ಸಾರಾಂಶ
ಕೆಲಸ ಮಾಡದೇ ದೂರುವವರ ಬಗ್ಗೆ ಏನೂ ಮಾತನಾಡದಿರುವುದೇ ಒಳ್ಳೆಯದು ಎಂದು ಡಿ ಸಿಎಂ ಡಿ.ಕೆ.ಶಿವಕುಮಾರ್ ಕೇಂದ್ರ ಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ವಿರುದ್ಧ ಹರಿಹಾಯ್ದರು.
ಕನಕಪುರ : ಕೆಲಸ ಮಾಡದೇ ದೂರುವವರ ಬಗ್ಗೆ ಏನೂ ಮಾತನಾಡದಿರುವುದೇ ಒಳ್ಳೆಯದು ಎಂದು ಡಿ ಸಿಎಂ ಡಿ.ಕೆ.ಶಿವಕುಮಾರ್ ಕೇಂದ್ರ ಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ವಿರುದ್ಧ ಹರಿಹಾಯ್ದರು.
ತಾಲೂಕಿನಲ್ಲಿ ಭಾನುವಾರ ಪ್ರವಾಸ ಕೈಗೊಂಡಿದ್ದ ಅವರು ಸಾತನೂರು ಹೋಬಳಿಯ ಮುತ್ತತ್ತಿ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ ನೆರವೇರಿಸಿದ ಬಳಿಕ ತಮಿಳುನಾಡಿನ ಅನುಮತಿ ಪಡೆದರೆ ಮೇಕೆದಾಟು ಯೋಜನೆಗೆ ಕೇಂದ್ರದಿಂದ ಅನುಮತಿ ಕೊಡಿಸುತ್ತೇವೆ ಎಂಬ ಎಚ್‌ಡಿಕೆ ಹೇಳಿಕೆ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾರಾದರೂ ಕೆಲಸ ಮಾಡುವವರು ಇದ್ದರೆ ಅದಕ್ಕೆ ಉತ್ತರ ಕೊಡೊಣಾ, ಮಾತನಾಡೋಣ.
ಕೆಲಸ ಮಾಡದೇ ದೂರುವವರ ಬಗ್ಗೆ ಮಾತನಾಡದಿರುವುದು ಒಳ್ಳೆಯದು ಎಂದು ಎಚ್.ಡಿ. ಕುಮಾರಸ್ವಾಮಿಯವರನ್ನು ಟೀಕಿಸಿದರು. ಕ್ಷೇತ್ರದಲ್ಲಿ ಸಾಕಷ್ಟು ಕಾಡಾನೆಗಳ ಹಾವಳಿ ಹೆಚ್ಚಾಗಿತ್ತು. ರೈತರನ್ನು ಉಳಿಸಲು ರೈಲ್ವೆ ಬ್ಯಾರಿಕೇಟ್ ಹಾಕಲಾಗುತ್ತಿದೆ. ಈಶ್ವರ್ ಖಂಡ್ರೆ ಅವರು ಬಂದು 330 ಕೋಟಿ ಹಣ ಕೊಟ್ಟಿದ್ದರು. ಕಾಡಾನೆ ನಿಯಂತ್ರಣಕ್ಕೆ ಇನ್ನು 130 ಕೋಟಿ ಹಣ ಬೇಕಿದೆ. ಲೋಕೋಪಯೋಗಿ ಇಲಾಖೆಯಿಂದ 13 ಕೋಟಿ ಅರಣ್ಯ ರಸ್ತೆ ಅಭಿವೃದ್ಧಿಗೆ ಕೊಟ್ಟಿದ್ದಾರೆ.
ಜೊತೆಗೆ ಇಂದು ಕೆರೆಗೆ ನೀರು ತುಂಬಿಸುವ ಕಾಮಗಾರಿ, ಸೇತುವೆ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಕಾಡಾನೆ ತಡೆಗೆ ಕ್ರಮವಹಿಸುತ್ತೇವೆ. ಆನೆ ಕ್ಯಾಂಪ್ ಮಾಡುವ ಮೂಲಕ ಕಾಡಾನೆ ಹಾವಳಿ ನಿಯಂತ್ರಣ ಮಾಡಬಹುದು, ಅದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತೆವೆ ಎಂದರು.ಕೆ ಕೆ ಪಿ ಸುದ್ದಿ 04: ಸಾತನೂರು ಹೋಬಳಿಯ ಮುತ್ತತ್ತಿ ರಸ್ತೆ ಅಭಿವೃದ್ದಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಚಾಲನೆ ನೀಡಿ ಕಾಡಾನೆ ತಡೆಗೆ ಅಳವಡಿಸುತ್ತಿರುವ ರಲ್ವೆ ಕಂಬಿಗಳನ್ನು ವೀಕ್ಷಣೆ ಮಾಡಿದರು.