ಬಿಜೆಪಿಗೆ ಬಹುಮತವಿದ್ದರೂ ಅಧಿಕಾರ ಹಿಡಿಯದೇ ಇರುವುದು ಖೇದಕರ

| Published : Sep 10 2024, 01:37 AM IST

ಸಾರಾಂಶ

ಪಟ್ಟಣ ಪಂಚಾಯತಿಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತವಿದ್ದರೂ ಅಧಿಕಾರ ಹಿಡಿಯುವಲ್ಲಿ ವಿಫಲವಾಗಿದ್ದು ವಿಷಾದನೀಯ ಎಂದು ವಿ.ವ.ಸಂಘದ ಅಧ್ಯಕ್ಷ ಮಹಾಂತೇಶ ಮೆಣಸಗಿ ಹೇಳಿದರು.

ಕನ್ನಡಪ್ರಭ ವಾರ್ತೆ ಕೆರೂರ

ಪಟ್ಟಣ ಪಂಚಾಯತಿಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತವಿದ್ದರೂ ಅಧಿಕಾರ ಹಿಡಿಯುವಲ್ಲಿ ವಿಫಲವಾಗಿದ್ದು ವಿಷಾದನೀಯ ಎಂದು ವಿ.ವ.ಸಂಘದ ಅಧ್ಯಕ್ಷ ಮಹಾಂತೇಶ ಮೆಣಸಗಿ ಹೇಳಿದರು.

ಪಟ್ಟಣದ ಹಳಪೇಟೆ ಬಡಾವಣೆಯ ಅಭಿಮಾನಿ ಬಳಗದಿಂದ ಪ.ಪಂ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ನಿರ್ಮಾಲಾ ಮದಿ ಪತಿ ಸದಾನಂದ ಮದಿ ಹಾಗೂ ಕಾಂಗ್ರೆಸ್‌ನ ಉಪಾಧ್ಯಕ್ಷ ಅಭ್ಯರ್ಥಿಯಾಗಿ ಗೆದ್ದ ಮೋದೀನಸಾಬ ಚಿಕ್ಕೂರ ಇವರಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಸರ್ಕಾರ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಮೀಸಲಾತಿ ಆದೇಶ ಹೊರಡಿಸಿದ ಮೇಲೆ ರಾಜಕೀಯ ಚಟುವಟಿಕೆಗಳು ದಿನಕ್ಕೊಂದು ತಿರುವು ಪಡೆದವು. ಸದಸ್ಯರನ್ನು ಸವಾಲಿಗಿಟ್ಟ ಸಂದರ್ಭದಲ್ಲಿ ನಿಷ್ಠಾವಂತರಿಗೆ ನೋವಾಗಿದ್ದು ಸಹಜ. ಬಿಜೆಪಿಯ ನಿಷ್ಠರಾದ ನಿರ್ಮಲಾ ಮದಿ ಬಂಡಾಯ ಅಭ್ಯರ್ಥಿಯಾಗಿ ಗೆಲ್ಲುವಂತಾ ಪರಿಸ್ಥಿತಿ ನಿರ್ಮಾಣವಾಯಿತು. ವಾಸ್ತವವನ್ನು ಅರಿತುಕೊಳ್ಳದೆ ಪಕ್ಷದ ನಿಷ್ಠರನ್ನು ಪಕ್ಷದಿಂದ ಉಚ್ಚಾಟನೆಗೆ ಕ್ರಮ ಕೈಗೊಂಡರೆ ನಿಮಗೆ ವೋಟು ಹಾಕುವವರಾರು ಪಕ್ಷದ ಬಲವರ್ಧನೆ ಕುರಿತು ಪಕ್ಷದ ಹಿರಿಯರು ಯೋಚಿಸಬೇಕು ಎಂದರು.ಅಧ್ಯಕ್ಷೆ ನಿರ್ಮಲಾ ಮದಿ ಮಾತನಾಡಿದರು. ಸಾನ್ನಿಧ್ಯ ವಹಿಸಿದ್ದ ಚರಂತಿಮಠದ ಡಾ.ಶಿವಕುಮಾರ ಶಿವಾಚಾರ್ಯ ಶ್ರೀಗಳು, ದೇವಾಂಗಮಠದ ರುದ್ರಮುನಿ ಶ್ರೀ ಆಶೀರ್ವಚನ ನೀಡಿದರು. ಸಮಾರಂಭದಲ್ಲಿ ಪ್ರಮುಖರಾದ ಬಿ.ಎಂ.ಬಂತಿ, ಪರಶುರಾಮ್‌ ಮಲ್ಲಾಡದ, ಬಸವರಾಜ ಹುಂಡೇಕಾರ, ಧನಂಜಯ ಕಂದಕೂರ, ನಿಂಗಪ್ಪ ಬಡಿಗೇರ, ಬಸವರಾಜ ಮಠಪತಿ, ಮಹಾಂತೇಶ ಕತ್ತಿ ಇದ್ದರು.