ಸಾರಾಂಶ
ಕೆರೆ ಹುಳೆತ್ತುವ ಕೆಲಸಕ್ಕೆ ಸಂಬಂಧಪಟ್ಟಂತೆ ಜೆಸಿಬಿ ಯಂತ್ರದಿಂದ ಕೆಲಸ ಮಾಡುತ್ತಿದ್ದನ್ನು ತಡೆದ ಹಿನ್ನೆಲೆಯಲ್ಲಿ ಕೂಲಿಕಾರರನ್ನು ನಿಂದಿಸಿ ಹಲ್ಲೆ ನಡೆಸಿದ ಘಟನೆ ಭಾನುವಾರ ತಾಲೂಕಿನ ಕೋಟಗುಡ್ದ ಗ್ರಾಮದ ಅಕ್ಕಮ್ಮಗಾರಲು (ಹೊಸಕರೆ) ಕೆರೆಯಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಪಾವಗಡ
ಕೆರೆ ಹುಳೆತ್ತುವ ಕೆಲಸಕ್ಕೆ ಸಂಬಂಧಪಟ್ಟಂತೆ ಜೆಸಿಬಿ ಯಂತ್ರದಿಂದ ಕೆಲಸ ಮಾಡುತ್ತಿದ್ದನ್ನು ತಡೆದ ಹಿನ್ನೆಲೆಯಲ್ಲಿ ಕೂಲಿಕಾರರನ್ನು ನಿಂದಿಸಿ ಹಲ್ಲೆ ನಡೆಸಿದ ಘಟನೆ ಭಾನುವಾರ ತಾಲೂಕಿನ ಕೋಟಗುಡ್ದ ಗ್ರಾಮದ ಅಕ್ಕಮ್ಮಗಾರಲು (ಹೊಸಕರೆ) ಕೆರೆಯಲ್ಲಿ ನಡೆದಿದೆ.ಪಾವಗಡ ತಾಲೂಕು ಕೋಟಗುಡ್ಡ ಗ್ರಾಮದ ಚಳ್ಳಕರೆ ರಸ್ತೆ ಮಾರ್ಗದ ಪಕ್ಕದಲ್ಲಿ ಬರುವ ಅಕ್ಕಮ್ಮಗಾರಲು ಕೆರೆಯಲ್ಲಿ ಪ್ರಭಾವಿಗಳು ಜೆಸಿಬಿ ಯಂತ್ರದಿಂದ ಹೂಳೆತ್ತುವ ಕೆಲಸ ಮಾಡುತ್ತಿದ್ದ ವೇಳೆ ಇದೇ ಗ್ರಾಮದ 20ಕ್ಕಿಂತ ಹೆಚ್ಚು ಮಂದಿ ಕೂಲಿಕಾರರು ಸ್ಥಳಕ್ಕೆ ತೆರಳಿ ಜೆಸಿಬಿ ಯಂತ್ರ ಬಳಕೆಯ ಕಾಮಗಾರಿ ತಡೆವೊಡಿದ್ದಾರೆ. ಈ ವೇಳೆ ಜೆಸಿಬಿ ಮಾಲೀಕ ಹಾಗೂ ಈತನ ಪರ ನಿಂತ ಅನೇಕ ಮಂದಿ ಬೆಂಬಲಿಗರು ಬಡಪಾಯಿ ಕೂಲಿಕಾರರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ.
ಇಂದು ಬೆಳಗ್ಗೆ 9ಗಂಟೆಗೆ ರಾಜಕೀಯ ಪ್ರಭಾವದ ವ್ಯಕ್ತಿಯೊಬ್ಬರು ಜೆಸಿಬಿಯಿಂದ ಕೆರೆ ಹೂಳೆತ್ತುವ ಕಾರ್ಯಕ್ಕೆ ಮುಂದಾಗುತ್ತಿದ್ದಂತೆ ಜೆಸಿಬಿಯಿಂದ ಕೆಲಸ ಮಾಡಿಸಿದರೆ ಕೂಲಿಕಾರರಿಗೆ ಕೂಲಿ ಹಣ ಸಿಗುವುದಿಲ್ಲ. ಅಲ್ಲದೇ ಕೆರೆ ಹುಳೆತ್ತುವ ಕೆಲಸ ಜೆಸಿಬಿ ಯಂತ್ರ ಬಳಸುವ ಹಾಗಿಲ್ಲ. ಇದು ಕಾನೂನು ಉಲ್ಲಾಂಘನೆ ಆಗಲಿದೆ ಎಂದು ಹೇಳಿ ಕಾಮಗಾರಿ ತಡೆಯೊಡ್ಡುತ್ತಿದ್ದಂತೆ, ಜೆಸಿಬಿ ಬಳಕೆದಾರರು ಹಾಗೂ ಕೂಲಿಕಾರರ ಮದ್ಯೆ ಗಲಾಟೆ ನಡೆದಿದೆ. ಈ ವೇಳೆ ಕೂಲಿಕಾರರ ಮೇಲೆ ಹಲ್ಲೆ ನಡೆಸಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೂಲಿಕಾರ ಓಬಳೇಶ್ ವೈ.ಎನ್.ಹೊಸಕೋಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಕೂಲಿಕಾರರ ಸಂಘಟನೆಯ ಓಬಳ ನರಸಿಂಹ ಮಾತನಾಡಿ, ನಿಯಮ ಉಲ್ಲಂಘಿಸಿ ಜೆಸಿಬಿಯಂತ್ರದಿಂದ ಕೆಲಸ ಮಾಡುತ್ತಿದ್ದನ್ನು ತಡೆದಿದ್ದ ಹಿನ್ನಲೆಯಲ್ಲಿ ಕೂಲಿಕಾರರ ಮೇಲೆ ಹಲ್ಲೆ ಮತ್ತು ದೌರ್ಜನ್ಯವೆಸಗಿದ್ದು ಈ ಸಂಬಂಧ ಗಾಯದ ವೈದ್ಯಕೀಯ ದೃಢೀಕರಣ ಪತ್ರದೊಂದಿಗೆ, ಪ್ರಭಾವಿಗಳಾದ ರಾಘವೇಂದ್ರ, ಈರಣ್ಣ, ಅಕ್ಷಯ,ಉಮಾಪತಿ ಚಿತ್ತಪ್ಪ, ಹನುಮಂತರಾಯಪ್ಪ ಇತರರ ಹೊಸಕೋಟೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿ ಸ್ವೀಕೃತಿ ಪಡೆದಿರುವುದಾಗಿ ತಿಳಿಸಿದರು.