ಸಾರಾಂಶ
ದೇವರಹಿಪ್ಪರಗಿ: ಡಾ.ಬಿ.ಆರ್.ಅಂಬೇಡ್ಕರ್ ಅವರ 133ನೇ ಜನ್ಮದಿನದ ಅಂಗವಾಗಿ ವಿಜಯಪುರ ನಗರದ ವೇದಾಂತ ಬಿಸಿಎ ಹಾಗೂ ಬಿಕಾಂ ಕಾಲೇಜನಲ್ಲಿ ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ ಸಂಸ್ಥೆ ವತಿಯಿಂದ 2023-24ನೇ ಸಾಲಿನ ಸುವರ್ಣ ಕನ್ನಡಿಗ ರಾಜ್ಯಮಟ್ಟದ ಪ್ರಶಸ್ತಿ ಪಡೆದಿದ್ದಕ್ಕಾಗಿ ಡಾ.ಅಶೋಕಕುಮಾರ ಜಾಧವ ಅವರನ್ನು ಅವರ ಧರ್ಮ ಪತ್ನಿ ಭುವನೇಶ್ವರಿ ಜಾಧವ ಹಾಗೂ ಅವರ ಅತ್ತೆ ರಾಮಕ್ಕ ಅವರನ್ನು ವೇದಾಂತ ಕಾಲೇಜ ಪರವಾಗಿ ಸನ್ಮಾನಿಸಲಾಯಿತು.
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ಡಾ.ಬಿ.ಆರ್.ಅಂಬೇಡ್ಕರ್ ಅವರ 133ನೇ ಜನ್ಮದಿನದ ಅಂಗವಾಗಿ ವಿಜಯಪುರ ನಗರದ ವೇದಾಂತ ಬಿಸಿಎ ಹಾಗೂ ಬಿಕಾಂ ಕಾಲೇಜನಲ್ಲಿ ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ ಸಂಸ್ಥೆ ವತಿಯಿಂದ 2023-24ನೇ ಸಾಲಿನ ಸುವರ್ಣ ಕನ್ನಡಿಗ ರಾಜ್ಯಮಟ್ಟದ ಪ್ರಶಸ್ತಿ ಪಡೆದಿದ್ದಕ್ಕಾಗಿ ಡಾ.ಅಶೋಕಕುಮಾರ ಜಾಧವ ಅವರನ್ನು ಅವರ ಧರ್ಮ ಪತ್ನಿ ಭುವನೇಶ್ವರಿ ಜಾಧವ ಹಾಗೂ ಅವರ ಅತ್ತೆ ರಾಮಕ್ಕ ಅವರನ್ನು ವೇದಾಂತ ಕಾಲೇಜ ಪರವಾಗಿ ಸನ್ಮಾನಿಸಲಾಯಿತು.ಈ ವೇಳೆ ಮಾತನಾಡಿದ ವೇದಾಂತ ಕಾಲೇಜನ ಚೇರ್ಮನ್ ಎಸ್.ಜಿ.ಮಠ ಅವರು, ಜಾಧವ ಅವರೊಂದಿಗಿನ ತಮ್ಮ ಹಳೆ ನೆನಪುಗಳನ್ನು ಮೆಲುಕು ಹಾಕಿದರು.
ನಂತರ ಮಾತನಾಡಿದ ಎಸ್.ಜಿ.ಮಠ ಅವರು, ಇನ್ನೇನು 1-2 ತಿಂಗಳಲ್ಲಿ ವೃತ್ತಿಯಿಂದ ನಿವೃತ್ತಿ ಆಗುತ್ತಿದ್ದರೂ ಅವರ ಕ್ರೀಡಾ ಕ್ಷೇತ್ರದ ಉತ್ಸಾಹ ಇನ್ನೂ ಹಚ್ಚ ಹಸಿರಾಗಿದೆ. ಈಗ ಅವರು ದೇವರ ಹಿಪ್ಪರಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದೈಹಿಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಷ್ಟ್ರೀಯ ಕ್ರೀಡೆಗಳಲ್ಲಿ ಮಾದಕ ದ್ರವ್ಯಗಳ ದುರುಪಯೋಗ ಎಂಬ ವಿಷಯದಲ್ಲಿ ಪಿಎಚ್‌ಡಿ ಮಾಡಿದ್ದು, 2010 ರಿಂದ ಹತ್ತು ಹಲವಾರು ಪ್ರಶಸ್ತಿಗಳನ್ನು ಪಡೆದು ಎಲ್ಲ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾದರಿ ಆಗಿದ್ದಾರೆ ಎಂದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಅಶೋಕ ಕುಮಾರ ಜಾಧವ ಅವರು, ಎಸ್.ಜಿ. ಮಠ ಅವರೊಂದಿಗಿನ ಬಾಂಧವ್ಯವನ್ನು ನೆನಪಿಸಿಕೊಂಡರು.
ಇದೇ ಸಂದರ್ಭದಲ್ಲಿ ವೇದಾಂತ ಕಾಲೇಜನ ಇತರೆ ಶಿಕ್ಷಕರುಗಳಾದ ಹರೀಶ್ ಕುಲಕರ್ಣಿ, ಎಂ.ಎಂ.ಕಿಣಗಿ, ಅಪ್ಪಾಸಾಹೇಬ ಹೂಗಾರ, ಸೂಗೂರೇಶ ಹಲಸಂಗಿ, ಪದ್ಮಶ್ರೀ ಜಾಹಾಗಿರ್ದಾರ, ನಿವೇದಿತಾ ಬಳ್ಳುರಗಿ, ಪೂಜಾ ಪಾಟೀಲ್, ಅನ್ನಪೂರ್ಣ, ಸುಮಾ ಪತ್ತಾರ, ಅಬ್ದುಲ್ ಕರೀಮ್, ಶ್ರೀಹರಿ ಮನಗೂಳಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಆಯಶಾ ಮುಲ್ಲಾ ನಿರೂಪಿಸಿದರು.