ಸಾರಾಂಶ
ಚಿಕ್ಕಮಗಳೂರಿನಲ್ಲಿ ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮ,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಇಡೀ ಜಗತ್ತಿಗೆ ಬೆಳಕನ್ನು ನೀಡಿ ಧರ್ಮ ನಿಷ್ಠೆಯಿಂದ ಬದುಕಬೇಕೆಂದು ಹೇಳಿಕೊಟ್ಟವನು ಶ್ರೀಕೃಷ್ಣ ಎಂದು ಸಾಹಿತಿ ನಾಗರಾಜ್ ರಾವ್ ಕಲ್ಕಟ್ಟೆ ಹೇಳಿದರು.
ಜಿಲ್ಲಾಡಳಿತದಿಂದ ಸೋಮವಾರ ನಗರದ ಕುವೆಂಪು ಕಲಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಗೋ ಸಂರಕ್ಷಣೆಗೆ ಸಂಪೂರ್ಣ ಶಕ್ತಿ ಕೊಟ್ಟವನ್ನು ಶ್ರೀಕೃಷ್ಣ, ಈ ಸಮಾಜಕ್ಕೆ ಮಾತ್ರ ದೇವರಲ್ಲಾ ಇಡೀ ವಿಶ್ವಕ್ಕೆ ದೇವರು, ಒಳ್ಳೆ ಸಂಗತಿಗಳನ್ನು ಯೋಚನೆ ಮಾಡುತ್ತಾ ಮೈಗೂಡಿಸಿಕೊಳ್ಳಬೇಕು. ನಿಸ್ವಾರ್ಥತೆಯಿಂದ ಕೆಲಸ ಮಾಡು, ಅದರ ಫಲ ನನಗೆ ಬಿಡು, ಅದಕ್ಕೆ ಧಕ್ಕಬೇಕಾದ ಫಲ ಧಕ್ಕುತ್ತದೆ, ಪ್ರಮಾಣಿಕವಾಗಿ ಕೆಲಸ ಮಾಡಬೇಕು ಎಂದು ಹೇಳಿದರು.ಕೃಷ್ಣ ಜನ್ಮಾಷ್ಟಮಿ ಭಾರತದಲ್ಲಿ ಆಚರಿಸಲ್ಪಡುವ ಒಂದು ಪ್ರಮುಖವಾದ ಹಬ್ಬ, ಶ್ರೀ ಕೃಷ್ಣ ಹುಟ್ಟಿದ ದಿನವನ್ನು ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಾಮಿ ಎಂದು ವೈಭವದಿಂದ ಆಚರಿಸಲಾಗುತ್ತದೆ. ಶ್ರೀ ಕೃಷ್ಣನ ಜನ್ಮ ದಿನವನ್ನು ಚಂದ್ರಮಾನ, ಶ್ರಾವಣ ಕೃಷ್ಣ ಅಷ್ಟಮಿ ಎಂದು ಆಚರಿಸಲಾಗುತ್ತದೆ ಎಂದರು.ಕತ್ತಲೆ, ಬೆಳಕಿನಲ್ಲಿರುವ ದುಷ್ಟತನವನ್ನು ನಾಶಮಾಡಿ ತಾಯಿ, ತಂದೆಗೆ ಗೌರವಿಸಿ ತನ್ನಲ್ಲಿರುವ ದುಷ್ಟತನವನ್ನು ನಾಶಮಾಡಿ ತಾಯಿಗೆ ಪರಮ ಆನಂದವನ್ನು ಕೊಡುವವನೇ ಕೃಷ್ಣ ಎಂದು ಹೇಳಿದರು.ಯಾವ ವ್ಯಕ್ತಿ ಹೃದಯ ದೌರ್ಬಲ್ಯನಾಗಿರುತ್ತಾನೋ ಅಂತಹವರನ್ನು ಜಾಗೃತಿಗೊಳಿಸುವುದೇ ಭಗವದ್ಗೀತೆ, ಕೃಷ್ಣನ ಉದ್ದೇಶ ಮನುಷ್ಯ ತಾನು ಹಿಡಿದಿರುವ ಕೆಲಸ ಪೂರ್ಣಗೊಳಿಸುವವರೆಗೆ ಯಾರ ಮಾತನ್ನು ಕೇಳದೆ ತನ್ನ ಕೆಲಸವನ್ನು ನಿಷ್ಠೆಯಿಂದ ಯಾವ ಫಲ ಅಪೇಕ್ಷಿಸದೆ ಕಾರ್ಯ ಮಾಡಿದರೆ ಅವನಿಗೆ ಸಕಲ ಗೌರವ ಸಿಗುತ್ತದೆ ಎಂದು ಹೇಳಿದ್ದಾರೆ ಎಂದರು.
ಮಹಿಳೆಯರಿಗೆ ಕಷ್ಟಗಳು ಎದುರಾದ ಸಂದರ್ಭದಲ್ಲಿ ಕೃಷ್ಣ ಕೈ ಹಿಡಿದಿದ್ದಾನೆ ಹೀಗಾಗಿ ಕೃಷ್ಣನಿಗೆ ಪರನಾರಿ ಸಹೋದರ ಎಂದು ಕರೆಯಲಾಗುತ್ತದೆ. ಮಹಿಳೆಯರಿಗೆ ಸಂಕಷ್ಟದ ಕಾಲ ಎದುರಾದಾಗ ಆತನು ಅಣ್ಣನಾಗಿ ರಕ್ಷಣೆ ಮಾಡಿದ್ದಾನೆ ಆದ್ದರಿಂದ ಕೃಷ್ಣನೂ ಮಹಿಳೆಯರಿಗೆ ಘನತೆ ಗೌರವದ ಸಂಕೇತವಾಗಿದ್ದಾನೆ ಎಂದು ಹೇಳಿದರು.ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕ ಹರ್ಷವರ್ಧನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶ್ರೀ ಕೃಷ್ಣ ಜನ್ಮಾಷ್ಟಮಿ ದ್ವಾರಕದಲ್ಲಿ ಮಾತ್ರ ಆಚರಿಸಲಾಗುತ್ತಿತ್ತು ಆದರೆ ಇಂದು ಪ್ರಪಂಚದಾದ್ಯಂತ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ. ಶ್ರೀ ಕೃಷ್ಣ ಜಯಂತಿಯಂದು ಹಿಂದುಗಳು ಮಾತ್ರವಲ್ಲದೇ ಮುಸ್ಲೀಮರೂ ಕೂಡ ತಮ್ಮ ಮಕ್ಕಳಿಗೆ ಶ್ರೀ ಕೃಷ್ಣನ ವೇಷ ಹಾಕಿ ಶಾಲೆಗೆ ಕಳುಹಿಸುತ್ತಾರೆ ಎಂದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ರಮೇಶ್ ಸ್ವಾಗತಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಯಾದವ ಸಂಘದ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು. 26 ಕೆಸಿಕೆಎಂ 4ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಸೋಮವಾರ ನಡೆದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕ ಹರ್ಷವರ್ಧನ ಉದ್ಘಾಟಿಸಿದರು. ನಾಗರಾಜ್‌ರಾವ್ ಕಲ್ಕಟ್ಟೆ, ಡಾ. ರಮೇಶ್ ಇದ್ದರು.