ಸಾರಾಂಶ
ಕನ್ನಡಪ್ರಭ ವಾರ್ತೆ ಬಾದಾಮಿ
ಶಾಸಕ ಭಿಮಸೇನ ಚಿಮ್ಮನಕಟ್ಟಿ ಅವರ 42ನೇ ಜನ್ಮ ದಿನಾಚರಣೆಯ ಪ್ರಯುಕ್ತ ಡಿ.26 ರಂದು ರಕ್ತದಾನ ಶಿಬಿರ, ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದೆ ಎಂದು ಚಿಮ್ಮನಕಟ್ಟಿ ಅಭಿಮಾನಿ ಬಳಗದ ಮುಖಂಡರಾದ ಪುರಸಭೆ ಅಧ್ಯಕ್ಷ ಪಾಂಡಪ್ಪ ಕಟ್ಟೀಮನಿ, ಸದಸ್ಯ ಮಂಜುನಾಥ ಹೊಸಮನಿ ಹೇಳಿದರು.ಪಟ್ಟಣದ ಬನಶಂಕರಿ ರಸ್ತೆಯ ಶ್ರೀ ಕಾಳಿದಾಸ ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ಶನಿವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಜನ್ಮ ದಿನಾಚರಣೆಯ ಕಾರ್ಯಕ್ರಮಗಳ ಮಾಹಿತಿ ನೀಡಿದ ಅವರು, ಚಿಮ್ಮನಕಟ್ಟಿ ಅಭಿಮಾನಿ ಬಳಗ, ಜಿಲ್ಲಾ ರಕ್ತ ಭಂಡಾರ, ತಾಲೂಕಾಸ್ಪತ್ರೆಯ ಸಹಯೋಗದಲ್ಲಿ ಅಂದು ಬೆಳಗ್ಗೆ 10 ಗಂಟೆಗೆ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಾಗೂ ರಕ್ತದೊತ್ತಡ, ಸಕ್ಕರೆ ಕಾಯಿಲೆ ಉಚಿತ ತಪಾಸಭೆ ಶಿಬಿರ ಆಯೋಜನೆ ಮಾಡಲಾಗಿದೆ. ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಲಾಗುತ್ತಿದೆ. ರಕ್ತದಾನ ಮಾಡುವುದು ಬಡವರಿಗೆ, ಜನರಿಗೆ ಅನುಕೂಲವಾಗಲಿದೆ. ಇದೊಂದು ದಾಖಲೆಯ ಕಾರ್ಯಕ್ರಮ ಮಾಡಲು ಯೋಜನೆ ಹಾಕಿಕೊಳ್ಳಲಾಗಿದೆ. ಜನ್ಮ ದಿನಾಚರಣೆಯ ವೇದಿಕೆಯ ಕಾರ್ಯಕ್ರಮ ಡಿ.26 ರಂದು ಸಂಜೆ 5 ಗಂಟೆಗೆ ಕಾಳಿದಾಸ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದು, ಶುಭಾಶಯ ಕೋರುವವರು ಯಾವುದೇ ಹಾರ, ಶಾಲು, ಕೇಕ್, ಸಿಹಿ ತರಬಾರದು. ಒಂದು ಪುಸ್ತಕವನ್ನು ಕೊಡಬಹುದು. ಸುಮಾರು 10 ಸಾವಿರ ಜನರು ಸೇರುವ ನಿರೀಕ್ಷೆ ಇದ್ದು, ಜನ್ಮ ದಿನಾಚಣೆಯಲ್ಲಿ ಭಾಗವಹಿಸುವ ಎಲ್ಲರಿಗೂ ಊಟದ ವ್ಯವಸ್ಥೆ, ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ, ವೇದಿಕೆಯ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲು ಸಮಿತಿಗಳನ್ನು ರಚಿಸಲಾಗಿದ್ದು, ಮತಕ್ಷೇತ್ರದ ಕಾರ್ಯಕರ್ತರು, ಅಭಿಮಾನಿಗಳು, ಮುಖಂಡರು ಭಾಗವಹಿಸಿ ಜನ್ಮ ದಿನಾಚರಣೆ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಕೋರಿದರು.