ಸಾರಾಂಶ
ಕನ್ನಡಪ್ರಭ ವಾರ್ತೆ ಯರಗಟ್ಟಿ: ಸವದತ್ತಿ ಯಲ್ಲಮ್ಮ ಮತಕ್ಷೇತ್ರ ವ್ಯಾಪ್ತಿಯ ಕೋ.ಶಿವಾಪೂರ, ಯರಝರ್ವಿ, ಬೂದಿಗೊಪ್ಪ, ಆಲದಕಟ್ಟೆ, ಕೆ.ಎಂ.ತಲ್ಲೂರ ಗ್ರಾಮಗಳಲ್ಲಿ ಬಿಜೆಪಿ ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಜಗದೀಶ ಶೆಟ್ಟರ ಅವರ ಪ್ರಚಾರ ನಡೆಸುವ ಮೂಲಕ ಭರ್ಜರಿ ಮತಯಾಚನೆ ಮಾಡಿದರು.
ಈ ವೇಳೆ ಜಗದೀಶ ಶೆಟ್ಟರ ಮಾತನಾಡಿ, ಲೋಕಸಭೆ ಚುನಾವಣೆ ಪೂರ್ಣಗೊಂಡ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಪತನಗೊಳ್ಳುವ ಎಲ್ಲ ಸಾಧ್ಯತೆಗಳಿವೆ ಎಂದು ಭವಿಷ್ಯ ನುಡಿದರು.ಈ ವೇಳೆ ವಿರೂಪಾಕ್ಷ ಮಾಮನಿ, ರತ್ನಕ್ಕ ಮಾಮನಿ, ಬಸಯ್ಯ ಹಿರೇಮಠ, ಸೌರಭ ಚೋಪ್ರಾ, ವಿದ್ಯಾರಾಣಿ ಸೊನ್ನದ, ಅಜಿತ್ ದೇಸಾಯಿ, ವಿನಯ ದೇಸಾಯಿ, ಸಂಜುಕುಮಾರ ನವಲಗುಂದ, ತಾಲೂಕ ಅಧ್ಯಕ್ಷ ಈರಣ್ಣ ಚಂದರಗಿ, ದಾವಲಸಾಬ ಚ್ಪಟಿ, ಪುಂಡಲೀಕ ಮೇಟಿ, ಮಹಾದೇವ ಯಡ್ರಾವಿ, ಕಮಲಾಕ್ಷಿ ದೇಸಾಯಿ, ಸಂಜೀವ ನವಲಗುಂದ, ಮಂಡಲ ಅಧ್ಯಕ್ಷ ಈರಣ್ಣ ಚಂದರಗಿ, ಪುಂಡಲೀಕ ಮೇಟಿ, ಎಫ್.ಎಸ್.ಸಿದ್ದನಗೌಡ್ರ, ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ, ವಿದ್ಯಾರಾಣಿ ಸೊನ್ನದ, ಸುರೇಶ ಮ್ಯಾಕಲ, ಮಹಾರುದ್ರಪ್ಪ ಉಪ್ಪಿನ, ಬಾಬುಗೌಡ ಅಣ್ಣಿಗೇರಿ, ಎ.ವಿ.ಇಂಗಳೆ, ಶಿವಾಜಿ ಬೊಯಿಟೆ, ಸಚಿನ ಹೋಳಿ, ವೀರಭದ್ರಪ್ಪ ಬೆನಕಟ್ಟಿ, ಅದೃಷ್ಯ ಕಾಶಪ್ಪನವರ, ಬಸನಗೌಡ ಅಣ್ಣಿಗೇರಿ, ಸಂಗಪ್ಪ ಶಿವಪೂಜಿ, ರಾಜು ಬಾರ್ಕಿ, ಶಿವಾಜಿ ಇಂಗಳೆ ಸೇರಿದಂತೆ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.