ಸೇವೆ ಮಾಡಲು ಹೃದಯವಂತಿಕೆ ಬೇಕು

| Published : Jul 30 2024, 12:36 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ತೇರದಾಳ(ರ-ಬ)ಅಂಕ ಆಧಾರಿತ ಶಿಕ್ಷಣದಿಂದ ಹೊರಬಂದು ಜ್ಞಾನಾಧರಿತ ಶಿಕ್ಷಣ ಪಡೆಯುವುದು ಇಂದಿನ ದಿನಗಳಲ್ಲಿ ಶಿಕ್ಷಣದ ಗುರಿಯಾಗಬೇಕು. ನಾವು ಕಲಿತ ವಿದ್ಯೆಯಿಂದ ಸೌಹಾರ್ದಯುತವಾಗಿ ಬದುಕುವುದೇ ನಿಜವಾದ ಶಿಕ್ಷಣ. ಹಣ ಮಾಡಲು ವ್ಯವಹಾರ ಜ್ಞಾನ ಬೇಕು, ಸೇವೆ ಮಾಡಲು ಹೃದಯವಂತಿಕೆ ಬೇಕು ಎಂದು ಹಿರಿಯ ಸಾಹಿತಿ, ಲಾವಣಿಕಾರ ಬಿ.ಆರ್.ಪೋಲಿಸ್ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ತೇರದಾಳ(ರ-ಬ)

ಅಂಕ ಆಧಾರಿತ ಶಿಕ್ಷಣದಿಂದ ಹೊರಬಂದು ಜ್ಞಾನಾಧರಿತ ಶಿಕ್ಷಣ ಪಡೆಯುವುದು ಇಂದಿನ ದಿನಗಳಲ್ಲಿ ಶಿಕ್ಷಣದ ಗುರಿಯಾಗಬೇಕು. ನಾವು ಕಲಿತ ವಿದ್ಯೆಯಿಂದ ಸೌಹಾರ್ದಯುತವಾಗಿ ಬದುಕುವುದೇ ನಿಜವಾದ ಶಿಕ್ಷಣ. ಹಣ ಮಾಡಲು ವ್ಯವಹಾರ ಜ್ಞಾನ ಬೇಕು, ಸೇವೆ ಮಾಡಲು ಹೃದಯವಂತಿಕೆ ಬೇಕು ಎಂದು ಹಿರಿಯ ಸಾಹಿತಿ, ಲಾವಣಿಕಾರ ಬಿ.ಆರ್.ಪೋಲಿಸ್ ಪಾಟೀಲ ಹೇಳಿದರು.ತೇರದಾಳದ ಪ್ರತಿಷ್ಠಿತ ದಾನಿಗೊಂಡ ವಾಣಿಜ್ಯ ಮಹಾವಿದ್ಯಾಲಯದಲ್ಲಿ ನಡೆದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು. ಸಂಸ್ಥಾಪಕ ಚೇರಮನ್ ಡಾ.ಎಂ.ಎಸ್.ದಾನಿಗೊಂಡ ಮಾತನಾಡಿ, ವಿಶ್ವದಲ್ಲಿ ವಾಣಿಜ್ಯ ವಿಭಾಗಕ್ಕೆ ವಿಫುಲ ಅವಕಾಶಗಳಿದ್ದು ವಿದ್ಯಾರ್ಥಿಗಳು ಅವುಗಳನ್ನು ಸಮರ್ಪಕವಾಗಿ ಬಳಸಿದರೆ, ಯಶಸ್ವಿಯಾಗುವುದರಲ್ಲಿ ಸಂದೇಹವಿಲ್ಲ ಎಂದು ಕಿವಿಮಾತು ಹೇಳಿದರು.ಪ್ರಾಚಾರ್ಯ ಡಾ.ಎಸ್.ವೈ. ಕೃಷ್ಣಾಪೂರ ಮಾತನಾಡಿದರು. ಕೀರ್ತಿ ಉಳಗೊಂಡ ಹಾಗೂ ಇತರರು ಪ್ರಾರ್ಥಿಸಿದರು. ಸುಶ್ಮಿತಾ ಹುದ್ದಾರ ಸ್ವಾಗತಿಸಿದರು, ಸಾಕ್ಷಿ ಘಂಟಿ ಪರಿಚಯಿಸಿದರು, ರೂಪಾ ಕರಿಗಾರ, ಸಪ್ನಾ ಚೌಗಲಾ ನಿರೂಪಿಸಿದರು. ವಾಣಿಶ್ರೀ ಕಂಚಗೊಂಡ, ಕೀರ್ತಿ ಭದ್ರಶೆಟ್ಟಿ ಪಾರಿತೋಷಕ ವಿತರಣೆ ನಡೆಸಿಕೊಟ್ಟರು, ಲಕ್ಷ್ಮೀ ಹೊಸೂರ ವಂದಿಸಿದರು.ಉಪನ್ಯಾಸಕ ಬಿ.ಎಸ್.ನೇಗಿನಾಳ, ಜಿ.ಐ.ಕುಂಬಾರ, ಪಿ.ಬಿ.ಮಾಳಿ, ವಿ.ಪಿ.ಮುರಾರಿ, ಎ.ಎಸ್.ಕಾಂಬಳೆ, ಆರ್.ಎಸ್.ಪಾಟೀಲ, ಎ.ಎ.ಕಂಕನವಾಡಿ, ವಿ.ಎಸ್.ಛಬ್ಬಿ, ಎಂ.ಎಸ್.ವರಾಳೆ, ಆರ್.ಆರ್.ಸೋನಾರ, ಬಿ.ಬಿ.ಘಟ್ನಟ್ಟಿ, ಎ.ಮದ್ದಿನ, ಬೋಧಕೇತರ ಸಿಬ್ಬಂದಿ ಎಸ್.ಎಂ.ಚಿಮ್ಮಡ, ಪಿ.ಜಿ.ಭಜಂತ್ರಿ, ಎಸ್.ಕೆ.ಸಾರವಾಡ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು. ವಿದ್ಯಾರ್ಥಿಗಳು ನಡಿಸಿಕೊಟ್ಟ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಮನಸೂರೆಗೊಂಡವು.