ಚಿತ್ತಾಪುರದಲ್ಲಿ ಪಥಸಂಚಲನ: ಅವಕಾಶ ಕೋರಿ ಜೈಭೀಮ್‌ ಸೇನೆ ಮನವಿ

| Published : Oct 28 2025, 12:03 AM IST

ಚಿತ್ತಾಪುರದಲ್ಲಿ ಪಥಸಂಚಲನ: ಅವಕಾಶ ಕೋರಿ ಜೈಭೀಮ್‌ ಸೇನೆ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ನ.2ರಂದು ಚಿತ್ತಾಪೂರದಲ್ಲಿ ಆರೆಸ್ಸೆಸ್‌ ಪಥ ಸಂಚಲನ ನಡೆಸಲು ಹೊಸ ಅರ್ಜಿ ಸಲ್ಲಿಸಿ ಅನುಮತಿ ಕೋರಿದ ಬೆನ್ನಲ್ಲೇ ಈಗಾಗಲೇ 7 ಸಂಘಟನೆಗಳು ಅದೇ ದಿನ ತಮಗೂ ಅವಕಾಶ ಕೋರಿ ಅರ್ಜಿ ಸಲ್ಲಿಸಿದ್ದರು. ಇದೀಗ ಜೈ ಭೀಮ ಸೇನೆ ಸಂಘಟನೆಯೂ ಅಂದೇ ಪಥ ಸಂಚಲನಕ್ಕೆ ಕೋರಿ ಮನವಿ ಸಲ್ಲಿಸಿ ಗಮನ ಸೆಳೆದಿದೆ.

ಕಲಬುರಗಿ: ನ.2ರಂದು ಚಿತ್ತಾಪೂರದಲ್ಲಿ ಆರೆಸ್ಸೆಸ್‌ ಪಥ ಸಂಚಲನ ನಡೆಸಲು ಹೊಸ ಅರ್ಜಿ ಸಲ್ಲಿಸಿ ಅನುಮತಿ ಕೋರಿದ ಬೆನ್ನಲ್ಲೇ ಈಗಾಗಲೇ 7 ಸಂಘಟನೆಗಳು ಅದೇ ದಿನ ತಮಗೂ ಅವಕಾಶ ಕೋರಿ ಅರ್ಜಿ ಸಲ್ಲಿಸಿದ್ದರು. ಇದೀಗ ಜೈ ಭೀಮ ಸೇನೆ ಸಂಘಟನೆಯೂ ಅಂದೇ ಪಥ ಸಂಚಲನಕ್ಕೆ ಕೋರಿ ಮನವಿ ಸಲ್ಲಿಸಿ ಗಮನ ಸೆಳೆದಿದೆ. ಸೋಮವಾರ ಜಿಲ್ಲಾಧಿಕಾರಿ ಕಚೇರಿಗೆ ನಿಯೋಗದಲ್ಲಿ ತೆರಳಿದ ಸೇನೆಯ ಮುಖಂಡರು ಮನವಿ ಸಲ್ಲಿಸಿದ್ದಾರೆ. ಹೀಗಾಗಿ ಅ.28ರ ಮಂಗಳವಾರದ ಶಾಂತಿ ಸಭೆ ನಡೆಯುತ್ತಿರುವ ಸಂದರ್ಭದಲ್ಲೇ ಮತ್ತೊಂದು ಸಂಘಟನೆಯಿಂದ ಮನವಿ ಸಲ್ಲಿಕೆಯಾಗಿರೋದು ಗಮನಾರ್ಹವಾಗಿದೆ.

ಸಚಿವ ಪ್ರೀಯಾಂಕ್ ಖರ್ಗೆ ಪರ ಜಯಘೋಷ ಮೊಳಗಿಸಿ ಮನವಿ ಸಲ್ಲಿಸಿದ ಜೈ ಭೀಮ ಸೇನೆ ಕಾರ್ಯಕರ್ತರು, ತಮ್ಮದು ನೋಂದಾಯಿತ ಸಂಘಟನೆಯಾಗಿದ್ದು ನಮಗೆ ಅವಕಾಶ ಕೊಡಿ. ಚಿತ್ತಾಪುರದ ಪ್ರಮುಖ ರಸ್ತೆಗಳಲ್ಲಿ ಶಾಂತಿಯುತವಾಗಿ ಪಥ ಸಂಚಲನ ನಡೆಸುತ್ತೇವೆಂದು ಹೇಳಿದ್ದಾರೆ.

ಈ ಅರ್ಜಿಯೂ ಸೇರಿದಂತೆ ನ. 2ರಂದೇ ಚಿತ್ತಾಪುರದಲ್ಲಿ ಪಥಸಂಚಲನಕ್ಕೆ ಅವಕಾಶ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಕಲಬುರಗಿ ಜಿಲ್ಲಾಧಿಕಾರಿ ಶಾಂತಿ ಸಭೆ ಕರೆದ ನಂತರವೂ ಪಥ ಸಂಚಲನ ಕೋರಿ ಅರ್ಜಿ ಸಲಲಿಕೆ ಹಾಗೇ ಸಾಗಿದೆ.