ಉದ್ಯಮಿ ದೊಡ್ಡಣ್ಣವರ ಸಹೋದರರಿಗೆ ಐಟಿ ಶಾಕ್‌

| Published : Jan 29 2025, 01:30 AM IST

ಸಾರಾಂಶ

ಬೆಳಗಾವಿ: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಗರದ 4 ಕಡೆ ಉದ್ಯಮಿಗಳ ಮನೆ ಮೇಲೆ ದಾಳಿ ಮಾಡುವ ಮೂಲಕ ಉದ್ಯಮಿಗಳಿಗೆ ಶಾಕ್ ನೀಡಿದ್ದಾರೆ.

ಬೆಳಗಾವಿ: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಗರದ 4 ಕಡೆ ಉದ್ಯಮಿಗಳ ಮನೆ ಮೇಲೆ ದಾಳಿ ಮಾಡುವ ಮೂಲಕ ಉದ್ಯಮಿಗಳಿಗೆ ಶಾಕ್ ನೀಡಿದ್ದಾರೆ. ಉದ್ಯಮಿ ವಿನೋದ್ ದೊಡ್ಡಣ್ಣವರ, ಪುಷ್ಪದಂತ ದೊಡ್ಡಣ್ಣವರ ಮನೆ, ಕಚೇರಿ ಸೇರಿದಂತೆ ಒಟ್ಟು 4 ಕಡೆ ಗೋವಾ, ಬೆಂಗಳೂರಿನ ಐಟಿ ಅಧಿಕಾರಿಗಳು ಮಂಗಳವಾರ ಬೆಳಗಿನ ಜಾವ ದಾಳಿ ಮಾಡಿದ್ದಾರೆ. ಇಬ್ಬರೂ ಸಕ್ಕರೆ ಕಾರ್ಖಾನೆ, ಐರನ್ ಹಾಗೂ ಗ್ರೈನೆಟ್ ಉದ್ಯಮಿಗಳಾಗಿದ್ದಾರೆ. ದೊಡ್ಡಣ್ಣವರ ಸಹೋದರರು ಐರನ್ ಹಾಗೂ ಗ್ರೈನೆಟ್ ದೇಶ-ವಿದೇಶಗಳಿಗೂ ರಪ್ತು ಮಾಡುತ್ತಾರೆ. ಕಾಗವಾಡ ತಾಲೂಕಿನಲ್ಲಿ ಎರಡು ಸಕ್ಕರೆ ಕಾರ್ಖಾನೆ ಹೊಂದಿದ್ದಾರೆ. ಟಿಳಕವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇರುವ ಈ ಉದ್ಯಮಿಗಳ ಮನೆ ಮೇಲೆ ದಾಳಿ ನಡೆಸಲಾಗಿದೆ. ದಾಳಿಯಲ್ಲಿ ಏನೇನು ವಶಪಡಿಸಿಕೊಳ್ಳಲಾಗಿದೆ ಎಂಬುದರ ಮಾಹಿತಿ ಲಭ್ಯವಾಗಿಲ್ಲ.