ್ಯಮಂತ್ರಿಯಾಗಿದ್ದರು ಆಗ ಸಹ ಶಿಕ್ಷಕರಿಗೆ ಒಂದು ಭವನ ನಿರ್ಮಾಣಕ್ಕೆ ಸಹಕಾರ ಯಾಕೇ ನೀಡಲಿಲ್ಲ ಎಂಬುವದು ಆಶ್ಚರ್ಯ ತರಿಸಿದೆ ಎಂದು ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.ಜಿಪಂ, ತಾಪಂ, ಶಿಕ್ಷಣ ಇಲಾಖೆ, ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಹಾಗೂ ವಿವಿಧ ಶಿಕ್ಷಕರ ಸಂಘಟನೆಯ ಸಹಯೋಗದಲ್ಲಿ ಪಟ್ಟಣದ ಶ್ರೀ ಚನ್ನಬಸವೇಶ್ವರ ಮಂಗಲ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ೧೩೬ನೇ ಜನ್ಮದಿನ ಆಚರಣೆ, ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾರ್ವಜನಿಕರು ಶಿಕ್ಷಕರ ದಿನ ಆಚರಿಸುವಂತಾಗಬೇಕು ಎಂಬ ಮಾತು ಕೇಳಿ ಬರುತ್ತಿರುವದು ಸಂತಸದ ಸಂಗತಿಯಾಗಿದೆ. ೧೨ ಗುಂಟೆ ನಿವೇಶನ ಗುರುತಿಸಿ ಗುರುಭವನ ನಿರ್ಮಾಣಕ್ಕೆ ಚಾಲನೆ ನೀಡಲಾಗುವದು. ಶಿಕ್ಷಕರ ಬೇಡಿಕೆಗಳ ಈಡೇರಿಕೆಗಾಗಿ ಕೈಗೊಳ್ಳುತ್ತಿರುವ ಹೋರಾಟಕ್ಕೆ ಬೆಂಬಲ ನೀಡಲಾಗುವುದು ಎಂದರು.ಕಾರ್ಯಕ್ರಮದ ಸಾನಿಧ್ಯವನ್ನು ಗಂಗಾವತಿ ಕಲ್ಮಠದ ಡಾ. ಕೊಟ್ಟೂರ ಸ್ವಾಮೀಜಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ನೀಡುವ ಶಿಕ್ಷಣವೇ ಉತ್ತಮ ರಾಷ್ಟ್ರ ನಿರ್ಮಾಣಕ್ಕೆ ಅಡಿಪಾಯವಾಗಲಿದೆ. ಪ್ರತಿ ಮನುಷ್ಯನ ನೆನಪಿನ ಅಂಗಳದಲ್ಲಿ ಉಳಿಯುವ ವ್ಯಕ್ತಿ ಪ್ರಾಥಮಿಕ ಶಿಕ್ಷಣವನ್ನು ನೀಡಿದ ಶಿಕ್ಷಕ. ಆದ್ದರಿಂದ, ಶಿಕ್ಷಕ ಓದಿ ಓದಿಸುವ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವ ಶಿಕ್ಷಕ ಮಾತ್ರ ಇಂದಿನ ದಿನಮಾನದಲ್ಲಿ ನಿಜವಾದ ಉತ್ತಮ ಶಿಕ್ಷಕನಾಗಲು ಸಾಧ್ಯವಾಗಲಿದೆ. ಶಿಕ್ಷಣ ಬಲ್ಲದ ವ್ಯಕ್ತಿ ಶಿಕ್ಷಣ ಮಂತ್ರಿಯಾಗುತ್ತಿರುವದು ರಾಷ್ಟ್ರದ ದುರಂತವಾಗಿದೆ. ಪರಮ ಪಾವಿತ್ರ್ಯದ ವೃತ್ತಿ ಶಿಕ್ಷಕ ವೃತ್ತಿಯಾಗಿದೆ. ಒತ್ತಡದ ಮಧ್ಯ ನಿಷ್ಠೆಯ ಕಾಯಕದೊಂದಿಗೆ ಉತ್ತಮ ಸಮಾಜ ನಿರ್ಮಾಣಕ್ಕೆ ನಿಮ್ಮ ಕೊಡಗೆಯನ್ನು ನೀಡಲು ಸರ್ವ ಗುರು ಬಳಗ ಮುಂದಾಗಲಿ ಎಂದರು.