ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಜಿಲ್ಲೆಯಲ್ಲಿ ಸಾರ್ವಜನಿಕರು ಬಾರಿ ಮಳೆಯ ನಡುವೆಯು ಅದ್ಧೂರಿಯಾಗಿ ದೀಪಾವಳಿ ಆಚರಿಸಿದ್ದಾರೆ.ದೀಪಾವಳಿಯ ದಿನವಾದ ಅ. 22 ರಂದು ಮೈಸೂರು ಜಿಲ್ಲೆಯಾದ್ಯಂತ ಬಾರಿ ಮಳೆ ಆಯಿತು. ಇದರಿಂದಾಗಿ ಪಟಾಕಿ ಹೊಡೆಯುವವರಿಗೆ ತೀವ್ರ ಬೇಸರವಾಗಿತ್ತು. ಮಳೆ ನಿಲ್ಲುವುದನ್ನೇ ಕಾಯುತ್ತಿದ್ದ ಜನತೆ ರಾತ್ರಿ 9 ಗಂಟೆಯ ಬಳಿಕ ಪಟಾಕಿ ಸದ್ದು ಆರ್ಭಟಿಸಿತು.ರಾತ್ರಿ 9 ಗಂಟೆಯವರೆಗೂ ಬಾರಿ ಮಳೆಯಾದ್ದರಿಂದ ಯಾರೂ ಮನೆಯಿಂದ ಆಚೆ ಬರಲಿಲ್ಲ. ಆದರೆ 9 ಗಂಟೆ ವೇಳೆಗೆ ಹಲವೆಡೆ ಮಳೆಯ ಆರ್ಭಟ ಕಡಿಮೆ ಆಗುತ್ತಿದ್ದಂತೆಯೇ ಪಟಾಕಿ ಸದ್ದು ಜೋರಾಯಿತು.ಮೈಸೂರು ನಗರದ ಕೆಲವೆಡೆ ರಾತ್ರಿ 12 ಗಂಟೆಯವರೆಗೂ ಪಟಾಕಿ ಹೊಡೆದಿದ್ದಾರೆ. ಆದರೆ ಅದೃಷ್ಟವಶಾತ್ ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕುಮಾರಸ್ವಾಮಿ ತಿಳಿಸಿದ್ದಾರೆ.ಈ ಬಾರಿ ಪಟಾಕಿ ವ್ಯಾಪಾರ ಜೋರಾಗಿತ್ತು. ಹೆಚ್ಚಾಗಿ ಸಾರ್ವಜನಿಕರು ಹಸಿರು ಪಟಾಕಿ ಮೊರೆ ಹೋದರು. ಆದರೆ ಭರ್ಜರಿಯಾಗಿ ಹಬ್ಬ ಆಚರಿಸಲು ಮಳೆ ಅಡ್ಡಿಯಾಯಿತು.ಬುಧವಾರ ಪಟಾಕಿ ಹೊಡೆಯಲಾಗದೆ ಹೋದವರು, ಗುರುವಾರ ಅಂದರೆ ಅ. 23ರ ರಾತ್ರಿ ಕೂಡ ಪಟಾಕಿ ಹೊಡೆದು ಹಬ್ಬ ಆಚರಿಸಿದರು.
;Resize=(128,128))
;Resize=(128,128))
;Resize=(128,128))