ಸಾರಾಂಶ
ಕನಕಪುರ: ದೇವೇಗೌಡರು ಬಾಯಿ ಬಿಟ್ಟರೆ ಸಾಕು ಸುಳ್ಳಿನ ಸರಮಾಲೆಯನ್ನೇ ಸುರಿಸುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಎಸ್. ರವಿ ಹೇಳಿದರು.
ಕನಕಪುರ ವಿಧಾನಸಭಾ ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ರಾಮನಗರ ಜಿಲ್ಲೆಯ ಜನತೆ ಬೆಂಬಲ ಹಾಗೂ ಆಶೀರ್ವಾದದಿಂದ ಮುಖ್ಯಮಂತ್ರಿ, ಪ್ರಧಾನ ಮಂತ್ರಿಯಾದ ದೇವೇಗೌಡರು, ಎರಡು ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಅನುಭವಿಸಿದ ಕುಮಾರಸ್ವಾಮಿ ಹಾಗೂ ಶಾಸಕಿಯಾಗಿದ್ದ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡದೆ, ಕನಿಷ್ಠ ಅವರ ಪಕ್ಷದ ಕಾರ್ಯಕರ್ತರ ಕಷ್ಟ-ಸುಖದಲ್ಲಿ ಭಾಗಿಯಾಗದೇ ಕಾಲಹರಣ ಮಾಡಿದ ಫಲವಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲಾಯಿತೇ ಹೊರತು ಯಾರು ಅವರಿಗೆ ಮೋಸ ಮಾಡಲಿಲ್ಲ. ಆದರೆ ನಮ್ಮ ಸೋಲಿಗೆ ಕಾಂಗ್ರೆಸ್ ಪಕ್ಷ ಹಂಚಿದ ಕಾರ್ಡ್‌ಗಳೇ ಕಾರಣ ಎಂದು ಹಸಿಸುಳ್ಳನ್ನು ಪೋಣಿಸಿ ತಮಗೆ ಪಿತ್ರಾರ್ಜಿತ ಆಸ್ತಿಯಾಗಿ ಬಂದಿರುವಂತೆ ಕಣ್ಣೀರು ಸುರಿಸುವುದು ಅವರ ಹೀನಾಯ ಸ್ಥಿತಿಯನ್ನು ತೋರಿಸುತ್ತದೆ ಎಂದರು.ಸಭೆಯಲ್ಲಿ ಆರ್‌ಇಎಸ್ ಸಂಸ್ಥೆ ಅಧ್ಯಕ್ಷ ಎಚ್.ಕೆ ಶ್ರೀಕಂಠು, ಹಿರಿಯ ಮುಖಂಡ ನಾರಾಯಣಗೌಡ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಡಿ.ವಿಜಯ್ ದೇವ್, ಕನಕಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಆರ್.ಕೃಷ್ಣಮೂರ್ತಿ, ನಗರಸಭಾ ಮಾಜಿ ಅಧ್ಯಕ್ಷ ದಿಲೀಪ್, ಕಿರಣ್ ಕುಮಾರ್, ಮಲ್ಲೇಶ್, ತಾಪಂ ಮಾಜಿ ಅಧ್ಯಕ್ಷ ಹೊಸಕೋಟೆ ಪುರುಷೋತ್ತಮ್, ಮಹಿಳಾ ಘಟಕದ ರೋಹಿಣಿ ಪ್ರಿಯಾ, ನಗರಸಭಾ ಸದಸ್ಯ ಮಾತಾ ಲಾಡ್ಜ್ ಮೋಹನ್, ಜಿಪಂ, ತಾಪಂ ಮಾಜಿ ಸದಸ್ಯರು, ನಗರಸಭಾ ಸದಸ್ಯರು, ಮುಖಂಡರಾದ ತಮ್ಮಣ್ಣಗೌಡ, ಮುನಿಹುಚ್ಚೇಗೌಡ ಸೇರಿದಂತೆ ಪಕ್ಷದ ಮುಖಂಡರು, ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು,
ಬಾಕ್ಸ್............ಕುಟುಂಬ ಹಿತಾಸಕ್ತಿಗಾಗಿ ಬಿಜೆಪಿ ಜತೆ ಮೈತ್ರಿಮುಂದಿನ ಜನ್ಮದಲ್ಲಿ ಮುಸ್ಲಿಂ ಜನಾಂಗದಲ್ಲಿ ಹುಟ್ಟಲು ಆಸೆ ಪಡುತ್ತೇನೆ ಎಂದು ಹೇಳಿದ್ದ ಮಾಜಿ ಪ್ರಧಾನಿ ದೇವೇಗೌಡರು, ಮೋದಿ ಪ್ರಧಾನಮಂತ್ರಿ ಆದರೆ ದೇಶ ಬಿಟ್ಟು ಹೋಗುವುದಾಗಿ ಹೇಳಿದವರು, ಇಂದು ತಮ್ಮ ಕುಟುಂಬದ ಹಿತಾಸಕ್ತಿಗಾಗಿ ಅವರ ಮನೆ ಬಾಗಿಲಿಗೆ ಹೋಗಿ ನಿಂತಿರುವುದು ನೋಡಿದರೆ ಅವರ ಜಾತ್ಯತೀತ ತತ್ವ ಇದೇನಾ ಎಂದೆನಿಸುತ್ತದೆ. ಕಾಂಗ್ರೆಸ್ ಸಹಾಯದಿಂದ ತಾವು ಪ್ರಧಾನಮಂತ್ರಿ ಹಾಗೂ ಮಗ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದನ್ನು ಮರೆತು ಇಲ್ಲ-ಸಲ್ಲದ ಆರೋಪಗಳನ್ನು ಡಿಕೆಶಿ ಸಹೋದರರ ಮೇಲೆ ಮಾಡುತ್ತಿರುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಸ್. ರವಿ ಹೇಳಿದರು. ರಾಜ್ಯದಲ್ಲಿ ಡಿ.ಕೆ.ಶಿವಕುಮಾರ್ ಅವರು ಪ್ರಬಲ ನಾಯಕರಾಗಿ ಬೆಳೆಯಲು ಬಿಡಬಾರದು, ಅವರನ್ನು ಕಟ್ಟಿ ಹಾಕಲು ಸಂಸದ ಡಿ.ಕೆ.ಸುರೇಶ್ ಅವರನ್ನು ಸೋಲಿಸಬೇಕೆಂಬ ದುರುದ್ದೇಶದಿಂದ ಬಿಜೆಪಿ ಜೊತೆಗೆ ಕೈ ಜೋಡಿಸಿ ಷಡ್ಯಂತ್ರ ರೂಪಿಸಿದ್ದು, ಇದು ಯಾವುದೇ ಕಾರಣಕ್ಕೂ ಫಲ ನೀಡುವುದಿಲ್ಲ. ಸೂರ್ಯ ಹೇಗೆ ದಿನಾಲೂ ಪೂರ್ವ ದಿಕ್ಕಿನಲ್ಲಿ ಹುಟ್ಟುತ್ತಾನೋ ಸಂಸದ ಡಿ.ಕೆ. ಸುರೇಶ್ ಕಳೆದ ಬಾರಿಗಿಂತ ಅತಿ ಹೆಚ್ಚಿನ ಮತಗಳಿಂದ ಈ ಬಾರಿ ಜಯ ಗಳಿಸುವುದು ಶತಸಿದ್ಧ ಎಂದರು.
ಕೆ ಕೆ ಪಿ ಸುದ್ದಿ 02:ಕನಕಪುರದಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ರವಿ ಮಾತನಾಡಿದರು.