ಕಾರ್ಯಕ್ರಮದ ಕುರಿತು ಮುಖಂಡರಾದ ಪ್ರಕಾಶ ಮೇಟಿ, ಗೋಪಾಲ ಭಟ್ಟಡ, ಬಸವರಾಜ ತಳವಾರ, ಮಹಾಂತೇಶ ಹಟ್ಟಿ, ಎಸ್.ಡಿ.ಯಲಿಗಾರ, ನಾಗರಾಜ ಹೊಟ್ಟಿ ಸುವಿವರವಾದ ಮಾಹಿತಿ ನೀಡಿದರು. ಗೋಷ್ಠಿಯಲ್ಲಿ ಹನಮಂತ ಅಪ್ಪನ್ನವರ, ಶಿವಾನಂದ ಜಾಬನ್ನವರ, ಬಸವರಾಜ ಗೌಡರ, ಶಿವಾನಂದ ಕೊನೇರಿ, ರಮೇಶ ಬೂದಿಹಾಳ, ಮುತ್ತಣ್ಣ ಬಾಗಲೆ, ಬಸವರಾಜ ಡೊಳ್ಳಿನ, ಸಿದ್ದು ಕೊಣ್ಣೂರ, ಉಜ್ವಲಕಾಂತ ಬಸರಿ, ಬೀರಪ್ಪ ಹನಮಸಾಗರ, ಬೀರಪ್ಪ ಪೆಂಟಿ, ಶ್ರೀಕಾಂತಗೌಡ ಗೌಡರ, ಕಾಮೇಶ ಜಾಲಿಹಾಳ, ಲಕ್ಷ್ಮಣ ಕುಚಲ, ಮಾಲತೇಶ ಜಕ್ಕನ್ನವರ, ಭೀಮಸಿ ಶೆಟ್ಟೆಪ್ಪನ್ನವರ, ಬಿ.ಎಸ್.ಮೊಖಾಶಿ, ವಿಷ್ಣು ರಾಠೋಡ, ಶರಣು ಹುನಗುಂದ, ಶೇಖರಪ್ಪ, ಶರಣು ಕೊನೆಸಾಗರ, ನೀಲಪ್ಪ ಹುಡೇದ, ಸಂಗಪ್ಪ ಕರಿಗಾರ, ಬಿ.ಎಸ್.ವಡಗೇರಿ ಸೇರಿದಂತೆ ಅಂಗಸಂಸ್ಥೆಯ ಮುಖ್ಯಸ್ಥರು ಹಾಜರಿದ್ದರು.
ಶಾಸಕ ಭೀಮಸೇನ ಚಿಮ್ಮನಕಟ್ಟಿಯವರ 42ನೇ ಜನ್ಮ ದಿನಾಚರಣೆಯ ವೇದಿಕೆಯ ಕಾರ್ಯಕ್ರಮದಲ್ಲಿ ಕ್ರಿಶ್ಚಿಯನ್, ಮುಸ್ಲಿಂ, ಹಿಂದು ಸೇರಿದಂತೆ ಸರ್ವ ಧರ್ಮದ ಸ್ವಾಮೀಜಿಗಳು ಭಾಗವಹಿಸಲಿದ್ದಾರೆ.-ಪಾಂಡಪ್ಪ ಕಟ್ಟೀಮನಿ, ಅಧ್ಯಕ್ಷರು ಪುರಸಭೆ ಬಾದಾಮಿ.
ಮಹಾತ್ಮಾ ಗಾಂಧಿಯವರ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆ 100 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಡಿ.26 ಮತ್ತು ಡಿ.27 ರಂದು ನಡೆಯಲಿರುವ ಶತಮಾನೋತ್ಸವ ಕಾರ್ಯಕ್ರಮಕ್ಕೆ ಬಾದಾಮಿ ಮತಕ್ಷೇತ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕು.-ಮಹಾಂತೇಶ ಹಟ್ಟಿ,
ಯುವಮುಖಂಡರು ಬಾದಾಮಿ.