ನಿವೃತ್ತ ಜಂಟಿ ನಿರ್ದೇಶಕ ಗಜಾನನ ಮನ್ನಿಕೇರಿ ಉಪನ್ಯಾಸ ನೀಡಿದರು. ದೊಡ್ಡಹುಣಸೆಕಲ್ಮಠದ ಚನ್ನಬಸವ ಸ್ವಾಮೀಜಿ, ಅಡವಿಸ್ವಾಮಿಮಠದ ಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಬಿಇಒ ಎಂ.ಎಫ್. ಬಾರ್ಕಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಹಸೀಲ್ದಾರ್ ಭರತರಾಜ್ ಕೆ.ಎನ್., ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ಬಸವರಾಜ ಚಳ್ಳಾಳ, ವಿವಿಧ ಶಿಕ್ಷಕರ ಸಂಘಗಳ ಅಧ್ಯಕ್ಷರಾದ ಶಿವಯೋಗಿ ಆಲದಕಟ್ಟಿ, ಎನ್.ಕೆ. ಪಾಟೀಲ, ಪಿ.ಎಸ್. ಗುಜ್ಜರ, ಪಿ.ವಿ. ಗುತ್ತಲ, ಕೆ.ಎಸ್. ಗಾಣಗೇರ, ಜಿ.ಎಸ್. ಗುಂಜಳ, ಪಿ.ಬಿ. ಮುಳ್ಳಳ್ಳಿ, ಐ.ಎಸ್. ಮುದಗಲ್ ಹಾಗೂ ಇತರರು ಪಾಲ್ಗೊಂಡಿದ್ದರು. ಬಿಆರ್‌ಸಿ ಎಂ.ಎನ್. ಅಡಿವೆಪ್ಪನವರ, ಸಿಆರ್‌ಪಿ ನಾಗರಾಜ ಬಂಡಿವಡ್ಡರ ಹಾಗೂ ಬಿಆರ್‌ಪಿ ಡಿ.ಬಿ. ತೋಟದ ಕಾರ್ಯಕ್ರಮ ನಿರ್ವಹಿಸಿದರು.ನಿವೃತ್ತ ಶಿಕ್ಷಕರಿಗೆ ಸನ್ಮಾನನಿವೃತ್ತಿ ಹೊಂದಿದ ಶಿಕ್ಷರಾದ ಬಿ.ಎಂ. ಚಕ್ರಸಾಲಿ, ಬಿ.ಕೆ. ಹಾಲಗಿ, ಎಸ್.ಎ. ಗುಳಗುಂಡಿ, ಸುರೇಶ ಕಟಗಿ, ಎಸ್.ಎಸ್. ಬೆಂಚಿಹಳ್ಳಿ, ವಾಯ್.ಜಿ. ಹರಕುಣಿ, ವಿ.ಎಸ್. ಕೋಟಿಗೌಡ್ರ, ಬಿ.ಎಚ್. ಬೂದಿಹಾಳ, ಎಂ.ಸಿ. ಚುರ್ಚಿ, ಎನ್.ವಿ. ರಗಪ್ಪನವರ, ಎಫ್.ಆರ್. ದೇಸಾಯಿ, ಜೆ.ಎ. ಕಡೆಮನಿ, ಎಲ್.ಎಂ.ಶೇಷಗಿರಿ, ಮಂಜುನಾಥ ವಾಲ್ಮೀಕಿ, ನಾಗಪ್ಪ ಅಂಬಿಗೇರ, ನೇತಾಜಿ ಮಾಳಿಗೇರ, ಮಹ್ಮದಶಪಿ ಬೆಟ್ಕುಳಿಕರ, ಎಸ್.ಬಿ. ಭಜಂತ್ರಿ, ಮಹಾಂತೇಶ ಎಂ., ನಿಸಾರಹ್ಮದ ಚಂಗಾಪುರ, ಇಮರಶಾ ಪೀರಜಾದೆ, ವೆಂಕಪ್ಪ ಗುಡ್ಲಾನೂರ, ಎಸ್.ಜಿ. ಕೋರಿ, ಉಳಿವೆಪ್ಪ ಕಬನೂರ, ಬಸನಗೌಡ, ದ್ಯಾಮನಗೌಡ್ರ, ಹಾಲಪ್ಪ ಬಾಳಿಕಾಯಿ, ಶಂಕರಪ್ಪ ಗಂಗಣ್ಣವರ, ಶಿವಣ್ಣ ಕೋರಿ ಅವರನ್ನು ಸನ್ಮಾನಿಸಲಾಯಿತು. ಸೇವೆಯಲ್ಲಿ ಅಕಾಲಿಕವಾಗಿ ಮರಣ ಹೊಂದಿದ ಶಿಕ್ಷಕರಾದ ಸಿ.ಡಿ. ಕುದರಿ, ಎಸ್.ಎಫ್. ಲಕ್ಕನಗೌಡ್ರ ಶಿಕ್ಷಕರಿಗೆ ಗೌರವ ನಮನ ಸಲ್ಲಿಸಲಾಯಿತು.