ಸಾರಾಂಶ
ಪಟ್ಟಣದ ಓಂ ನಗರದಲ್ಲಿರುವ ಜಗನ್ಮಾತಾ ಕಾಳಿಕಾದೇವಿ ದೇವಸ್ಥಾನದ ಜಾತ್ರಾಮಹೋತ್ಸವದಂಗವಾಗಿ ಶುಕ್ರವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಗನ್ಮಾತಾ ಕಾಳಿಕಾದೇವಿ ಪಲ್ಲಕ್ಕಿ ಮಹೋತ್ಸವ ಸಂಭ್ರಮದಿಂದ ಜರುಗಿತು.
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಪಟ್ಟಣದ ಓಂ ನಗರದಲ್ಲಿರುವ ಜಗನ್ಮಾತಾ ಕಾಳಿಕಾದೇವಿ ದೇವಸ್ಥಾನದ ಜಾತ್ರಾಮಹೋತ್ಸವದಂಗವಾಗಿ ಶುಕ್ರವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಗನ್ಮಾತಾ ಕಾಳಿಕಾದೇವಿ ಪಲ್ಲಕ್ಕಿ ಮಹೋತ್ಸವ ಸಂಭ್ರಮದಿಂದ ಜರುಗಿತು.ಜಾತ್ರಾಮಹೋತ್ಸವದಂಗವಾಗಿ ಬೆಳಗ್ಗೆ ಜಗನ್ಮಾತಾ ಕಾಳಿಕಾದೇವಿಯ ಅಲಂಕಾರ ಪೂಜೆ ನೆರವೇರಿತು. ನಂತರ ೯ ಗಂಟೆಗೆ ಕುಂಭಮೇಳ, ಆರತಿ ಕಳಸ ಹಾಗೂ ಛತ್ರಿಚಾಮರ ಪುರವಂತರ ಸೇವೆಯೊಂದಿಗೆ ಸಕಲ ಮಂಗಲ ವಾದ್ಯ ವೈಭವಗಳೊಂದಿಗೆ ಅಲಂಕೃತ ಪಲ್ಲಕ್ಕಿಯಲ್ಲಿ ಜಗನ್ಮಾತಾ ಕಾಳಿಕಾದೇವಿ ಉತ್ಸವ ಮೂರ್ತಿಯ ಪುರ ಪ್ರವೇಶ ಮಾಡುವ ಮೂಲಕ ಬಸವೇಶ್ವರ ದೇವಸ್ಥಾನದ ಬಸವ ತೀರ್ಥ ಬಾವಿಗೆ ಗಂಗಾಸ್ಥಳಕ್ಕೆ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಪಲ್ಲಕ್ಕಿ ಉತ್ಸವ ಜರುಗಿ ಗಂಗಾಸ್ಥಳ ಪೂಜೆ ಮುಗಿಸಿಕೊಂಡು ಮರಳಿ ದೇವಸ್ಥಾನಕ್ಕೆ ಮರಳಿತು. ಜಾತ್ರಾಮಹೋತ್ಸವದಂಗವಾಗಿ ದೇವಸ್ಥಾನದಲ್ಲಿ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಪಲ್ಲಕ್ಕಿ ಉತ್ಸವದಲ್ಲಿ ಕೆ.ಬಿ.ಕಡೆಮನಿ, ಡಾ.ಕರುಣಾಕರ ಚೌಧರಿ, ರಾಜೇಂದ್ರ ಪತ್ತಾರ, ದೇವೇಂದ್ರ ಬಡಿಗೇರ, ಈರಣ್ಣ ಬಡಿಗೇರ, ಮೌನೇಶ ಪತ್ತಾರ, ಮಂಜು ಬಡಿಗೇರ, ಸಂತೋಷ ಬಡಿಗೇರ, ಬಸವರಾಜ ಪತ್ತಾರ, ಬಸವರಾಜ ಬಡಿಗೇರ, ಅಶೋಕ ಬಡಿಗೇರ, ಸುರೇಶ ಬಡಿಗೇರ, ಕೃಷ್ಣಾ ಬಡಿಗೇರ, ಗುರು ಪತ್ತಾರ, ಮಹೇಶ ಪತ್ತಾರ, ಗಾಯತ್ರಿ ಬಡಿಗೇರ, ಪೂರ್ಣಿಮಾ ಚೌಧರಿ, ಅಂಜನಾ ಬಡಿಗೇರ, ವಿಜಯಲಕ್ಷ್ಮೀ ಬಡಿಗೇರ, ಲಕ್ಷ್ಮೀ ಬಡಿಗೇರ, ಅನುಸೂಯಾ ಬಡಿಗೇರ, ಅಶ್ವಿನಿ ಬಡಿಗೇರ, ಪುಷ್ಪಾ ಬಡಿಗೇರ ಸೇರಿದಂತೆ ಇತರರು ಭಾಗವಹಿಸಿದ್ದರು. ಸಂಜೆ ಜಾತ್ರಾಮಹೋತ್ಸವದಂಗವಾಗಿ ಸಂಗೀತ, ರಸಮಂಜರಿ, ಕಾಮಿಡಿ ಶೋ ಕಾರ್ಯಕ್ರಮ ಜರುಗಿತು.