ಸಾರಾಂಶ
ಕನ್ನಡಪ್ರಭ ವಾರ್ತೆ ಕೊಲ್ಹಾರ
ಭಯೋತ್ಪಾದನೆ ಪೋಷಿಸುತ್ತಿರುವ ಪಾಕಿಸ್ತಾನಕ್ಕೆ ಸರಿಯಾದ ಬುದ್ದಿ ಕಲಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಭಾರತೀಯ ಎಲ್ಲ ಸೇನೆಗಳು ತೆಗೆದುಕೊಂಡ ನಿರ್ಧಾರ ಸರಿಯಾಗಿದೆ. ನಾನು ನಿವೃತ್ತ ಯೋಧನಾದರೂ ದೇಶ ಮತ್ತು ಸೈನ್ಯ ಕರೆ ಕೊಟ್ಟರೆ ಇಂದೇ ಯುದ್ದಕ್ಕೆ ಹೋಗಲು ಸಿದ್ದವಾಗಿದ್ದೇನೆ ಸಿಆರ್‌ಪಿಎಫ್ ಮಾಜಿ ಹವಾಲ್ದಾರ್ ಸದಾಶಿವ ಗಣಿ ಹೇಳಿದ್ದಾರೆ.ಸದ್ಯ ನಮಗೆ ಒಳ್ಳೆಯ ಅವಕಾಶ ಸಿಕ್ಕಿದೆ. ಪಾಕಿಸ್ತಾನಕ್ಕೆ ತಿರುಗೇಟು ಕೊಡಲಿಲ್ಲ ಅಂದರೆ ಅವರು ಮತ್ತೆ ತಂಟೆಗೆ ಬರುತ್ತಾರೆ. ಅವರ ಮೇಲೆ ಸರ್ಕಾರ ಯುದ್ಧ ಸಾರಿದ್ದು ಸರಿಯಾಗಿದೆ. ಈ ವೇಳೆ ನನ್ನನ್ನು ಕರೆದರೆ ಯುದ್ಧಕ್ಕೆ ಹೋಗಲು ತಯಾರಿಯಲ್ಲಿದ್ದೇನೆ. ನನಗೆ ಇವತ್ತೆ ಪ್ಯಾಕ್ಸ್ ಬಂದರೆ ಹೋಗುತ್ತೇನೆ. ನಾನು ಜಮ್ಮು ಮತ್ತು ಕಾಶ್ಮೀರ ಹಾಗೂ ಶ್ರೀನಗರದಲ್ಲಿ ಸೈನ್ಯದಲ್ಲಿ ಸಿಪಾಯಿಯಿಂದ ಹವಾಲ್ದಾರವರೆಗೆ ಸುಮಾರು 24 ವರ್ಷಗಳ ಕಾಲ ದೇಶ ಸೇವೆ ಮಾಡಿದ್ದೇನೆ. ಅದರಲ್ಲಿ ಫೋಂಚ್, ಕಾರ್ಗಿಲ್, ಉದಂಪೂರ್, ಬಾಲಾಕೋಟದಲ್ಲಿ ಒಂಭತ್ತು ವರ್ಷ, ಶ್ರೀನಗರದ ಕಿರಭವಾನಿ ದೇವಸ್ಥಾನದ ಬಳಿ ಮೂರು ವರ್ಷ ಯೋಧನಾಗಿ ಕಾರ್ಯನಿರ್ವಹಿಸಿದ್ದೇನೆ. ಈಗ ಒಮ್ಮೆ ನಾವು ಪಾಕಿಸ್ತಾನದ ಮೇಲೆ ಯುದ್ಧ ಮಾಡುವುದಕ್ಕೆ ಶುರು ಮಾಡಿದ್ದೇವೆ ಅಂದ ಮೇಲೆ ತಕ್ಷಣ ಹಿಂದಕ್ಕೆ ಸರಿಬಾರದು. ಸೈನ್ಯದ ಅಡ್ಡೆಯಲ್ಲಿ ತವಾ ಮಾಡಬೇಕು. ಪಾಕಿಸ್ತಾನದ ಸೊಂಟ ಮುರಿಬೇಕು. ಸರಕಾರ ಹಿಂದಕ್ಕೆ ಸರಿಯದೆ ಅವರನ್ನು ಮುದ್ದಿ ಮಾಡಿ ಬರ್ಬಾದ ಮಾಡಿ ಬರಬೇಕು. ಪಾಕಿಸ್ತಾನವನ್ನು ಒಂದು ಕಡೆ ಬಲೂಚಿಸ್ತಾನ್ ಆಕ್ರಮಿಸಿದೆ, ಇನ್ನೊಂದು ಕಡೆಯಿಂದ ತಾಲಿಬಾನ್ ಆಕ್ರಮಿಸಿಕೊಂಡಿದೆ. ಹೀಗಾಗಿ ಅದು ಈಗ ನಾಲ್ಕು ತುಕಡಿಯಾಗಿದ್ದು, ನಾವು ಗಟ್ಟಿ ನಿರ್ಧಾರ ಮಾಡಿ ಪಾಕ್ ಆಕ್ರಮಿತ ಕಾಶ್ಮೀರವನ್ನು ವಶಪಡಿಸಿಕೊಳ್ಳಬೇಕು ಎಂಬ ಸಲಹೆ ನೀಡಿದರು.