ಸಾರಾಂಶ
ಬುದ್ಧ, ಬಸವ, ಅಂಬೇಡ್ಕರ್ ಸೇರಿದಂತೆ ಎಲ್ಲಾ ದಾರ್ಶನಿಕರು ಸಮಸಮಾಜ ನಿರ್ಮಾಣ, ಸಾಮರಸ್ಯ, ಸಹಬಾಳ್ವೆ, ಶಾಂತಿಯನ್ನು ಬೋಧಿಸಿದ್ದಾರೆ. ಈ ಮಹನೀಯರ ಸಂದೇಶಗಳು ಇವತ್ತಿಗೂ ಕೂಡ ಪ್ರಸ್ತುತವಾಗಿವೆ.
ಕನ್ನಡಪ್ರಭ ವಾರ್ತೆ ಮೈಸೂರು
ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಸಾಂಸ್ಕೃತಿಕ ನಾಯಕ ಬಸವೇಶ್ವರ ಜಯಂತಿ ಅಂಗವಾಗಿ ಜನ ಚೈತನ್ಯ ಫೌಂಡೇಷನ್ ವತಿಯಿಂದ ನಗರದ ವಿದ್ಯಾರಣ್ಯಪುರಂ ಬುದ್ಧ ಭವನದಲ್ಲಿ ಭಾನುವಾರ ಜೈಭೀಮ್ ಗಾಯನೋತ್ಸವ ನಡೆಯಿತು.ಆರ್. ಲಕ್ಷ್ಮಣ್, ಜಾಯ್ಸ್ ವೈಶಾಖ್, ಎ.ಎಸ್. ಪೂರ್ಣಿಮಾ, ತೇಜಾವತಿ, ಎಸ್.ಆರ್. ತಿರುಮಲೇಶ್, ಶಿವಕುಮಾರ್, ಚಿತ್ತಾರ ರಮೇಶ್, ಎನ್. ಲೋಕೇಶ್, ಲೀಲಾವತಿ, ಶಾಂತಕುಮಾರಿ, ವಿಜಯ್ ಆನಂದ್, ರಾಜು ಹೊಸಮನೆ, ಶಿವಕುಮಾರ್, ಸಂಜೀವಯ್ಯ, ಧನರಾಜ್, ಗೋವಿಂದರಾಜ್, ಜಿ .ನರಸಿಂಹ, ಸುಧಾಕರ್, ಬಿ. ಇಂಚರಾ ಗೀತಗಾಯನ ಪ್ರಸ್ತುತಪಡಿಸಿದರು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬುದ್ಧ, ಬಸವ, ಅಂಬೇಡ್ಕರ್ ಸೇರಿದಂತೆ ಎಲ್ಲಾ ದಾರ್ಶನಿಕರು ಸಮಸಮಾಜ ನಿರ್ಮಾಣ, ಸಾಮರಸ್ಯ, ಸಹಬಾಳ್ವೆ, ಶಾಂತಿಯನ್ನು ಬೋಧಿಸಿದ್ದಾರೆ. ಈ ಮಹನೀಯರ ಸಂದೇಶಗಳು ಇವತ್ತಿಗೂ ಕೂಡ ಪ್ರಸ್ತುತವಾಗಿವೆ ಎಂದರು.ಬುದ್ಧ ಪ್ರಾರಂಭಿಸಿದ ಸಮಾನತೆಯ ಸಂದೇಶವನ್ನು ಹನ್ನೇರಡನೆಯ ಶತಮಾನದ ಬಸವಣ್ಣ ಮುಂದುವರೆಸಿದರು. ನಂತರ 20ನೇ ಶತಮಾನದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಇಡೀ ವಿಶ್ವದಲ್ಲಿಯೇ ವಿಶಿಷ್ಟ ಹಾಗೂ ಬೃಹತ್ ಸಂವಿಧಾನವನ್ನು ರೂಪಿಸುವ ಮೂಲಕ ಪ್ರತಿಯೊಬ್ಬ ಭಾರತೀಯರಿಗೂ ಸಮಾನತೆಯಿಂದ ಬದುಕುವ ಹಕ್ಕನ್ನು ಕಲ್ಪಿಸಿಕೊಟ್ಟರು ಎಂದು ಅವರು ಹೇಳಿದರು.
ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾ ಕಾರ್ಯದರ್ಶಿ ಬಿ,ಎಂ. ಮರಪ್ಪ ಮುಖ್ಯ ಅತಿಥಿಗಳಾಗಿದ್ದರು. ಜನಚೈತನ್ಯ ಫೌಂಡೇಷನ್ ಅಧ್ಯಕ್ಷ ಆರ್. ಲಕ್ಷ್ಮಣ್ ಪ್ರಾಸ್ತಾವಿಕ ಭಾಷಣ ಮಾಡಿದರು. ಕೃಷ್ಣಮೂರ್ತಿ, ದೇವಿಆನಂದ್, ಕಾರ್ಯಕ್ರಮ ಆಯೋಜಕರಾದ ಪಿ. ಗುರುಸ್ವಾಮಿ, ಸಬಿತಾ, ಶ್ರೀನಿವಾಸ್, ಜಿ. ಪೀಟರ್, ಟಿ. ಚೇತನ್, .ಪಿ. ಪ್ರಶಾಂತ್, ಡಿ.ಎಲ್. ವಿಕಾಸ್ ಇದ್ದರು.