ಸಾರಾಂಶ
ಬಿಸಿಲಿನ ಬೇಗೆಗೂ ಕೂಡ ಹಿಮ್ಮೆಟ್ಟದ ಸಿದ್ದಲಿಂಗೇಶ್ವರನ ಭಕ್ತರು ಮಹಾ ರಥೋತ್ಸವವನ್ನು ಎಳೆಯುವ ಮುಖಾಂತರ ತಮ್ಮ ಇಷ್ಟಾರ್ಥಗಳನ್ನು ಈಡೇರಿಸು ಭಗವಂತ ಎಂದು ಹಣ್ಣು, ದವನ ಎಸೆದು ಸ್ವಾಮಿಯಲ್ಲಿ ಬೇಡಿಕೊಂಡರು,
ಕನ್ನಡಪ್ರಭ ವಾರ್ತೆ ಕುಣಿಗಲ್
ತಾಲೂಕಿನ ಯಡಿಯೂರು ಹೋಬಳಿಯ ಶ್ರೀ ಸಿದ್ದಲಿಂಗೇಶ್ವರರ ತಪೋ ಕ್ಷೇತ್ರ ಕಗ್ಗೆರೆಯಲ್ಲಿ ಸಹಸ್ರಾರು ಭಕ್ತರು ಮತ್ತು ಹಲವಾರು ಸ್ವಾಮೀಜಿಗಳ ಸಮ್ಮುಖದಲ್ಲಿ ವಿಜೃಂಭಣೆಯ ಮಹಾರಥೋತ್ಸವ ನಡೆಯಿತು.ಬಿಸಿಲಿನ ಬೇಗೆಗೂ ಕೂಡ ಹಿಮ್ಮೆಟ್ಟದ ಸಿದ್ದಲಿಂಗೇಶ್ವರನ ಭಕ್ತರು ಮಹಾ ರಥೋತ್ಸವವನ್ನು ಎಳೆಯುವ ಮುಖಾಂತರ ತಮ್ಮ ಇಷ್ಟಾರ್ಥಗಳನ್ನು ಈಡೇರಿಸು ಭಗವಂತ ಎಂದು ಹಣ್ಣು, ದವನ ಎಸೆದು ಸ್ವಾಮಿಯಲ್ಲಿ ಬೇಡಿಕೊಂಡರು,
ದೇವಾಲಯದ ಕಾಮಗಾರಿ ಪ್ರಾರಂಭವಾಗಿದ್ದು, ಪಕ್ಕದ ಪ್ರಾಕಾರಕ್ಕೆ ಸಿದ್ದಲಿಂಗೇಶ್ವರರ ವಿಗ್ರಹವನ್ನು ಸ್ಥಳಾಂತರಿಸಲಾಗಿದೆ, ಆ ಸ್ಥಳವನ್ನು ವಿವಿಧ ಹೂಗಳಿಂದ ಶೃಂಗರಿಸಲಾಗಿತ್ತು, ಪ್ರತಿವರ್ಷದಂತೆ ಸಾಂಪ್ರದಾಯಕವಾಗಿ ಪುಷ್ಪವಾಹನ, ನಂದಿವಾಹನ, ಕೈಯಡ್ಡೆ ಉತ್ಸವ, ಪ್ರಕಾರ ಮಂಟಪೋತ್ಸವ, ನವಿಲು ಉತ್ಸವ ಸೇರಿದಂತೆ ಹಲವಾರು ಉತ್ಸವಗಳು ನಡೆದವು,ಶ್ರೀ ಕ್ಷೇತ್ರದಲ್ಲಿ ಸಾಂಪ್ರದಾಯಿಕವಾಗಿ ನಡೆಯುವ ಷಟ್‌ಸ್ಥಲ ಧ್ವಜದ ಹರಾಜಿನಲ್ಲಿ ಸಂಸದ ಡಿಕೆ ಸುರೇಶ್ ಅವರ ಪರವಾಗಿ ಗೌಡಗೆರೆ ಗ್ರಾಮದ ಜಿ. ಕೆ. ಗಂಗಣ್ಣ 2 ಲಕ್ಷ 26 ಸಾವಿರಕ್ಕೆ ಧ್ವಜವನ್ನು ಪಡೆದರು,
ಕಾರ್ಯಕ್ರಮದಲ್ಲಿ ಯಡಿಯೂರು ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪ, ಎಡೆಯೂರಿನ ಬಾಳೆಹೊನ್ನೂರು ಶಾಖಾಮಠದ ಸ್ವಾಮೀಜಿ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ಅಂಕನಹಳ್ಳಿ ಮಠದ ಶಿವರುದ್ರ ಶಿವಾಚಾರ್ಯ ಸ್ವಾಮೀಜಿ, ಅಂಕನಹಳ್ಳಿ ಮಠದ ಸದಾಶಿವ ಶಿವಾಚಾರ್ಯ ಸ್ವಾಮೀಜಿ, ಕುಣಿಗಲ್ ಹಿರೇಮಠದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಸೇರಿ ಹಲವಾರು ಸ್ವಾಮೀಜಿಗಳು, ಸಾವಿರಾರು ಭಕ್ತರು ಭಾಗವಹಿಸಿದ್ದರು.ಎಳನೀರು ಮಜ್ಜಿಗೆ ಪ್ರಸಾದ ವಿತರಣೆ:
ಪ್ರತಿವರ್ಷಕ್ಕಿಂತ ಈ ಬಾರಿ ಬಿಸಿಲಿನ ತಾಪ ಅಧಿಕವಾಗಿದ್ದು, ಹಲವಾರು ದಾನಿಗಳು ಸಿದ್ದಲಿಂಗೇಶ್ವರನ ಭಕ್ತರಿಗೆ ಎಳನೀರು, ಮಜ್ಜಿಗೆ, ಪಾನಕ, ನೀರು ಕೋಸಂಬರಿ ಸೇರಿ ಹಲವಾರು ಪ್ರಸಾದಗಳನ್ನು ವಿತರಿಸಿದರು,