ಕನ್ನಡಪ್ರಭ ವಾರ್ತೆ ಮೈಸೂರುಬುದ್ಧಿವಂತರನ್ನು ಪ್ರೊತ್ಸಾಹಿಸದಿದ್ದಲ್ಲಿ ದೇಶ ಹಾಳಾಗುತ್ತದೆ ಎಂದು ಮೈಸೂರು ಹಾಗೂ ಕರ್ನಾಟಕ ಮುಕ್ತ ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್‌. ರಂಗಪ್ಪ ಎಚ್ಚರಿಸಿದರು. ಜಮುನಾರಾಣಿ ವಿ. ಮಿರ್ಲೆ ರಚಿಸಿರುವ ಹಾಗೂ ಅವರ ಪುತ್ರಿ ಎಲ್‌.ಎಲ್‌. ವರ್ಷಿಣಿ ಇಂಗ್ಲಿಷ್‌ಗೆ ಅನುವಾದಿಸಿರುವ ''''''''ಜೀವನಯಾನ'''''''' ಕೃತಿಯನ್ನುಮೈಸೂರು ಆರ್ಟ್‌ ಗ್ಯಾಲರಿಯು ಕೃಷ್ಣಮೂರ್ತಿಪುರಂನ ಬಿಎಸ್ಎಸ್‌ ವಿದ್ಯೋದಯ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಬಿಡುಗಡೆ ಮಾಡಿ ಅವರು ಮಾತನಾಡಿ, ಇಡೀ ವಿಶ್ವದಲ್ಲಿಯೇ ಭಾರತದ್ದು ಅತ್ಯುತ್ತಮ ಸಂಸ್ಕೃತಿ ಹಾಗೂ ಭಾರತೀಯರದ್ದು ಅತ್ಯುತ್ತಮ ಬುದ್ಧಿಮತ್ತೆ. ಹೀಗಿರುವಾಗ ಪ್ರೋತ್ಸಾಹ ನೀಡಿದರೆ ದೇಶ ಮುಂದಕ್ಕೆ ಹೋಗಲು ಸಾಧ್ಯ ಎಂದರು.ರಾಜಕಾರಣಿಗಳನ್ನು ಬೆಳೆಸುವ ಬದಲು ವಿಜ್ಞಾನಿಗಳನ್ನು, ವಿದ್ಯಾವಂತರನ್ನು ಬೆಳೆಸಿ, ರಾಜಕಾರಣಕ್ಕಿಂತ ಶಿಕ್ಷಣ ಬಹಳ ಮುಖ್ಯ ಎಂದು ಅವರು ಕಿವಿಮಾತು ಹೇಳಿದರು.ಜಮುನಾರಾಣಿ ಅವರು ''''''''ಜೀವನಯಾನ'''''''' ಕೃತಿಯಲ್ಲಿ ತಮ್ಮ ಮೇಲೆ ಪ್ರಭಾವಬೀರಿದ ವ್ಯಕ್ತಿಗಳ ಶ್ರೇಷ್ಠ ಗುಣಗಳನ್ನು ಇಲ್ಲಿ ದಾಖಲಿಸಿದ್ದಾರೆ. ಒಳ್ಳೆಯವರನ್ನು ನೆನಪಿಸಿಕೊಳ್ಳುನವುದು ಉತ್ತಮ ಕಾರ್ಯ ಎಂದು ಅವರು ಶ್ಲಾಘಿಸಿದರುಅಧ್ಯಕ್ಷತೆ ವಹಿಸಿದ್ದ ಸಾಹಿತಿ ಪ್ರೊ.ಸಿ. ನಾಗಣ್ಣ ಮಾತನಾಡಿ, ಎಂಜಿನಿಯರ್‌ಗಳು ಹೆಚ್ಚು ಹೆಚ್ಚಾಗಿ ಸಾಹಿತ್ಯ, ಲಲಿತಕಲೆಗಳು ಮತ್ತು ಮಾನವಿಕಗಳ ಕಡೆಗೆ ಹೊರಳುತ್ತಿರುವುದು ಈಗಿನ ಟ್ರೆಂಡ್‌. ಜೀವನಯಾನ ಕೃತಿಯ ಅನುವಾದಕಿ ಎಲ್.ಎನ್‌. ವರ್ಷಿಣಿ ಎಂಜಿನಿಯರ್‌ ಆಗಿದ್ದು, ಡಿಜಿಟಲ್‌ ಮಾರ್ಕೆಟಿಂಗ್‌ ತಜ್ಞರಾಗಿದ್ದಾರೆ ಎಂದರು.ಬದುಕಿನ ನಾನಾ ರಂಗಗಳಲ್ಲಿ ತೊಡಗಿಸಿಕೊಂಡಿರುವ ಹಲವು ವ್ಯಕ್ತಿಗಳ ವೈಶಿಷ್ಟ್ಯವನ್ನು ತಮ್ಮ ಬರವಣಿಗೆಯ ಮೂಲಕ ಲೇಖಕರು ಗುರುತಿಸಿದ್ದಾರೆ. ಇದರಿಂದ ನಾವು ಏನು ಕಲಿಯಬಹುದು ಎಂಬುದನ್ನು ತಿಳಿಸಿಕೊಟ್ಟಿದ್ದಾರೆ ಎಂದು ಅವರು ಹೇಳಿದರು.ಕೃತಕ ಬುದ್ಧಿಮತ್ತೆಯಿಂದ ಆಗುವ ಪರಿಣಾಮಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು ಎಂದು ಅವರು ಸಲಹೆ ಮಾಡಿದರು.ಡಾ.ನಳಿನಿ ಚಂದರ್‌ ಕೃತಿ ಕುರಿತು ಮಾತನಾಡಿದರು. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌, ಬಿಎಸ್ಎಸ್‌ ವಿದ್ಯೋದಯ ಸಂಸ್ಥೆ ಮುಖ್ಯಸ್ಥ ಆರ್‌. ವಾಸುದೇವ ಭಟ್‌ ಮಾತನಾಡಿದರು.

ಮೈಸೂರು ಆರ್ಟ್‌ ಗ್ಯಾಲರಿ ಅಧ್ಯಕ್ಷ ಎಲ್‌. ಶಿವಲಿಂಗಪ್ಪ ಸ್ವಾಗತಿಸಿದರು. ಧನಂಜಯ ಕಾರ್ಯಕ್ರಮ ನಿರೂಪಿಸಿದರು. ಲೇಖಕಿ ಜಮುನಾರಾಣಿ ಮಿರ್ಲೆ ಹಾಗೂ ಅನುವಾದಕಿ ಎಲ್.ಎನ್‌. ವರ್ಷಿಣಿ ಇದ್ದರು. ಮರಿಸ್ವಾಮಿ ಸರ್ವಾರ್ಥ ಪ್ರಾರ್ಥಿಸಿದರು.